ಮೀನುಗಾರಿಕೆಗೆ ತೆರಳಿದ್ದ ಗಿಲ್ ನೆಟ್ ಬೋಟ್​​ಗೆ ಅವಘಡ; ಓರ್ವ ನಾಪತ್ತೆ

ಮೀನುಗಾರಿಕೆಗೆ ತೆರಳಿದ್ದ ಗಿಲ್ ನೆಟ್ ಬೋಟ್​​ಗೆ ಅವಘಡ; ಓರ್ವ ನಾಪತ್ತೆ

ಮಂಗಳೂರು: ಮೀನುಗರಿಕೆಗೆ ತೆರಳಿದ್ದ ಗಿಲ್ ನೆಟ್ ಬೋಟ್ ಅವಘಡ ಸಂಭವಿಸಿದ ಪರಿಣಾಮ ಓರ್ವ ನಾಪತ್ತೆಯಾಗಿದ್ದಾನೆ. ಮಂಗಳೂರು ಹೊರವಲಯದ ಪಣಂಬೂರು ಬೀಚ್​​ ಬಳಿ ಮೀನುಗಾರನೊಬ್ಬ ನಾಪತ್ತೆಯಾದ ಘಟನೆ ನಡೆದಿದೆ.

ಪಣಂಬೂರು ಬೀಚ್ ಸಮೀಪ ಮೀನುಗಾರಿಕೆಗೆ ತೆರಳಿದ್ದ ಗಿಲ್ ನೆಟ್ ದೋಣಿಗೆ ಬೃಹತ್ ಅಲೆ ಅಪ್ಪಳಿಸಿದೆ. ಸಮುದ್ರಕ್ಕೆ ಎಸೆಯಲ್ಪಟ್ಟ ದೋಣಿಯಲ್ಲಿದ್ದ 5 ಮಂದಿ ಮೀನುಗಾರರ ಪೈಕಿ ಒಬ್ಬ ಶರೀಫ್​ ಎಂಬಾತ ನಾಪತ್ತೆಯಾಗಿದ್ದಾನೆ.

ಇನ್ನು, ನಾಲ್ವರನ್ನು ರಕ್ಷಿಸಿದ ಸ್ಥಳೀಯ ಮೀನುಗಾರರು ಓರ್ವನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಇದನ್ನೂ ಓದಿ: 3 ದಿನಗಳಲ್ಲಿ ಪ್ರಾರಂಭವಾಗಲಿದೆ ಅಧಿವೇಶನ; ಜಾತಿಗಣತಿ ಗುರಾಣಿ ಪ್ರಯೋಗಲಿಸಲಿದ್ದಾರಂತೆ ಸಿದ್ದರಾಮಯ್ಯ

Source: newsfirstlive.com Source link