ಶೋಭಾ ಕರಂದ್ಲಾಜೆ ಸೇರಿದಂತೆ ಕೇಂದ್ರದ 70 ಸಚಿವರು ಜಮ್ಮು ಕಾಶ್ಮೀರಕ್ಕೆ ಭೇಟಿ

ಶೋಭಾ ಕರಂದ್ಲಾಜೆ ಸೇರಿದಂತೆ ಕೇಂದ್ರದ 70 ಸಚಿವರು ಜಮ್ಮು ಕಾಶ್ಮೀರಕ್ಕೆ ಭೇಟಿ

ನವದೆಹಲಿ: ಮುಂದಿನ 9 ವಾರಗಳಲ್ಲಿ 70 ಕೇಂದ್ರ ಸಚಿವರು ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಲಿದ್ದಾರೆ ಅಂತ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್​ ತೋಮರ್​ ಮಾಹಿತಿ ನೀಡಿದ್ದಾರೆ.

ಕೇಂದ್ರ ಸರ್ಕಾರದ ಸಂಪರ್ಕ ಕಾರ್ಯಕ್ರಮವನ್ನು ಕಣಿವೆ ರಾಜ್ಯದಲ್ಲಿ ಹಮ್ಮಿಕೊಳ್ಳಲಾಗಿದ್ದು, ಕನಿಷ್ಠ 10 ಸಚಿವರು ಮುಂದಿನ 7 ದಿನಗಳ ಒಳಗೆ ಜಮ್ಮು ಮತ್ತು ಕಾಶ್ಮೀರಕ್ಕೆ ತೆರಳಲಿದ್ದಾರೆ. ಸಚಿವರ ಪಟ್ಟಿಯಲ್ಲಿ ಕೃಷಿ ಸಚಿವ ಸೇರಿದಂತೆ ಕೈಲಾಶ್​ ಚೌಧರಿ, ಶೋಭಾ ಕರಂದ್ಲಾಜೆ, ಅಜಯ್​ ಭಟ್​, ಜೋನ್​ ಬರ್ಲಾ, ದೇವು ಸಿನ್ಹಾ ಚೌಹಾಣ್​, ಸೋಮ್​ ಪ್ರಕಾಶ್​, ಕ್ರಿಷನ್​ ಪಾಲ್​ ಹಾಗೂ ಇತರರು ಭೇಟಿ ನೀಡಿ ಕೃಷಿ ಹಾಗೂ ವಿಜ್ಞಾನ ಕ್ಷೇತ್ರಕ್ಕೆ ಸಂಬಂಧಪಟ್ಟ ತಜ್ಞರನ್ನ ಭೇಟಿಯಾಗಲಿದ್ದಾರೆ.

Source: newsfirstlive.com Source link