ಅಮಾಯಕರನ್ನು ಟಾರ್ಗೆಟ್​​ ಮಾಡಿ ಮೊಬೈಲ್​​​, ಚೈನ್​​​ ಕದಿಯುತ್ತಿದ್ದ ಖತರ್ನಾಕ್​​ ಕಳ್ಳನ ಬಂಧನ

ಅಮಾಯಕರನ್ನು ಟಾರ್ಗೆಟ್​​ ಮಾಡಿ ಮೊಬೈಲ್​​​, ಚೈನ್​​​ ಕದಿಯುತ್ತಿದ್ದ ಖತರ್ನಾಕ್​​ ಕಳ್ಳನ ಬಂಧನ

ಬೆಂಗಳೂರು: ಮೊಬೈಲ್​​ ಮತ್ತು ಚೈನ್​​​ ಸ್ನಾಚ್​ ಮಾಡುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಕದ್ದ ಬೈಕ್​​​ನಲ್ಲಿ ಅಮಾಯಕರನ್ನೇ ಟಾರ್ಗೆಟ್​​ ಮಾಡುತ್ತಿದ್ದ ಸರಗಳ್ಳ ಏಳುಮಲೈ ಬಂದಿತ ಆರೋಪಿ.

ಏಳುಮಲೈ ಗಾರೆ ಕೆಲಸ‌ ಮಾಡುತ್ತಿದ್ದ. ಮೊದಲಿಗೆ ಬೈಕ್ ಕಳ್ಳತನ ಮಾಡಿದ್ದ ಈತ ನಂತರ ಮೊಬೈಲ್​​ ಮತ್ತು ಚೈನ್​​ ಕದಿಯಲು ಶುರು ಮಾಡಿದ. ಈಗ ತಿಲಕ್​​ ನಗರ ಪೊಲೀಸರು 175 ಸಿಸಿಟಿವಿ ಪರಿಶೀಲಿಸಿದ ಬಳಿಕ ಆರೋಪಿಯನ್ನು ಬಂಧಿಸಿದ್ದಾರೆ.

ಬಂಧಿತನಿಂದ 11 ಫೋನ್ 70 ಗ್ರಾಂ ತೂಕದ ಎರಡು ಮಾಂಗಲ್ಯ ಸರ ವಶಕ್ಕೆ ಪಡೆಯಲಾಗಿದೆ. ಕೃತ್ಯಕ್ಕೆ ಬಳಸಿದ್ದ ಕಳವು ಮಾಡಿದ್ದ ಎರಡು ಬೈಕ್​​ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ: ಗಣೇಶ ವಿಸರ್ಜನೆ ವೇಳೆ ಪೊಲೀಸರನ್ನೇ ತಳ್ಳಾಡಿದ ಯುವಕರು

Source: newsfirstlive.com Source link