ಅಪೋಲೋ ಆಸ್ಪತ್ರೆಯಿಂದ ಹೆಲ್ತ್​​​​​ಬುಲೆಟಿನ್- ಸಾಯಿ ಧರಮ್​ ತೇಜ್ ಆರೋಗ್ಯ ಸ್ಥಿತಿ ಹೇಗಿದೆ?

ಅಪೋಲೋ ಆಸ್ಪತ್ರೆಯಿಂದ ಹೆಲ್ತ್​​​​​ಬುಲೆಟಿನ್- ಸಾಯಿ ಧರಮ್​ ತೇಜ್ ಆರೋಗ್ಯ ಸ್ಥಿತಿ ಹೇಗಿದೆ?

ಹೈದರಾಬಾದ್​: ಟಾಲಿವುಡ್​ ನಟ ಸಾಯಿ ಧರಮ್​ ತೇಜ್​ ಚಲಿಸುತ್ತಿದ್ದ ಬೈಕ್​ ಅಪಘಾತಕ್ಕೀಡಾಗಿದೆ. ತಡರಾತ್ರಿ ಹೈದ್ರಾಬಾದ್​ನ ದುರ್ಗಮ್​​ಚೆರುವು ಕೇಬಲ್ ಬ್ರಿಡ್ಜ್ ಬಳಿ ಸ್ವಾಂಕಿ ಸ್ಪೋಟ್ಸ್ ಬೈಕ್​​ನಲ್ಲಿ ನಟ ಬರ್ತಿದ್ದ ವೇಳೆ ಸ್ಕಿಡ್ ಆಗಿ ಬಿದ್ದಿದ್ದಾರೆ. ಕೆಳಗೆ ಬಿದ್ದ ಪರಿಣಾಮ ಗಾಯಗೊಂಡಿರುವ ತೇಜ್​​ ಅವರಿಗೆ, ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯ್ತು. ಇನ್ನೂ ಹೆಚ್ಚಿನ ಚಿಕಿತ್ಸೆಗಾಗಿ ಅಪೊಲೋ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗಿದೆ.

ಈ ಕುರಿತು ಹೆಲ್ತ್​​ಬುಲೆಟಿನ್​​ ಬಿಡುಗಡೆ ಮಾಡಿರುವ ಅಪೋಲೋ ಆಸ್ಪತ್ರೆ, ಸಾಯಿ ಧರಮ್​​​ ಚೇಜ್​​ ಅವರ ಆರೋಗ್ಯ ಸ್ಥಿತಿ ಉತ್ತಮವಾಗಿದೆ. ಯಾವುದೇ ಪ್ರಾಣಾಪಯದ ಆತಂಕವಿಲ್ಲ. ದೇಹದ ಎಲ್ಲಾ ಅಂಗಾಂಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಮುಂದಿನ 24 ಗಂಟೆಗಳ ಕಾಲ ಅವರ ಅವರ ಮೇಲೆ ನಿಗಾ ವಹಿಸಲಾಗುತ್ತಿದೆ. ಮುಂದಿನ ಹೆಲ್ತ್​​ಬುಲೆಟಿನ್​​ಅನ್ನು ನಾಳೆ ಬಿಡುಗಡೆ ಮಾಡುತ್ತೇವೆ ಮಾಹಿತಿ ನೀಡಿದ್ದಾರೆ.

ಅಪಘಾತದಲ್ಲಿ ನಟ ಸಾಯಿ ಧರಮ್ ತೇಜ್​​ ಅವರ ಬೆನ್ನು ಮೂಳೆ, ಎದೆ ಭಾಗಕ್ಕೆ ಗಾಯವಾಗಿದೆ ಎನ್ನಲಾಗಿದೆ. ಸದ್ಯ ಆಕ್ಸಿಡೆಂಟ್ ವಿಚಾರ ತಿಳಿಯುತ್ತಿದ್ದಂತೆ, ಅವರ ಕುಟುಂಬಸ್ಥರು, ಸ್ನೇಹಿತರು ಆಸ್ಪತ್ರೆಗೆ ದೌಡಾಯಿಸಿದ್ದು, ಅಭಿಮಾನಿಗಳು ಸೇರಿದಂತೆ ಇಡೀ ಟಾಲಿವುಡ್ ಚಿತ್ರರಂಗ, ನಟನ ಚೇತರಿಕೆಗೆ ಪ್ರಾರ್ಥಿಸಿದೆ.

blank

Source: newsfirstlive.com Source link