‘ಅಫ್ಘಾನ್​​ನಲ್ಲಿ ಸರ್ಕಾರ ರಚನೆಗೆ ಮುಂದಾದ ತಾಲಿಬಾನ್..​​​​ ಇತರೆ ಉಗ್ರರಿಗೆ ಪ್ರೇರಣೆ’- ಹೀಗಂದಿದ್ದು ಯಾರು?

‘ಅಫ್ಘಾನ್​​ನಲ್ಲಿ ಸರ್ಕಾರ ರಚನೆಗೆ ಮುಂದಾದ ತಾಲಿಬಾನ್..​​​​ ಇತರೆ ಉಗ್ರರಿಗೆ ಪ್ರೇರಣೆ’- ಹೀಗಂದಿದ್ದು ಯಾರು?

ಅಫ್ಗಾನಿಸ್ತಾನವನ್ನು ತಾಲಿಬಾನಿಗಳು ವಶಪಡಿಸಿಕೊಂಡು ಸರ್ಕಾರ ರಚನೆಗೆ ಮುಂದಾಗಿದ್ದಾರೆ. ಈ ಬೆಳವಣಿಗೆಯಿಂದ ವಿಶ್ವದಲ್ಲಿರುವ ಇತರೆ ಉಗ್ರ ಸಂಘಟನೆಗಳಿಗೆ ಧೈರ್ಯ ಬಂದಂತಾಗಿದೆ ಎಂದು ಬ್ರಿಟನ್​ ಗುಪ್ತಚರ ಇಲಾಖೆಯ ಮುಖ್ಯಸ್ಥರು ಮಾಹಿತಿ ನೀಡಿದ್ದಾರೆ.

ಮುಂದಿನ ದಿನಗಳಲ್ಲಿ ಭಯೋತ್ಪಾದಕರು ಗುಂಪು ಗೂಡಬಹುದು. ಆ ಮೂಲಕ ತಮ್ಮ ಕೆಲಸಗಳನ್ನ ಅಭಿವೃದ್ಧಿಪಡಿಸಬಹುದು. ಅಲ್ಲದೇ ಅತ್ಯಾಧುನಿಕ ಮಾದರಿಯಲ್ಲಿ ಇತರೆ ದೇಶಗಳನ್ನ ವಶಕ್ಕೆ ಪಡೆಯುವ ಸಾಧ್ಯತೆಯೂ ಹೆಚ್ಚಿದೆ. ಹಾಗಾಗಿ ಎಲ್ಲಾ ದೇಶದ ನಾಯಕರು ಎಚ್ಚರಿಕೆಯಿಂದ ಇರುವುದು ಅಗತ್ಯವಾಗಿದೆ ಅಂತ ಬ್ರಿಟನ್​ ಗುಪ್ತಚರ ಇಲಾಖೆಯ ಮುಖ್ಯಸ್ಥ ಕೆನ್​ ಮೆಕಲಂ ಎಚ್ಚರಿಸಿದ್ದಾರೆ.

ಇದನ್ನೂ ಓದಿ: ಕೊರೋನಾ ನಿಯಂತ್ರಣಕ್ಕೆ ಉನ್ನತ ಮಟ್ಟದ ಸಭೆ; ಪ್ರಧಾನಿ ನರೇಂದ್ರ ಮೋದಿ ತೆಗೆದುಕೊಂಡ ಮಹತ್ವದ ನಿರ್ಧಾರವೇನು?

Source: newsfirstlive.com Source link