ಅಡುಗೆ ಮನೆಗೆ ಭೇಟಿ ಕೊಟ್ಟ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ದೇನು?

ಅಡುಗೆ ಮನೆಗೆ ಭೇಟಿ ಕೊಟ್ಟ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ದೇನು?

ಬೆಂಗಳೂರು: ದೇಶದಲ್ಲಿ ಎಲ್​​​ಪಿಜಿ ಸಿಲಿಂಡರ್​ ದರ ಹೆಚ್ಚಳ ಕುರಿತಂತೆ ಕೇಂದ್ರ ಸರ್ಕಾರ ವಿರುದ್ಧ ಅಭಿಯಾನವನ್ನು ಆರಂಭ ಮಾಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್​ ಅವರು, ಗ್ಯಾಸ್ ಸಿಲಿಂಡರ್ ಬೆಲೆ ಗಗನಕ್ಕೇ ಏರಿರುವ ಕುರಿತಂತೆ ಮಾತನಾಡಿ ಕಿಡಿಕಾರಿದ್ದಾರೆ.

ಪ್ರಿಯ ಸ್ನೇಹಿತರೇ, ವಿಶೇಷವಾಗಿ ತಾಯಂದ್ರೇ, ಅಕ್ಕ-ತಂಗಿಯರೇ ಈ ವಾರ ಗಂಭೀರವಾದ ಪ್ರಶ್ನೆಯೊಂದನ್ನ ನಿಮ್ ಮುಂದೆ ಇಡ್ತಿದ್ದೀನಿ ಎಂದು ಆಡುಗೆ ಮನೆಯಲ್ಲಿ ಟೀ ಕುಡಿಯುತ್ತಾ ಮಾತನಾಡಿರುವ ಡಿಕೆಎಸ್, ಎಲ್‌ಪಿಜಿ ಗ್ಯಾಸ್ ಬೆಲೆ ಇಳಿಕೆಯಾಗಬೇಕಾ? ಬೇಡವಾ? ಈ ವಾರದ ಗಂಭೀರ ಪ್ರಶ್ನೆ, ಸದ್ಯ ದೇಶದಲ್ಲಿ ಎಲ್​​​ಪಿಜಿ ಸಿಲಿಂಡರ್ ಬೆಲೆ 888 ರೂಪಾಯಿಯಿಂದ ಸದ್ಯವೇ 900 ರಿಂದ 1000 ರೂಪಾಯಿ ತಲುಪಬಹುದು

ಬಡ ಕುಟುಂಬದವರ ಮುಂದೆ ಇರುವ ಆಯ್ಕೆ ಎರಡೇ, ಒಂದು ಮಕ್ಕಳ ಶಾಲೆಗೆ ಶುಲ್ಕ ಕಟ್ಟಬೇಕು ಅಥವಾ ಗ್ಯಾಸ್ ಸಿಲಿಂಡರ್ ಖರೀದಿಸಬೇಕಾ..? ಇಂತಹ ಸಮಯದಲ್ಲಿ ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆ ಮಾಡುವುದು ನ್ಯಾಯವೇ? ಜನರೇ ತೀರ್ಮಾನಿಸಬೇಕು
ಗ್ಯಾಸ್ ಸಿಲಿಂಡರ್ ಹಣ ಭರಿಸಲಾಗದೇ ಸಾಕಷ್ಟು ಕುಟುಂಬದವರು ಸೌದೆ ಒಲೆಗೆ ಮೊರೆ ಹೋಗುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿರುವ ಡಿಕೆಶಿ ಅಡುಗೆ ಅನಿಲ ಸಿಲಿಂಡರ್ ಬೆಲೆಯನ್ನು ಕನಿಷ್ಠ 150 ರೂಪಾಯಿಯನ್ನಾದರೂ ಸರ್ಕಾರ ಇಳಿಕೆ ಮಾಡಬೇಕೆಂದು ಡಿಕೆಶಿ ಆಗ್ರಹ ಮಾಡಿದ್ದಾರೆ.

Source: newsfirstlive.com Source link