ಪುತ್ರ ತೈಮೂರ್​ ಮಾಡಿದ ಮಣ್ಣಿನ ಗಣಪತಿಗೆ ಕೈಮುಗಿದು ಪ್ರಾರ್ಥಿಸಿದ ಕರೀನಾ, ಸೈಫ್​

ಪುತ್ರ ತೈಮೂರ್​ ಮಾಡಿದ ಮಣ್ಣಿನ ಗಣಪತಿಗೆ ಕೈಮುಗಿದು ಪ್ರಾರ್ಥಿಸಿದ ಕರೀನಾ, ಸೈಫ್​

ಬಿಟೌನ್​ನ ಅಲ್​ ಮೋಸ್ಟ್​ ಎಲ್ಲ ಸೆಲೆಬ್ರಿಟಿಗಳು ಗಣೇಶ ಹಬ್ಬವನ್ನು ಬಹಳ ಸಂಭ್ರಮದಿಂದ ಆಚರಿಸುತ್ತಾರೆ. ಅದೇ ರೀತಿ ಬಾಲಿವುಡ್​ ಸ್ಟಾರ್​ ದಂಪತಿಗಳಾದ ನಟ ಸೈಫ್​ ಅಲಿ ಖಾನ್ ಮತ್ತು ನಟಿ ಕರೀನಾ ಕಪೂರ್​ ಖಾನ್​ ತಮ್ಮ ಪುತ್ರ ತೈಮೂರ್ ಅಲಿ ಖಾನ್​ ಜೊತೆ ಮನೆಯಲ್ಲೇ ಸರಳವಾಗಿ ಗಣೇಶ ಹಬ್ಬವನ್ನು ಆಚರಿಸಿಕೊಂಡಿದ್ದಾರೆ.

ಇದನ್ನೂ ಓದಿ: ಅಪೋಲೋ ಆಸ್ಪತ್ರೆಯಿಂದ ಹೆಲ್ತ್​​​​​ಬುಲೆಟಿನ್- ಸಾಯಿ ಧರಮ್​ ತೇಜ್ ಆರೋಗ್ಯ ಸ್ಥಿತಿ ಹೇಗಿದೆ?

ಹೌದು, ತಮ್ಮ ಮನೆಯಲ್ಲಿ ಗಣೇಶನ ವಿಗ್ರಹ ಮತ್ತು ಪುತ್ರ ತೈಮೂರ್​ ಮಾಡಿದ ಮಣ್ಣಿನ ಗಣೇಶನ ವಿಗ್ರಹವನ್ನು ಇಟ್ಟು ಸೈಫ್​ ಅಲಿ ಖಾನ್, ಕರೀನಾ ಮತ್ತು ತೈಮೂರ್​ ಗಣಪತಿಗೆ ಪಾರ್ಥನೆ ಸಲ್ಲಿಸಿದ್ದಾರೆ. ಇನ್ನು ಈ ಕರೀನಾ ಈ ಫೋಟೊಗಳನ್ನು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

Source: newsfirstlive.com Source link