ನಟ ಸಾಯಿ ಧರಮ್​​ ತೇಜ್​​​ಗೆ ಚಿಕಿತ್ಸೆ; ಅಪೋಲೋ ಆಸ್ಪತ್ರೆಗೆ ಭೇಟಿ ಕೊಟ್ಟ ಚಿರಂಜೀವಿ ಹೇಳಿದ್ದೇನು?

ನಟ ಸಾಯಿ ಧರಮ್​​ ತೇಜ್​​​ಗೆ ಚಿಕಿತ್ಸೆ; ಅಪೋಲೋ ಆಸ್ಪತ್ರೆಗೆ ಭೇಟಿ ಕೊಟ್ಟ ಚಿರಂಜೀವಿ ಹೇಳಿದ್ದೇನು?

ಟಾಲಿವುಡ್​​ ಖ್ಯಾತ ನಟ ಚಿರಂಜೀವಿ ವಂಶದ ಕುಡಿ ಸಾಯಿ ಧರಮ್​​​ ತೇಜ್ ಅವರ ಬೈಕ್​​​​ ಅಪಘಾತಕ್ಕೀಡಾಗಿದೆ. ಪರಿಣಾಮ ಸಾಯಿ ಧರಮ್​​ ತೇಜ್​​ ಕೋಮಾ ಸ್ಥಿತಿಗೆ ತಲುಪಿದ್ದು, ಹೈದರಾಬಾದಿನ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅಪೋಲೋ ಆಸ್ಪತ್ರೆಗೆ ಭೇಟಿ ನೀಡಿದ ಬಳಿಕ ಈ ಸಂಬಂಧ ಮೆಗಸ್ಟಾರ್​​​ ಚಿರಂಜೀವಿ ಟ್ವೀಟ್​​​​ ಮಾಡಿದ್ದು, ಸಾಯಿ ಧರಮ್​​ ತೇಜ್​​​ ಆರೋಗ್ಯ ಸ್ಥಿರವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ಟಾಲಿವುಡ್ ನಟ ಸಾಯಿ ಧರಮ್ ತೇಜ್ ಬೈಕ್ ಆ್ಯಕ್ಸಿಡೆಂಟ್.. ಆಸ್ಪತ್ರೆಗೆ ದಾಖಲು

ಕೆಲವು ಗಂಟೆಗಳ ಹಿಂದೆ ಸಾಯಿ ಧರಮ್​​ ತೇಜ್ ಅಪಘಾತಕ್ಕೀಡಾಗಿದ್ದಾನೆ, ಸಣ್ಣಪುಟ್ಟ ಗಾಯಾಗಳಾಗಿವೆ. ಅಭಿಮಾನಿಗಳು ಮತ್ತು ಸ್ನೇಹಿತರು ಯಾವುದೇ ಆತಂಕಪಡುವ ಅಗತ್ಯವಿಲ್ಲ. ಸಾಯಿ ಧರಮ್​​ ತೇಜ್​​ಗೆ ನುರಿತ ವೈದ್ಯರ ತಂಡ ಚಿಕಿತ್ಸೆ ನೀಡುತ್ತಿದೆ. ಸದ್ಯ ಆರೋಗ್ಯ ಸ್ಥಿರವಾಗಿದ್ದು, ಇನ್ನೆರಡು ದಿನಗಳಲ್ಲಿ ಸಂಪೂರ್ಣ ಸುಧಾರಿಸಲಿದೆ ಎಂದು ಚಿರಂಜೀವಿ ತಮ್ಮ ಟ್ವಿಟರ್​​​​​ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

Source: newsfirstlive.com Source link