ಗುಜರಾತ್ ಸಿಎಂ ರಾಜೀನಾಮೆ: ಮುಂದಿನ ಸಿಎಂ ರೇಸ್​​ನಲ್ಲಿರೋ ನಾಯಕರು ಯಾರು..?

ಗುಜರಾತ್ ಸಿಎಂ ರಾಜೀನಾಮೆ: ಮುಂದಿನ ಸಿಎಂ ರೇಸ್​​ನಲ್ಲಿರೋ ನಾಯಕರು ಯಾರು..?

ಗಾಂಧಿನಗರ: ಗುಜರಾತ್ ರಾಜ್ಯ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ಗುಜರಾತ್​ನ ಮುಖ್ಯಮಂತ್ರಿ ಇನ್ನೂ ಒಂದು ವರ್ಷ ಅಧಿಕಾರಾವಧಿ ಇರುವಾಗಲೇ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ನಿನ್ನೆ ಗಾಂಧಿನಗರಕ್ಕೆ ಬಂದಿಳಿದಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಕೋರ್ ಕಮಿಟಿ ಸಭೆ ನಡೆಸಿ ಮುಖ್ಯಮಂತ್ರಿ ಬದಲಾವಣೆ ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: #BIGBREAKING ಗುಜರಾತ್ ಸಿಎಂ ವಿಜಯ್ ರೂಪಾನಿ ದಿಢೀರ್ ರಾಜೀನಾಮೆ

2022 ರ ವಿಧಾನಸಭಾ ಚುನಾವಣೆಯನ್ನ ಗಮನದಲ್ಲಿಟ್ಟುಕೊಂಡು ಮುಖ್ಯಮಂತ್ರಿ ಬದಲಾವಣೆ ಮಾಡಲಾಗಿದೆ ಎಂಬ ಮಾತುಗಳು ಕೇಳಿಬರ್ತಿವೆ. 2022 ರ ಚುನಾವಣೆಗೆ ನಾಯಕತ್ವ ವಹಿಸಲು ಪವರ್​ಫುಲ್ ನಾಯಕನೋರ್ವನನ್ನ ಮುನ್ನೆಲೆಗೆ ತರುವ ಉದ್ದೇಶದಿಂದ ಸಿಎಂ ಬದಲಾವಣೆಯಾಗಿರಬಹುದು ಎಂಬ ಚರ್ಚೆಗಳು ನಡೆಯುತ್ತಿವೆ. ಈ ಮುಂದೆ ಮುಂದಿನ ಸಿಎಂ ಸ್ಥಾನಕ್ಕೆ ಪ್ರಮುಖವಾಗಿ ಐವರ ಹೆಸರುಗಳು ಕೇಳಿಬಂದಿವೆ.

ಮನ್ಸುಖ್​ ಮಾಂಡವಿಯಾ, ನಿತಿನ್​ ಪಟೇಲ್, ಸಿ.ಆರ್ ಪಾಟೀಲ್, ಪುರುಷೋತ್ತಮ್​ ರೂಪಾಲ್​, ಆರ್​.ಸಿ ಫಾಲ್ದು ಹೆಸರುಗಳು ಮುಂದಿನ ಸಿಎಂ ರೇಸ್​ನಲ್ಲಿ ಕೇಳಿಬಂದಿವೆ. ಅಲ್ಲದೇ ಪಾಟೀದಾರ್ ಸಮುದಾಯದ ನಾಯಕನಿಗೆ ಸಿಎಂ ಪಟ್ಟ ಕಟ್ಟುವ ಸಾಧ್ಯತೆಗಳಿವೆ ಎನ್ನಲಾಗಿದೆ.

Source: newsfirstlive.com Source link