ಚಿರು ಲಾಸ್ಟ್​​ ನನಗೆ ಹೇಳಿದ್ದು ಒಂದೇ ಮಾತು -ಮೇಘನಾ ರಾಜ್​​​ ಸರ್ಜಾ

ಚಿರು ಲಾಸ್ಟ್​​ ನನಗೆ ಹೇಳಿದ್ದು ಒಂದೇ ಮಾತು -ಮೇಘನಾ ರಾಜ್​​​ ಸರ್ಜಾ

ಸ್ಯಾಂಡಲ್​ವುಡ್​ ನಟಿ ಮೇಘನಾ ರಾಜ್​ ಸರ್ಜಾ ಸುಮಾರು ಎರಡು ವರ್ಷಗಳ ಬಳಿಕ ಮೊದಲ ಬಾರಿಗೆ ನ್ಯೂಸ್​ಫಸ್ಟ್​ನ ವಿಶೇಷ ಸಂದರ್ಶನದಲ್ಲಿ ಮನಬಿಚ್ಚಿ ಮಾತನಾಡಿದ್ದಾರೆ. ಚಿರು, ಮೇಘನಾರನ್ನ ಅಗಲಿದ ದಿನ ನಿಜಕ್ಕೂ ಏನ್ನಾಗಿತ್ತು ಅಂತ ನಟಿ ಮೇಘನಾ ರಾಜ್​ ಹೇಳಿದ್ದಾರೆ.

ಹೌದು, ಮೇಘನಾರನ್ನ ಚಿರು ಯಾಕೆ ಇಷ್ಟು ಬೇಗ ಬಿಟ್ಟು ಹೋದ್ರು ಅಂತ ಮೇಘನಾ ಈಗಲೂ ದೇವರ ಹತ್ರ ಪ್ರಶ್ನೆ ಮಾಡುತ್ತಾರೆ ಅಂತೆ. ಜೂನ್​ 7 ನೇ ತಾರೀಖು ಭಾನುವಾರ ಮನೆಯಲ್ಲಿ ಎಲ್ಲರೂ ವಿಕೇಂಡ್ ಮೂಡ್​ನಲ್ಲೇ ಇದ್ರರಂತೆ. ಅವತ್ತು ಮೇಘನಾರ ತಂದೆ ಸುಂದರ್​ ರಾಜ್ ಅವರ ಸಾಕು ನಾಯಿಯನ್ನು ಕೂಡ ಕರೆದುಕೊಂಡು ಚಿರು ಮನೆಗೆ ಬಂದಿದ್ರಂತೆ.

ಮನೆಯವರೆಲ್ಲರೂ ಒಟ್ಟಿಗೆ ಊಟನ್ನು ಮಾಡಿದ್ರು, ಆದ್ರೆ ಚಿರು ಮಾತ್ರ ಅವತ್ತು ಲೇಟಾಗಿ ಎಂದಿದ್ದರಂತೆ. ಸುಂದರ್​ರಾಜ್ ಅವರಿಗೆ ಬಾಯ್​ ಮಾಡಿ ಮನೆ ಒಳಗೆ ಬರುವಾಗ ಚಿರು ಸೋಫಾ ಮೇಲೆ ಹಾಗೇ ಕುಸಿದು ಬಿದ್ದಿದ್ರಂತೆ ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಚಿರು, ಮೇಘನಾಗೆ ಧೈರ್ಯ ತುಂಬಿ “ನನಗೆ ಏನಾಗಿಲ್ಲ ನಿನ್ನು ಟೆನ್ಶನ್​ ಮಾಡ್ಕೋ ಬೇಡ.. ನೀನು ಆರಾಮಾಗಿರು ಅಂದಿದ್ರಂತೆ.. ಇದೇ ಚಿರು, ಮೇಘನಾರಿಗೆ ಹೇಳಿದ ಕೊನೆ ಮಾತ್ತಾಗಿತ್ತು ಅಂತಾ ಮೇಘನಾ ರಾಜ್​​ ಸರ್ಜಾ ಹೇಳಿದ್ದಾರೆ.

Source: newsfirstlive.com Source link