‘ಭಾರತದ ಆತ್ಮಪ್ರಜ್ಞೆ ಸ್ವಾಮಿ ವಿವೇಕಾನಂದರ ಹೆಜ್ಜೆಗಳಲ್ಲಿ ಮುನ್ನಡೆಯೋಣ’- ಎಚ್​​.ಡಿ ಕುಮಾರಸ್ವಾಮಿ

‘ಭಾರತದ ಆತ್ಮಪ್ರಜ್ಞೆ ಸ್ವಾಮಿ ವಿವೇಕಾನಂದರ ಹೆಜ್ಜೆಗಳಲ್ಲಿ ಮುನ್ನಡೆಯೋಣ’- ಎಚ್​​.ಡಿ ಕುಮಾರಸ್ವಾಮಿ

1893ರ ಸೆಪ್ಟೆಂಬರ್ 11ರಂದು ಅಮೇರಿಕಾದ ಚಿಕಾಗೊ ನಗರದಲ್ಲಿ ನಡೆದ ಧರ್ಮ ಸಂಸತ್‌ನಲ್ಲಿ ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರು ತಮ್ಮ ಐತಿಹಾಸಿಕ ಭಾಷಣ ಮಾಡಿ ಇಂದಿಗೆ 128 ವರ್ಷಗಳು ಎಂದು ಮಾಜಿ ಸಿಎಂ ಎಚ್​.ಡಿ ಕುಮಾರಸ್ವಾಮಿ ಟ್ವೀಟ್​​ ಮಾಡಿದ್ದಾರೆ.

ಈ ಸಂಬಂಧ ಸರಣಿ ಟ್ವೀಟ್​​ ಮಾಡಿರುವ ಎಚ್​.ಡಿ ಕುಮಾರಸ್ವಾಮಿ, ವಿಭಿನ್ನ ಜಾತಿ, ಮತಗಳ ಮಾನವ ಸಂಕುಲವನ್ನು ಒಂದೇ ಗೂಡಿನಲ್ಲಿ ಪೋಷಿಸುತ್ತಿರುವ ಭಾರತವನ್ನು ಪ್ರತಿನಿಧಿಸಿದ್ದ ವಿವೇಕಾನಂದರ ಅಂದಿನ ನುಡಿಮುತ್ತುಗಳು ಭಾರತೀಯರಲ್ಲಿ ಸ್ವಾಭಿಮಾನ, ಸಹಿಷ್ಣುತೆಯ ಪ್ರಜ್ಞೆಯನ್ನು ಬಡಿದೆಬ್ಬಿಸಿದ್ದವು ಎಂದು ಬರೆದುಕೊಂಡಿದ್ದಾರೆ.

ನಮ್ಮೆಲ್ಲರ ಆತ್ಮಪ್ರಜ್ಞೆಯಾದ ಸ್ವಾಮಿ ವಿವೇಕಾನಂದರಿಗೆ ಶಿರ ಸಾಷ್ಟಾಂಗ ನಮಸ್ಕಾರಗಳು ಹಾಗೂ ನಾವೆಲ್ಲರೂ ಆ ಮಹಾಪುರುಷನ ಹೆಜ್ಜೆಗಳಲ್ಲಿ ಮುನ್ನಡೆಯೋಣ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಅರ್ಜುನ್ ಸರ್ಜಾ ವಿರುದ್ಧ ಶೃತಿ ಹರಿಹರನ್ ಮೀಟೂ ಆರೋಪ ಕೇಸ್​​ಗೆ ಮರು ಜೀವ- ಈ ಮೂವರಿಗೆ ಸದ್ಯದಲ್ಲೇ ನೋಟಿಸ್​​..!​​​

Source: newsfirstlive.com Source link