ಡೆಲ್ಲಿ ನಾಯಕನಾಗಿ ಪಂತ್ ಮುಂದುವರಿಕೆ.. ಪಂತ್ ಆ್ಯಂಡ್ ಶ್ರೇಯಸ್​ ಅಯ್ಯರ್​ರಲ್ಲಿ ಯಾರು ಬೆಸ್ಟ್​ ಕ್ಯಾಪ್ಟನ್?

ಡೆಲ್ಲಿ ನಾಯಕನಾಗಿ ಪಂತ್ ಮುಂದುವರಿಕೆ.. ಪಂತ್ ಆ್ಯಂಡ್ ಶ್ರೇಯಸ್​ ಅಯ್ಯರ್​ರಲ್ಲಿ ಯಾರು ಬೆಸ್ಟ್​ ಕ್ಯಾಪ್ಟನ್?

14ನೇ ಆವೃತ್ತಿಯ ದ್ವಿತೀಯಾರ್ಧದ ಐಪಿಎಲ್​​​ಗೆ ದಿನಗಣನೆ ಶುರುವಾಗಿದ್ದು, ಎಲ್ಲಾ ತಂಡಗಳು ಭರದ ಸಿದ್ದತೆಯಲ್ಲಿ ನಿರತವಾಗಿವೆ. ಈ ಎಲ್ಲಾ ಬೆಳವಣಿಗೆಗಳ ಕ್ಯಾಪ್ಟನ್ಸಿ ಗೊಂದಲಕ್ಕೆ ಸಿಲುಕಿದ್ದ ಡೆಲ್ಲಿ ಕ್ಯಾಪಿಟಲ್ಸ್, ಈಗ ರಿಷಭ್ ಪಂತ್​ರನ್ನೇ ನಾಯಕನಾಗಿ ಮುಂದುವರಿಸುವ ಮುಂದಾಗಿರುವ ಮಾಹಿತಿ ಲಭ್ಯವಾಗಿದೆ.

ಯಶಸ್ವಿ ನಾಯಕ ಶ್ರೇಯಸ್​ಗೆ ಇಲ್ಲ ಕ್ಯಾಪ್ಟನ್ಸಿ ಪಟ್ಟ..!
12ನೇ ಆವೃತ್ತಿಯ ಮೊದಲಾರ್ಧದ ಬಳಿಕ ನಾಯಕತ್ವದ ಹೊಣೆ ವಹಿಸಿಕೊಂಡಿದ್ದ ಶ್ರೇಯಸ್​​​​​, ಡೆಲ್ಲಿ ಕ್ಯಾಪಿಟಲ್ಸ್​ ತಂಡವನ್ನ ಯಶಸ್ವಿಯಾಗಿ ಮುನ್ನಡೆಸಿದ್ದರು. ಅಷ್ಟೇ ಅಲ್ಲ..! ಪೂರ್ಣಾವಧಿ ಕ್ಯಾಪ್ಟನ್​​ ಆಗಿ ನೇಮಕಗೊಂಡ ಬಳಿಕ ಯಂಗ್ ಡೆಲ್ಲಿಯನ್ನ ಸೆಮಿಫೈನಲ್ಸ್​ಗೆ ಕೊಂಡೊಯ್ದಿದ್ದ ಶ್ರೇಯಸ್, 13ನೇ ಆವೃತ್ತಿಯಲ್ಲಿ ಫೈನಲ್ಸ್​ಗೆ ಕೊಂಡೊಯ್ದಿದ್ದರು. ಆದ್ರೆ, ಇಂಗ್ಲೆಂಡ್ ಸರಣಿಯಲ್ಲಾದ ಇಂಜುರಿ ಕಾರಣ, 14ನೇ ಆ​​ವೃತ್ತಿಯ ಮೊದಲಾರ್ಧಕ್ಕೆ ಅಲಭ್ಯರಾಗಿದ್ದರು. ಈ ವೇಳೆ ರಿಷಭ್​​ ಪಂತ್​​ಗೆ ಪಟ್ಟ ಕಟ್ಟಿದ್ದ ಡೆಲ್ಲಿ ಕ್ಯಾಪಿಟಲ್ಸ್​, ಈಗ ಪಂತ್​​ರನ್ನೇ ಮುಂದುವರಿಲು ಮುಂದಾಗಿದೆ. ಸದ್ಯ ಅಧಿಕೃತ ಹೇಳಿಕೆ ಮಾತ್ರವೇ ಬಾಕಿಯಿದೆ.

