ಸುಮಲತಾ ಅಂಬರೀಶ್ ಮನೆಯಲ್ಲಿಯೋ ಗಣೇಶ ಮೂರ್ತಿಗಳ ಕಲೆಕ್ಷನ್​​ ನೋಡಿದ್ರೆ ಅಚ್ಚರಿಗೊಳ್ತೀರಿ!

ಸುಮಲತಾ ಅಂಬರೀಶ್ ಮನೆಯಲ್ಲಿಯೋ ಗಣೇಶ ಮೂರ್ತಿಗಳ ಕಲೆಕ್ಷನ್​​ ನೋಡಿದ್ರೆ ಅಚ್ಚರಿಗೊಳ್ತೀರಿ!

ಸ್ಯಾಂಡಲ್​ವುಡ್​ನ ಹಿರಿಯ ನಟಿ ಮತ್ತು ಮಂಡ್ಯ ಸಂಸದೆ ಸುಮಲತಾ ಅಂಬರೀಶ್​ ಗಣೇಶ ಹಬ್ಬದ ಪ್ರಯುಕ್ತ ತಮ್ಮ ಮನೆಯಲ್ಲೆ ಸರಳವಾಗಿ ಗಣೇಶ ಚತುರ್ಥಿ ಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಇನ್ನು ಸೋಶಿಯಲ್​ ಮೀಡಿಯಾದಲ್ಲಿ ಸದಾ ಆ್ಯಕ್ಟವ್​ ಆಗಿರೋ ಸುಮಲತಾ ಪುತ್ರ ಅಭಿಷೇಕ್​ ಜೊತೆಗಿರುವ ಫೋಟೊಗಳನ್ನು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಹಬ್ಬದ ಸಂಭ್ರಮದ ಫೋಟೋಗಳನ್ನು ಶೇರ್​ ಮಾಡಿದ ಬಳಿಕ ಸುಮಲತಾ ತಾವು ಸಂಗ್ರಹಿಸಿದ ಗಣೇಶನ ವಿಗ್ರಹಗಳ ವಿಡಿಯೋವನ್ನು ಕೂಡ ಹಂಚಿಕೊಂಡಿದ್ದಾರೆ. ಇನ್ನು ಸುಮಲತಾ ಅವರು ಸುಮಾರು 20 ಕ್ಕೂ ಹೆಚ್ಚು ಬೆಳ್ಳಿ ಗಣೇಶನ ವಿಗ್ರಹಗಳನ್ನು ಸಂಗ್ರಹ ಮಾಡಿದ್ದಾರೆ. ಸದ್ಯ ಸುಮಲತಾ ರಾಜಕೀಯ ಮತ್ತು ಸಿನಿಮಾ ಕ್ಷೇತ್ರದಲ್ಲಿ ಸಖತ್​ ಬ್ಯುಸಿಯಾಗಿದ್ದಾರೆ.

Source: newsfirstlive.com Source link