ನಂಜನಗೂಡು ದೇವಸ್ಥಾನ ನೆಲಸಮ: ಆಕ್ರೋಶ ಹೊರಹಾಕಿದ ಯುವ ಕಾಂಗ್ರೆಸ್ ಅಧ್ಯಕ್ಷ.. RSSನಿಂದ ತುರ್ತುಸಭೆ

ನಂಜನಗೂಡು ದೇವಸ್ಥಾನ ನೆಲಸಮ: ಆಕ್ರೋಶ ಹೊರಹಾಕಿದ ಯುವ ಕಾಂಗ್ರೆಸ್ ಅಧ್ಯಕ್ಷ.. RSSನಿಂದ ತುರ್ತುಸಭೆ

ಬೆಂಗಳೂರು: ನಂಜನಗೂಡಿನಲ್ಲಿ ಹಿಂದೂ ದೇವಸ್ಥಾನವನ್ನು ನೆಲಸಮ ಮಾಡಿದ ವಿಚಾರ ಇದೀಗ ದೊಡ್ಡ ಮಟ್ಟದ ಚರ್ಚೆಗೆ ವೇದಿಕೆ ಕಲ್ಪಿಸಿದೆ. ಈ ಕುರಿತು ಟ್ವೀಟ್ ಮಾಡಿರುವ ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ಬಿ.ವಿ. ಶ್ರೀನಿವಾಸ್ ಆಕ್ರೋಶ ಹೊರಹಾಕಿದ್ದಾರೆ. ಮೈಸೂರು ಜಿಲ್ಲೆಯಲ್ಲಿ ಬಿಜೆಪಿ ಸರ್ಕಾರ ಪುರಾತನ ಹಿಂದೂ ದೇವಾಲಯವನ್ನು ಕೆಡವಿದೆ. ಇದಕ್ಕಾಗಿ ನಾವು ಪ್ರಧಾನಿ ಮೋದಿಗೆ ಧನ್ಯವಾದ ಹೇಳಬೇಕೆ ಎಂದು ಪ್ರಶ್ನಿಸಿದ್ದಾರೆ.

ಇತ್ತ ಹಿಂದೂ ದೇವಾಲಯಗಳ ತೆರವಿಗೆ ಆದೇಶ ಹಿನ್ನೆಲೆ ಇಂದು ಸಂಜೆ ಆರ್‌ಎಸ್‌ಎಸ್ ತುರ್ತು ಸಭೆ ಕರೆದಿದೆ. ಸಭೆಯಲ್ಲಿ ಹಿಂದೂಪರ ಸಂಘಟನೆಗಳ ಮುಖಂಡರು ಭಾಗಿಯಾಗಲಿದ್ದಾರಂತೆ.

ಸೆಪ್ಪೆಂಬರ್ 16 ರಂದು ಬೃಹತ್ ಹೋರಾಟ ಕುರಿತಂತೆ ಈ ಸಭೆಯಲ್ಲಿ ಚರ್ಚೆ ನಡೆಯಲಿದೆ ಎನ್ನಲಾಗಿದೆ. ದೇವಾಲಯ ತೆರವಿಗೆ ಕಾರಣರಾದ ಅಧಿಕಾರಿಗಳ ತಲೆದಂಡ, ಸ್ಥಳೀಯ ಬಿಜೆಪಿ ಶಾಸಕರು, ಸಂಸದರ ನಿರ್ಲಕ್ಷ ಕುರಿತಂತೆ ಚರ್ಚೆ ನಡೆಯಲಿದೆ ಎನ್ನಲಾಗಿದೆ. ಮೈಸೂರಿನ ಶ್ರೀರಾಮ ಮಂದಿರದಲ್ಲಿ ನಡೆಯಲಿರುವ ಈ ಕ್ಲೋಸ್ ಡೋರ್ ಮೀಟಿಂಗ್​ಗೆ ಮೈಸೂರು ವಿಭಾಗದ ಎಲ್ಲಾ ಸಂಘ ಪರಿವಾರದ ನಾಯಕರಿಗೆ ಆಹ್ವಾನ ನೀಡಲಾಗಿದೆಯಂತೆ. ಸಭೆಯಲ್ಲಿ ಮುಂದಿನ ಹೋರಾಟದ ರೂಪುರೇಷೆ, ಸರ್ಕಾರದ ನಿರ್ಲಕ್ಷ, ತಪ್ಪಿತಸ್ಥ ಅಧಿಕಾರಿಗಳ ವಿರುದ್ದ ಕ್ರಮಕ್ಕೆ ಒತ್ತಾಯ ಮಾಡುವ ಬಗ್ಗೆ ಚರ್ಚೆ ನಡೆಯಲಿದೆ ಎಂದು ಹೇಳಲಾಗಿದೆ.

Source: newsfirstlive.com Source link