ದೇವಸ್ಥಾನ ನೆಲಸಮ: ಜಿಲ್ಲಾಡಳಿತದ ವಿರುದ್ಧ ಗರಂ ಆದ ವಿಶ್ವ ಹಿಂದೂ ಪರಿಷತ್​ನಿಂದ ಪ್ರತಿಭಟನೆ

ದೇವಸ್ಥಾನ ನೆಲಸಮ: ಜಿಲ್ಲಾಡಳಿತದ ವಿರುದ್ಧ ಗರಂ ಆದ ವಿಶ್ವ ಹಿಂದೂ ಪರಿಷತ್​ನಿಂದ ಪ್ರತಿಭಟನೆ

ಮೈಸೂರು: ಸುಪ್ರೀಂ ಕೋರ್ಟ್ ತೀರ್ಪನ್ನ ಸರಿಯಾಗಿ ಅರ್ಥ ಮಾಡಿಕೊಳ್ಳದೆ ದೇವಾಲಯಗಳನ್ನು ತೆರವು ಮಾಡಲಾಗುತ್ತಿದೆ ಎಂದು ಆರೋಪಿಸಿ, ಜಿಲ್ಲಾಡಳಿತದ ವಿರುದ್ಧ ವಿಶ್ವ ಹಿಂದೂ ಪರಿಷತ್ ಮೈಸೂರು ವತಿಯಿಂದ ಪ್ರತಿಭಟನೆ ಕೈಗೊಳ್ಳಲಾಗಿದೆ.

blank

ಇದು ಜಿಲ್ಲಾಡಳಿತದ ಅಕ್ರಮ ಕಾರ್ಯಾಚರಣೆ ಎಂದು ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದ್ದು, ಕೋರ್ಟ್ ಆದೇಶವನ್ನ ಸರಿಯಾಗಿ ಪಾಲಿಸುವ ಕೆಲಸವಾಗಬೇಕು. ಜಿಲ್ಲಾಡಳಿತ ಕೇವಲ ಒಂದು ಧರ್ಮದ ದೇವಾಲಯಗಳನ್ನು ತೆರವು ಮಾಡುವ ಮೂಲಕ ಕೋಮುವಾದವನ್ನು ಸೃಷ್ಟಿಸುವ ಕೆಲಸ ಮಾಡುತ್ತಿದೆ. ಎಲ್ಲಾ ಧರ್ಮದ ದೇವಾಲಯಗಳನ್ನ ತೆರವು ಮಾಡಬೇಕು. ಜಿಲ್ಲಾಡಳಿತವೇ ಈ ರೀತಿಯ ಕಾರ್ಯದಲ್ಲಿ ಭಾಗಿ ಆಗಿರುವುದನ್ನು ವಿಶ್ವ ಹಿಂದೂ ಪರಿಷತ್​ ಖಂಡಿಸುತ್ತದೆ ಎಂದು ವಿಶ್ವ ಹಿಂದೂ ಪರಿಷತ್ತಿನ ಕಾರ್ಯದರ್ಶಿ ಪ್ರದೀಶ್ ಕುಮಾರ್ ಹೇಳಿದ್ದಾರೆ.

ಇದನ್ನೂ ಓದಿ: ಚೌತಿಯ ದಿನದಂದೇ ದೇವಸ್ಥಾನ ನೆಲಸಮ-ತಮ್ಮದೇ ಸರ್ಕಾರ ವಿರುದ್ಧ ಬಿಜೆಪಿ ನಾಯಕರ ಆಕ್ರೋಶ

Source: newsfirstlive.com Source link