ಎಂ.ಎಸ್​.ಧೋನಿ ಮೆಂಟರ್ ಆಗಿರೋದು ರವಿಶಾಸ್ತ್ರಿಗೆ ಇಷ್ಟ ಇಲ್ವಾ? ಇಬ್ಬರ ನಡುವೆ ಸಮನ್ವಯತೆ ಕೊರತೆ ಇದ್ಯಾ?

ಎಂ.ಎಸ್​.ಧೋನಿ ಮೆಂಟರ್ ಆಗಿರೋದು ರವಿಶಾಸ್ತ್ರಿಗೆ ಇಷ್ಟ ಇಲ್ವಾ? ಇಬ್ಬರ ನಡುವೆ ಸಮನ್ವಯತೆ ಕೊರತೆ ಇದ್ಯಾ?

ಟಿ20 ವಿಶ್ವಕಪ್​ಗೆ ಟೀಮ್ ಇಂಡಿಯಾ ಪ್ರಕಟವಾಗಿದ್ದೇ ತಡ.. ವಿಶ್ವ ಕ್ರಿಕೆಟ್​​ ಅಂಗಳದಲ್ಲಿ ಎಂ​.ಎಸ್​.ಧೋನಿಯದ್ದೇ ಹವಾ. ಟಿ20 ವಿಶ್ವಕಪ್​ ವೇಳೆ ವಿರಾಟ್​​​ ಪಡೆಗೆ ಚಾಣಾಕ್ಯ ಧೋನಿಯೇ ಮೆಂಟರ್ ಎಂದು ಘೋಷಿಸಿದ್ದೇ ತಡ, ಟೀಮ್ ಇಂಡಿಯಾ ಟಿ20 ವಿಶ್ವಕಪ್​ ಗೆಲ್ಲೋದು ಶತಸಿದ್ಧ ಅಂತಾನೇ ವಿಶ್ಲೇಷಿಸಲಾಗ್ತಿದೆ. ಇದಕ್ಕೆಲ್ಲಾ ಕಾರಣ, ಧೋನಿ ಪ್ರದರ್ಶಿಸುವ ಚಾಕಚಕ್ಯತೆ.

ಹೌದು..! ಭಾರತಕ್ಕೆ ಎರಡು ವಿಶ್ವಕಪ್​ ಗೆದ್ದು ಕೊಟ್ಟಿರುವ ಧೋನಿ, ಟೀಮ್ ಇಂಡಿಯಾದ ಮೆಂಟರ್ ಆಗಿ ನೇಮಕಗೊಂಡಿರುವುದು ತಂಡಕ್ಕೆ ಬಿಗ್​ ಅಡ್ವಾಂಟೇಜ್​.. ಅಷ್ಟೇ ಅಲ್ಲ. ಮೈದಾನದಲ್ಲಿ ಕ್ಯಾಪ್ಟನ್​ ಕೊಹ್ಲಿ, ಸ್ಟ್ರಾಟರ್ಜಿ ರೂಪಿಸಲು ಧೋನಿ ಅನುಭವ ಮತ್ತಷ್ಟು ನೆರವಾಗಲಿದೆ. ಹೀಗಾಗಿ ಟೀಮ್ ಇಂಡಿಯಾ ಮುಕುಟಕ್ಕೆ ವಿಶ್ವಕಪ್ ಗರಿ ಪಕ್ಕಾ ಎಂಬ ನಂಬಿಕೆ ಅಭಿಮಾನಿಗಳಲ್ಲಿ ಮತ್ತಷ್ಟು ಸ್ಟ್ರಾಂಗ್ ಆಗಿದೆ. ಆದ್ರೆ ಧೋನಿಯ ನೇಮಕವೇ ತಿರುಗು ಬಾಣವಾಗುವ ಆತಂಕ ವ್ಯಕ್ತವಾಗ್ತಿದೆ.

blank

ಶಾಸ್ತ್ರಿ – ಧೋನಿ ನಡುವೆ ವೈಮನಸ್ಸಿನ ಆತಂಕ..?
ಧೋನಿ ನೇಮಕದಿಂದ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ರು. ಆದರೆ ಶಾಸ್ತ್ರಿ ಹಾಗೂ ಧೋನಿ ನಡುವೆ ವೈಮನಸ್ಸಿಗೆ ದಾರಿ ಮಾಡಿಕೊಡುತ್ತಾ ಎಂಬ ಅನುಮಾನ ಹುಟ್ಟಿಹಾಕಿದೆ. ಸದ್ಯ ಇವರಿಬ್ಬರ ಸಂಬಂಧ ಉತ್ತಮವಾಗಿದ್ರು, ಇವರಿಬ್ಬರ ಗೇಮ್​ಪ್ಲಾನ್, ಸ್ಟ್ರಾಟರ್ಜಿ ವಿಚಾರದಲ್ಲಿ ವಿಭಿನ್ನ ನಿಲುವು ಹೊಂದಿದ್ದಾರೆ. ಹೀಗಾಗಿ ವಿಶ್ವಕಪ್​ ವೇಳೆ ಇವರಿಬ್ಬರ ನಡುವೆ ಭಿನ್ನಾಭಿಪ್ರಾಯ ಮೂಡುವ ಸಾಧ್ಯತೆಯೂ ದಟ್ಟವಾಗಿದೆ. ಇದು ತಂಡದ ಮೇಲೆ ನೇರ ಪರಿಣಾಮ ಬೀರುವುದನ್ನ ಅಲ್ಲೆಗೆಳೆಯುವಂತಿಲ್ಲ.