ಶ್ರೇಯಸ್​ ಕಮ್​​ಬ್ಯಾಕ್​ ಬಳಿಕವೂ ಪಂತ್ ಮುಂದುವರಿಸಿದ್ದೇಕೆ..?
ಶ್ರೇಯಸ್​ ವಾಪಸ್​ ನಂತರ ಪಂತ್​ ನಾಯಕತ್ವ ಪಟ್ಟ ಕೈಜಾರುತ್ತೆ ಅಂತಾನೇ ಹೇಳಲಾಗಿತ್ತು. ಆದ್ರೆ ಇದು ಸುಳ್ಳಾಗಿದೆ. ಇದಕ್ಕೆ ಪ್ರಮುಖ ಕಾರಣ, ಶ್ರೇಯಸ್​ ಅಯ್ಯರ್ ಇಂಜುರಿ ನಂತರ ಸ್ಪರ್ಧಾತ್ಮಕ ಕ್ರಿಕೆಟ್​ನಿಂದ ದೂರು ಉಳಿದಿದ್ದು.

ಹೌದು, ಇಂಜುರಿಯಾಗಿದ್ದ ಶ್ರೇಯಸ್​​, ಮಾರ್ಚ್​ನಿಂದ ಇದುವರೆಗೆ ಒಂದೇ ಒಂದು ಪಂದ್ಯವನ್ನೂ ಆಡಿಲ್ಲ. ಶ್ರೇಯಸ್ ಫಾರ್ಮ್​ ಬಗ್ಗೆಯೂ ಅನುಮಾನ ಹುಟ್ಟುಹಾಕಿದೆ. ಇದು ಶ್ರೇಯಸ್​ಗೆ ಹಿನ್ನಡೆಯನ್ನ ಉಂಟುಮಾಡಿದೆ. ಮತ್ತೊಂದೆಡೆ ಮೊದಲಾರ್ಧದಲ್ಲಿ ನಾಯಕತ್ವ ಹೊಣೆ ಹೊತ್ತಿದ್ದ ಪಂತ್, ಅದ್ಬುತವಾಗಿ ನಿಭಾಯಿಸಿದ್ದಾರೆ. ತಂಡದಲ್ಲಿ ಶ್ರೇಯಸ್​​ಗಿಂತ ಪ್ರಭಾವಶಾಲಿ ಆಟಗಾರನಾಗಿ ಬೆಳೆದಿದ್ದಾರೆ. ಜೊತೆಗೆ ತಂಡವನ್ನ ಯಶಸ್ವಿಯಾಗಿ ಮುನ್ನಡೆಸುತ್ತಿರುವ ಸಮಯದಲ್ಲಿ, ನಾಯಕತ್ವ ಬದಲಾವಣೆ ಸರಿಯಲ್ಲ ಎಂಬ ನಿಲುವು ಹೊಂದಿರುವ ಡೆಲ್ಲಿ ಫ್ರಾಂಚೈಸಿ, ಪಂತ್​​ರನ್ನೇ ಮುಂದುವರಿಸಿದೆ ಎನ್ನಲಾಗ್ತಿದೆ. ಆದ್ರೆ ಕಿರಿಯ ನಾಯಕನ ಅಡಿಯಲ್ಲಿ ಶ್ರೇಯಸ್​ ನಿಲುವು ಏನು ಅನ್ನೋದು ಮುಂದಿನ ದಿನಗಳಲ್ಲಿ ಗೊತ್ತಾಗಬೇಕಿದೆ.

ಒಂದೆಡೆ ಶ್ರೇಯಸ್​​ಗೆ ವಿಶ್ವಕಪ್​​ ಟಿಕೆಟ್​ ನೀಡದೆ ಬಿಸಿಸಿಐ ಶಾಕ್ ನೀಡಿದ್ರೆ, ಇತ್ತ ಡೆಲ್ಲಿ ಫ್ರಾಂಚೈಸಿ ಕ್ಯಾಪ್ಟನ್ಸಿ ಪಟ್ಟ ನೀಡದೆ ಬಿಗ್ ಶಾಕ್ ಕೂಡ ಕೊಟ್ಟಿದೆ. ಆದ್ರೆ ಇದೆಲ್ಲಕ್ಕೂ ಶ್ರೇಯಸ್​ ಹೇಗೆ ಉತ್ತರಿಸ್ತಾರೆ..? ಪಂತ್ ನಾಯಕತ್ವದ ಪಟ್ಟವನ್ನ ಹೇಗೆ ಸಮರ್ಥಿಸಿಕೊಳ್ಳುತ್ತಾರೆ ಅನ್ನೋದು ಕಾದುನೋಡಬೇಕಿದೆ.

Source: newsfirstlive.com Source link