ಅರ್ಜುನ್ ಸರ್ಜಾ ವಿರುದ್ಧ ಶೃತಿ ಹರಿಹರನ್ ಮೀಟೂ ಆರೋಪ ಕೇಸ್​​ಗೆ ಮರು ಜೀವ- ಈ ಮೂವರಿಗೆ ಸದ್ಯದಲ್ಲೇ ನೋಟಿಸ್​​..!​​​

ಅರ್ಜುನ್ ಸರ್ಜಾ ವಿರುದ್ಧ ಶೃತಿ ಹರಿಹರನ್ ಮೀಟೂ ಆರೋಪ ಕೇಸ್​​ಗೆ ಮರು ಜೀವ- ಈ ಮೂವರಿಗೆ ಸದ್ಯದಲ್ಲೇ ನೋಟಿಸ್​​..!​​​

ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ವಿರುದ್ಧ ಶೃತಿ ಹರಿಹರನ್ ಮೀಟೂ ಆರೋಪ ಕೇಸ್​​ಗೆ ಮರು ಜೀವ ಬಂದಿದೆ. 2018ರಲ್ಲಿ ಇಡೀ ಸ್ಯಾಂಡಲ್​​ವುಡ್​ನಲ್ಲಿ ಭಾರೀ ಸಂಚಲನ ಸೃಷ್ಟಿಸಿದ್ದ ಈ ಕೇಸ್​ಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಸೂಚನೆ ಮೇರೆಗೆ ಮರು ಜೀವ ಸಿಕ್ಕಿದೆ.

ಎಲ್ಲಾ ಪೆಂಡಿಂಗ್ ಕೇಸುಗಳ ಅಂತಿಮ ರಿಪೋರ್ಟ್ ನೀಡಬೇಕು. ಹಾಗಾಗಿ ಉಳಿದಿರುವ ಎಲ್ಲಾ ಹಳೆ ಕೇಸುಗಳ ಬೇಗ ತನಿಖೆ ಮುಗಿಸಿ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಸೂಚನೆ ನೀಡಿದ್ದಾರೆ. ಹೀಗೆ ಸೂಚನೆ ನೀಡಿದ್ದೇ ತಡ ನಗರ ಪೊಲೀಸ್ ಇಲಾಖೆ ಚುರುಕುಗೊಂಡಿದೆ. ಸದ್ಯ ಹಳೆ ಕೇಸ್ ಫೈಲ್ ಕೈಗೆತ್ತಿಕೊಂಡು ಪೊಲೀಸರು ತನಿಖೆ ಪುನಾರಂಭ ಮಾಡಿದ್ದಾರೆ.

3 ವರ್ಷ ಕಳೆದ್ರೂ ಪ್ರಕರಣದ ಸಂಪೂರ್ಣ ತನಿಖೆ ಮುಗಿದಿಲ್ಲ. ಅಂತಿಮ ರಿಪೋರ್ಟ್ ಹಾಕಲು ಕಬ್ಬನ್ ಪಾರ್ಕ್ ಪೊಲೀಸರು ಕಾಯುತ್ತಿದ್ದಾರೆ. ಸಿನಿಮಾ ನಿರ್ದೇಶಕ ಅರುಣ್ ವೈದ್ಯನಾಥನ್, ಕ್ಯಾಮೆರಾ ಮ್ಯಾನ್ ಅರವಿಂದ್ ಕೃಷ್ಣ, ನಿರ್ಮಾಪಕ ಜಯರಾಮ್ ಹೇಳಿಕೆ ಪೆಂಡಿಂಗ್ ಇದೆ. ಇವರ ಹೇಳಿಕೆ ಪಡೆಯಲು ಹಲವು ಬಾರಿ ನೋಟಿಸ್​​ ಕೂಡ ನೀಡಲಾಗಿದೆ.

ನಿರ್ದೇಶಕ ಅರುಣ್ ತಾನು ವಿದೇಶದಲ್ಲಿದ್ದಾರೆ ಎನ್ನಲಾಗಿದೆ. ಅವರು ಬಂದ ಮೇಲೆ ನಾವು ಬರ್ತೀವಿ ಎಂದು ಉಳಿದ ಇಬ್ಬರು ಹೇಳಿದ್ದಾರೆ. ಹೀಗಾಗಿ ಕೇಸ್ ತನಿಖೆ ಮಧ್ಯದಲ್ಲೇ ನಿಂತು ಹೋಗಿದೆ.

ಇದನ್ನೂ ಓದಿ: ‘ಪ್ರೇರಣಾಗೆ ನಮ್ಮ ಫ್ಯಾಮಿಲಿಗೆ ಸ್ವಾಗತ ಕೋರುತ್ತೇವೆ, ಇಬ್ಬರಿಗೂ ಒಳ್ಳೆಯದಾಗಲಿ’- ಅರ್ಜುನ್ ಸರ್ಜಾ

ಈಗ ಕೇಸ್​ ಸಂಬಂಧ ಕಬ್ಬನ್​​ ಪಾರ್ಕ್​​​​ ಇನ್ಸಪೆಕ್ಟರ್ ಮಾರುತಿ ಮತ್ತೆ ನೋಟಿಸ್​ ನೀಡಲಿದ್ದಾರೆ. ಮೂವರಿಂದ ಹೇಳಿಕೆ ಪಡೆದು ಕೊನೆಗೆ ಚಾರ್ಜ್​​ಶೀಟ್​​​​ ಸಲ್ಲಿಸಲಿದ್ದಾರೆ.

Source: newsfirstlive.com Source link