ಕೈ-ಜೆಡಿಎಸ್ ಮೈತ್ರಿ: “ಬಕ್ರೀದ್ ಮೇ ಬಚೇಂಗೆ ತೋ, ಮೊಹರಂ ಮೇ ನಾಚೇಂಗೆ” ಎಂದಿದ್ದೇಕೆ ಖರ್ಗೆ..?

ಕೈ-ಜೆಡಿಎಸ್ ಮೈತ್ರಿ: “ಬಕ್ರೀದ್ ಮೇ ಬಚೇಂಗೆ ತೋ, ಮೊಹರಂ ಮೇ ನಾಚೇಂಗೆ” ಎಂದಿದ್ದೇಕೆ ಖರ್ಗೆ..?

ಕಲಬುರಗಿ: ಜಿಲ್ಲೆಯ ಮಹಾನಗರ ಪಾಲಿಕೆಯಲ್ಲಿ JDS ಜೊತೆ ಮೈತ್ರಿ ವಿಚಾರಕ್ಕೆ ಮಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಕಾಂಗ್ರೆಸ್ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ.. “ಬಕ್ರೀದ್ ಮೇ ಬಚೇಂಗೆ ತೋ, ಮೊಹರಂ ಮೇ ನಾಚೇಂಗೆ” ಎಂದಿದ್ದಾರೆ.

ಇದನ್ನೂ ಓದಿ: ಕಲಬುರಗಿ ಪಾಲಿಕೆಯಲ್ಲಿ ಕಾಂಗ್ರೆಸ್- ಜೆಡಿಎಸ್‌ ಮೈತ್ರಿ ಆಗೋದು ಪಕ್ಕಾ ಎಂದ ಕಾಂಗ್ರೆಸ್ ಮುಖಂಡ

ಕಲ್ಬುರ್ಗಿ ಜನರ ಬೆಂಬಲ ಕಾಂಗ್ರೆಸ್​ಗಿದೆ. 27 ಕಾಂಗ್ರೆಸ್, 23 ಬಿಜೆಪಿ, 4 ಜೆಡಿಎಸ್, 1 ಪಕ್ಷೇತರ ಇದೆ. ಬಿಜೆಪಿ ವಿರೋಧಿ ಸದಸ್ಯರು 32 ರಷ್ಟಿದ್ದಾರೆ. ಹಾಗಾಗಿ ದೇವೇಗೌಡರಿಗೆ ಕರೆ ಮಾಡಿ ಮಾತನಾಡಿದ್ದೇನೆ. ಕಾಂಗ್ರೆಸ್ ಪರ ಜನ ಬೆಂಬಲವಿರುವುದಾಗಿ ತಿಳಿಸಿದ್ದೇನೆ. ಇಲ್ಲಿ ಎಲ್ಲವೂ ವಿಶ್ವಾಸದ ಮೇಲಷ್ಟೇ ನಡೆಯುತ್ತದೆ. ಮೇಯರ್ ಸ್ಥಾನದ ಬಗ್ಗೆ ಸ್ಥಳೀಯ ನಾಯಕರು ತೀರ್ಮಾನಿಸುತ್ತಾರೆ. “ಬಕ್ರೀದ್ ಮೇ ಬಚೇಂಗೆ ತೋ, ಮೊಹರಂ ಮೇ ನಾಚೇಂಗೆ” ಎಂದರು. ಇನ್ನು ಮೇಯರ್ ಸ್ಥಾನ JDS ಗೆ ನೀಡುವ ಕುರಿತ ಪ್ರಶ್ನೆಗೆ ಖರ್ಗೆ ಪ್ರತಿಕ್ರಿಯೆ ನೀಡಿ ಮೊದಲು ಅಧಿಕಾರ ಸಿಗಲಿ, ಆನಂತರ ಮೇಯರ್ ಸ್ಥಾನ ನೀಡುವ ಬಗ್ಗೆ ಪರೋಕ್ಷ ಹೇಳಿಕೆ ನೀಡಿದರು.

Source: newsfirstlive.com Source link