ಅಪಘಾತದಲ್ಲಿ ಮೃತಪಟ್ಟ ಮರಿ ಶ್ವಾನ.. ಕರಳು ಚುರುಕ್​ ಎನ್ನಿಸುತ್ತೆ ತಾಯಿ ಶ್ವಾನದ ಮೂಕ ರೋದನೆ

ಅಪಘಾತದಲ್ಲಿ ಮೃತಪಟ್ಟ ಮರಿ ಶ್ವಾನ.. ಕರಳು ಚುರುಕ್​ ಎನ್ನಿಸುತ್ತೆ ತಾಯಿ ಶ್ವಾನದ ಮೂಕ ರೋದನೆ

ಹಾವೇರಿ: ತಾಯಿಗೆ ಸರಿಸಾಟಿಯೇ ಇಲ್ಲ. ಎಲ್ಲರ ಪಾಲಿಗೂ ತಾಯಿ ದೇವತೆ. ಅದು ಮನುಷ್ಯರಾಗಿರಲಿ, ಪ್ರಾಣಿಗಳಾಗಿರಲಿ. ಆ ದೇವತೆಯ ಸ್ಥಾನವೇ ಬೇರೆ,ಅದು ಬೆಲೆ ಕಟ್ಟಲು ಸಾಧ್ಯವೇ ಇಲ್ಲದಂತಹ ಸ್ಥಾನ, . ಮಕ್ಕಳೇ ಅಮ್ಮನ ಪಾಲಿನ ನಿಧಿ ತಾಯಿಯ ಮಮತೆ ಎಂತಹದ್ದು ಎಂಬುದಕ್ಕೆ ಈ ಮೂಕ ರೋದನೆ ಸಾಕ್ಷಿ… ಈ ಶ್ವಾನದ ದುಃಖ, ಖಂಡಿತಾ ಕಣ್ಣೀರು ಬರುತ್ತದೆ…ರಸ್ತೆಯ ಮಧ್ಯೆ ನಡೆಯಿತು ಮನಕಲಕುವ ಘಟನೆ.

blank

ಹೌದು, ಅಪಘಾತದಲ್ಲಿ ಮೃತವಾದ ಕಂದನ ಮೃತದೇಹ ರಕ್ಷಿಸಲು ಶ್ವಾನವೊಂದು ಪರದಾಡುತ್ತಿದ್ದು, ಕಂದನನ್ನು ಕಳದುಕೊಂಡ ತಾಯಿ ಶ್ವಾನ ಕಣ್ಣೀರು ಹಾಕಿದೆ. ಅಪಘಾತದಲ್ಲಿ ಮರಿ ಶ್ವಾನವೊಂದು ಮೃತಪಟ್ಟಿದ್ದು, ಮೃತದೇಹದ ಮೇಲೆ ವಾಹನಗಳು ಹತ್ತದಂತೆ ತಾಯಿ ಶ್ವಾನ ವಾಹನಗಳನ್ನು ತಡೆಯುತ್ತಿದೆ.

ಜಿಲ್ಲೆಯ ರಾಣೇಬೆನ್ನೂರು ತಾಲೂಕಿನ ಹಲಗೇರಿ ಬಳಿ ಘಟನೆ ನಡೆದಿದ್ದು,ಅಪರಿಚಿತ ವಾಹನ ಡಿಕ್ಕಿ ಹೊಡೆದ ಹಿನ್ನೆಲೆ ಸ್ಥಳದಲ್ಲಿ ಸಾವನ್ನಪ್ಪಿದದ್ದ ಶ್ವಾನದ ಮರಿ ಹತ್ತಿರ ಯಾರು ಸುಳಿಯದಂತೆ ತಾಯಿ ಶ್ವಾನ ಕಣ್ಗಾವಲುಗೆ ನಿಂತಿದೆ.ಮರಿ ಶವದ ಮುಂದೆ ಸುಮ್ಮನೆ ಮಲಗಿ ಕಾದು ಕುಳಿತ ತಾಯಿ ಶ್ವಾನ ರಭಸವಾಗಿ ಬಂದ ಕಾರನ್ನು ತಡೆದು ನಿಲ್ಲಿಸಿ ಬೊಗಳುತ್ತಿದೆ. ತಾಯಿ ಶ್ವಾನದ ಕರುಳ ಪ್ರೇಮದ ಬಡಿದಾಟವನ್ನು ದಾರಿಹೋಕರು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ. ಸುಮಾರು ಎರಡು ಗಂಟೆಗೆ ಅಧಿಕ ಕಾಲ ಕಾದ ಮರಿ ಶ್ವಾನದ ಬಳಿ ಕುಳಿತಿದ್ದ ತಾಯಿ ಶ್ವಾನ ಕತ್ತಲಾದ ಬಳಿಕ ಮೃತವಾಗಿದ್ದ ಮರಿ ಶವವನ್ನು ಹೊತ್ತೊಯ್ದಿದೆ..

Source: newsfirstlive.com Source link