ಸಿಲಿಕಾನ್​ ಸಿಟಿ ಜನರಿಗೆ ಕೊರೊನಾ ಜೊತೆ ಮತ್ತೊಂದು ಆತಂಕ.. ಹೆಚ್ಚಾಗ್ತಿದೆ ಜನರಲ್​ ಫೀವರ್​

ಸಿಲಿಕಾನ್​ ಸಿಟಿ ಜನರಿಗೆ ಕೊರೊನಾ ಜೊತೆ ಮತ್ತೊಂದು ಆತಂಕ.. ಹೆಚ್ಚಾಗ್ತಿದೆ ಜನರಲ್​ ಫೀವರ್​

ಬೆಂಗಳೂರು: ಸಿಲಿಕಾನ್​ ಸಿಟಿ ಜನರಿಗೆ ಕೊರೊನಾ ಜೊತೆ ಮತ್ತೊಂದು ಆತಂಕ ಎದುರಾಗ್ತಿದ್ದು, ಭಯ ಹುಟ್ಟಿಸಿದೆ. ಲಾಕ್​ಡೌನ್​ ಬಳಿಕ ವಾಹನಗಳ ಸಂಚಾರ ತೀವ್ರವಾಗಿದ್ದು, ಹೆಚ್ಚಿದ ವಾಯುಮಾಲಿನ್ಯದಿಂದಾಗಿ ಜನರ ಆರೋಗ್ಯದಲ್ಲಿ ಏರುಪೇರು ಉಂಟಾಗ್ತಿದೆ ಎಂದು ವರದಿಯಾಗಿದೆ.

ಹವಾಮಾನ ಬದಲಾವಣೆ, ವಾಯುಮಾಲಿನ್ಯದಿಂದಾಗಿ ಜನರ ಆರೋಗ್ಯದಲ್ಲಿ ಏರುಪೇರಾಗ್ತಿದ್ದು, ಸಾಮಾನ್ಯ ಜ್ವರ, ಗಂಟಲು ನೋವು, ಥಂಡಿ ಅಂತ ಆಸ್ಪತ್ರೆಗೆ ಬರೋರ ಸಂಖ್ಯೆ ಹೆಚ್ಚಾಗ್ತಿದೆ. ಇವ್ರೆಲ್ಲರಿಗೂ ಕೊರೊನ ಲಕ್ಷಣದಂತೆ ಕಂಡು ಬರ್ತಿದ್ರೂ, ಇದು ಕೊರೊನಾ ಅಲ್ಲ. ಸಾಮಾನ್ಯವಾಗಿ ಬರುವಂತಹ ಜನರಲ್ ಫೀವರ್​ ಇದಾಗಿದೆ. ಹಾಗಂತ ನೆಗ್ಲೆಕ್ಟ್ ಮಾಡಿದ್ರೆ ಎಲ್ಲಿ ಏನಾಗುತ್ತೋ ಅನ್ನೋ ಭಯ ಜನರಲ್ಲಿ ಕಾಡ್ತಿದೆ.

ಇದನ್ನೂ ಓದಿ:ಕೊರೋನಾ ನಿಯಂತ್ರಣಕ್ಕೆ ಉನ್ನತ ಮಟ್ಟದ ಸಭೆ; ಪ್ರಧಾನಿ ನರೇಂದ್ರ ಮೋದಿ ತೆಗೆದುಕೊಂಡ ಮಹತ್ವದ ನಿರ್ಧಾರವೇನು?

ಸದ್ಯ ಆಸ್ಪತ್ರೆಯ ಹೊರ ರೋಗಿ ವಿಭಾಗಕ್ಕೆ ಬರ್ತಿರೋರ ಸಂಖ್ಯೆ ದಿನ ನಿತ್ಯ ಜಾಸ್ತಿ ಆಗುತ್ತಲೇ ಇದ್ದು, ಮೊದಲಿಗೆ ಹೋಲಿಸಿದರೆ ಶೇ. 40 ರಷ್ಟು ಜಾಸ್ತಿ ಮಂದಿ ಜ್ವರ, ನೆಗಡಿ ಅಂತ OPD(ಹೊರ ರೋಗಿ ವಿಭಾಗ) ಗೆ ಬರ್ತಿದ್ದಾರೆ ಎನ್ನಲಾಗಿದೆ. ಒಂದೆಡೆ ಜನರಿಗೆ ಕೊರೊನಾ ಭಯ ಇದ್ರೆ, ಇನ್ನೊಂದೆಡೆ ಡಾಕ್ಟರ್ ಗೂ ಟೆನ್ಷನ್ ಟೆನ್ಷನ್ ಎನ್ನುವಂತಾಗಿದೆ. ಕೊರೊನ ಅಂತ ಬಂದ ರೋಗಿಯನ್ನ ಅಡ್ಮಿಟ್ ಮಾಡೋ ಹಾಗೂ ಇಲ್ಲ. ಹಾಗಂತ ಸಾಮಾನ್ಯ ಜ್ವರ ಅಂತ ನೆಗ್ಲೆಕ್ಟ್ ಕೂಡ ಮಾಡೋಕೆ ಕೂಡ ಆಗೋಲ್ಲ ಎಂದು ವೈದ್ಯರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಬಿಸಿಲು, ಮಳೆ, ಚಳಿ ಹೀಗೆ ಮಿಶ್ರಿತ ವಾತಾವರಣದಿಂದ ಜನರ ಆರೋಗ್ಯ ಹದಗೆಡ್ತಿದೆ ಎನ್ನಲಾಗ್ತಿದ್ದು, ಒಂದೆಡೆ ಕೋವಿಡ್, ಇನ್ನೊಂದೆಡೆ ನಿಫಾ ವೈರಸ್, ಮತ್ತೊಂದೆಡೆ ಜನರಲ್ ಫೀವರ್. ಇದರಿಂದಾಗಿ ರೋಗಿಗಳನ್ನ ಹೇಗೆ ನಿಭಾಯಿಸೋದು ಅನ್ನೋ ಆತಂಕ ವೈದ್ಯರದ್ದಾಗಿದ್ದು, ಜನರಲ್ ಕೇಸ್ ಗಳನ್ನು ಕೇರ್​ಫುಲ್ ಆಗಿ ಹ್ಯಾಂಡಲ್ ಮಾಡೋ ಸವಾಲು ಇದೀಗ ವೈದ್ಯರ ಮುಂದಿದೆ.

Source: newsfirstlive.com Source link