ರೈತನ ಮನೆಗೆ ನುಗ್ಗಿ 1,48,000 ನಗದು, ಲಕ್ಷಾಂತರ ಮೌಲ್ಯದ ಚಿನ್ನಾಭರಣ ದರೋಡೆ; ಖತರ್ನಾಕ್​​ ಕಳ್ಳರ ಅರೆಸ್ಟ್​

ರೈತನ ಮನೆಗೆ ನುಗ್ಗಿ 1,48,000 ನಗದು, ಲಕ್ಷಾಂತರ ಮೌಲ್ಯದ ಚಿನ್ನಾಭರಣ ದರೋಡೆ; ಖತರ್ನಾಕ್​​ ಕಳ್ಳರ ಅರೆಸ್ಟ್​

ಬೆಂಗಳೂರು: ರೈತರೊಬ್ಬರ ಮನೆಗೆ ಕಳ್ಳರ ಗ್ಯಾಂಗ್​​ವೊಂದು ದರೋಡೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಆಗಸ್ಟ್​ 20ನೇ ತಾರೀಕಿನಂದು ರಾತ್ರಿ 9 ಗಂಟೆ ಸುಮಾರಿಗೆ ರೈತರೊಬ್ಬರೇ ಇದ್ದಾಗ ಮನೆಗೆ ನುಗ್ಗಿ ಈ ಕೃತ್ಯ ಎಸಗಿದ್ದಾರೆ.

ಬೆಳ್ಳಂದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಮನೆಯಲ್ಲೇ ರೈತ ಲಕ್ಷ್ಮಣ ಒಬ್ಬರೇ ವಾಸವಿದ್ದರು. ಆಗ ಆರೋಪಿಗಳು ರಾತ್ರಿ 9 ಗಂಟೆಗೆ ಸರಿಯಾಗಿ ಮನೆ ಬಾಗಿಲು ತಟ್ಟಿದ್ದರು. ಯಾರೋ ಪರಿಚಿತರು ಇರಬಹುದು ಎಂದು ಲಕ್ಷ್ಮಣ ಬಾಗಿಲು ತೆಗೆದಿದ್ದಾರೆ.

ಇನ್ನು, ಲಕ್ಷ್ಮಣ ಬಾಗಿಲು ತೆಗಿದಿದ್ದೇ ತಡ ಖತರ್ನಾಕ್​​ ಕಳ್ಳರು ಗ್ಯಾಂಗ್​​ ಮನೆಗೆ ನುಗ್ಗಿದೆ. ರೈತನ ಬಾಯಿಗೆ ಪಟ್ಟಿ ಹಾಕಿ, ಕೈ ಕಾಲು ಕಟ್ಟಿ, ಹಿಗ್ಗಾಮುಗ್ಗಾ ಹೊಡೆದು ಆರೋಪಿಗಳು ದರೋಡೆ ಮಾಡಿದ್ದಾರೆ.

ತನ್ನ ಇಬ್ಬರು ಮಕ್ಕಳಿಗಾಗಿ ಇಟ್ಟಿದ್ದ 1,48,000 ನಗದು ಮತ್ತು ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ದೋಚಿಕೊಂಡು ಎಸ್ಕೇಪ್​​ ಆಗಿದ್ದಾರೆ. ಅಕ್ಕಪಕ್ಕದ ಮನೆಯವರು ಬರುತ್ತಿದ್ದಂತೆಯೇ ತಪ್ಪಿಸಿಕೊಂಡು ಪರಾರಿಯಾಗಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದಾರೆ.

ಈ ಸಂಬಂಧ ಬೆಳ್ಳಂದೂರು ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಆರೋಪಿಗಳನ್ನು ಅರೆಸ್ಟ್​ ಮಾಡಿದ್ದಾರೆ.

ಇದನ್ನೂ ಓದಿ: ಸಾಲ ಬಾದೆ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡ ರೈತ

Source: newsfirstlive.com Source link