ಅಷ್ಟೇ ಅಲ್ಲ.! ಈಗಾಗಲೇ ಹಿರಿಯರಾಗಿ ಶಾಸ್ತ್ರಿ ತಂಡದಲ್ಲಿದ್ದಾರೆ. ಇಂಥಹ ವೇಳೆ ಧೋನಿಯ ಕೈ ಮೇಲಾದರೆ, ಮುಸುಕಿನ ಗುದ್ದಾಟಕ್ಕೆ ಕಾರಣವಾಗುವ ಎಲ್ಲಾ ಸಾಧ್ಯತೆಗಳೂ ಇವೆ. ಇನ್ನೂ ಇದೇ ವಿಚಾರವಾಗಿಯೇ ಮಾತನಾಡಿರೋ ದಿಗ್ಗಜ ಸುನಿಲ್​ ಗವಾಸ್ಕರ್, 2004ರಂತೆ ಘಟನೆ ನೆನೆದು, ಇಂಥಹ ಘಟನೆ ಮರುಕಳಿಸದಿದ್ದರೇ ಸಾಕು ಎಂದಿದ್ದಾರೆ.

blank

‘ಘಟನೆ ಮರುಕಳಿಸದಿರಲಿ’

2004ರಲ್ಲಿ ನಾನು ಟೀಮ್ ಇಂಡಿಯಾ ಕನ್ಸಲ್ಟೆಂಟ್​ ಆಗಿದ್ದೆ. ಆಗ ಕೋಚ್ ಜಾನ್ ರೈಟ್ ನರ್ವಸ್ ಆಗಿದ್ದರು. ನಾನು ಅವರ ಸ್ಥಾನ ಆಕ್ರಮಿಸಿಕೊಳ್ಳುತ್ತೇನೆ ಎಂಬ ಭಾವನೆ ಅವರದಾಗಿತ್ತು. ಆದರೆ, ಈಗಿನ ಪರಿಸ್ಥಿತಿ ಭಿನ್ನವಾಗಿದೆ. ಧೋನಿ ಕೋಚಿಂಗ್ ಬಗ್ಗೆ ಆಸಕ್ತಿ ಇಲ್ಲ ಎಂದು ಶಾಸ್ತ್ರಿಗೆ ಚೆನ್ನಾಗಿ ಗೊತ್ತಿದೆ. ಆದರೆ ಡ್ರೆಸ್ಸಿಂಗ್ ರೂಮ್​​​ನ ಭಾಗವಾಗಿದ್ದಾಗ, ಭಿನ್ನಾಭಿಪ್ರಾಯಗಳು ಮೂಡಸಬಹುದು.

ಸುನಿಲ್ ಗವಾಸ್ಕರ್, ಮಾಜಿ ಕ್ರಿಕೆಟರ್​

ಹೌದು.! ಸುನಿಲ್ ಗವಾಸ್ಕರ್ ಹೇಳಿದಂತೆ ಇಂಥಹದ್ದೊಂದು ಘಟನೆ ಸಂಭವಿಸುವ ಸಾಧ್ಯತೆ ಇದೆ. ಸದ್ಯ ಮೇಲ್​​ನೋಟಕ್ಕೆ ಎಲ್ಲರೂ ಧೋನಿ ಮೆಂಟರ್ ಸೇವೆ ಸಲ್ಲಿಸಲು ಒಪ್ಪಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಇಂಥಹದ್ದೇ ಸಮನ್ವಯತೆ ಇರುತ್ತಾ..? ಇಲ್ವಾ ಅನ್ನೋದನ್ನ ಕಾದುನೋಡಬೇಕಷ್ಟೇ..! ಅದೇನೇ ಆಗಲಿ, ಡ್ರೆಸ್ಸಿಂಗ್ ರೂಮ್​ನಲ್ಲಿ ಯಾವುದೇ ಬಿರುಕು ಮೂಡದೇ ಟೀಮ್ ಇಂಡಿಯಾ ವಿಶ್ವಕಪ್ ಗೆಲ್ಲಲಿ ಅನ್ನೋದೆ ಅಭಿಮಾನಿಗಳ ಆಶಯ.

Source: newsfirstlive.com Source link