‘ನನಗೆ ನನ್ನದೇ ಆದ ಲಿಮಿಟೇಷನ್ ಇರುತ್ತೆ’- ಪ್ರತಾಪ್​ ಸಿಂಹಗೆ ಟಾಂಗ್​ ಕೊಟ್ಟ ರಾಮದಾಸ್​

‘ನನಗೆ ನನ್ನದೇ ಆದ ಲಿಮಿಟೇಷನ್ ಇರುತ್ತೆ’- ಪ್ರತಾಪ್​ ಸಿಂಹಗೆ ಟಾಂಗ್​ ಕೊಟ್ಟ ರಾಮದಾಸ್​

ಮೈಸೂರು: ನಗರದಲ್ಲಿ ಹಿಂದೂ ದೇವಾಲಯಗಳ ತೆರವು ವಿಚಾರ ಕುರಿತು ಬಿಜೆಪಿ ಶಾಸಕ ಎಸ್.ಎ.ರಾಮದಾಸ್ ಪ್ರತಿಕ್ರಿಯೆ ನೀಡಿದ್ದು, ಸುಪ್ರೀಂ ತೀರ್ಪಿನ ಆಧಾರದ ಮೇಲೆ ಈ ಕ್ರಮ ಕೈಗೊಳ್ಳಲಾಗಿದ್ದು, ರಸ್ತೆ ಬದಿ ಇರುವ ದೇವಾಲಯಗಳನ್ನ ಮಾತ್ರ ತೆರವುಗೊಳಿಸಲಾಗ್ತಿದೆ ಎಂದಿದ್ದಾರೆ.

ಇದನ್ನೂ ಓದಿ: ಚೌತಿಯ ದಿನದಂದೇ ದೇವಸ್ಥಾನ ನೆಲಸಮ-ತಮ್ಮದೇ ಸರ್ಕಾರ ವಿರುದ್ಧ ಬಿಜೆಪಿ ನಾಯಕರ ಆಕ್ರೋಶ

ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಎಲ್ಲಾ ದೇವಾಲಯಗಳನ್ನೂ ತೆರವು ಮಾಡುವುದಿಲ್ಲ. ಕಾನೂನಿನಡಿ ಉಳಿಸಿಕೊಳ್ಳಬಹುದಾದ, ಸ್ಥಳಾಂತರ ಮಾಡಬಹುದಾದ ದೇವಾಲಯಗಳನ್ನ ತೆರವು ಮಾಡಲ್ಲ. ಶೀಘ್ರದಲ್ಲೇ ಮುಖ್ಯಮಂತ್ರಿಗಳನ್ನ ಭೇಟಿಯಾಗಿ ಚರ್ಚೆ ಮಾಡ್ತೇನೆ ಎಂದರು.

ಈ ವೇಳೆ ಸಂಸದ ಪ್ರತಾಪ್​ಸಿಂಹಗೆ ಟಾಂಗ್​ ನೀಡಿದ ಅವರು, ಅವರ ಅಭಿಪ್ರಾಯವೇ ಬೇರೆ, ನನ್ನ ಅಭಿಪ್ರಾಯವೇ ಬೇರೆ. ನನಗೆ ನನ್ನದೇ ಆದ ಲಿಮಿಟಿಷೇನ್ ಇರುತ್ತೆ. ನಾವುಗಳು ಜನರ ಭಾವನೆಗಳಿಗೆ ಸ್ಪಂದಿಸಬೇಕಾಗುತ್ತೆ ಎಂದಿದ್ದಾರೆ.

ಇದನ್ನೂ ಓದಿ:ನಂಜನಗೂಡು ಕಾಂಗ್ರೆಸ್​​ ಟಿಕೆಟ್​​ ಫೈಟ್​​​; ಎಚ್​​.ಸಿ ಮಹದೇವಪ್ಪ, ಕಳಲೆ ಕೇಶವಮೂರ್ತಿ ನಡುವೆ ಭಾರೀ ಪೈಪೋಟಿ

Source: newsfirstlive.com Source link