9/11 ಉಗ್ರರ ದಾಳಿ ದುರಂತಕ್ಕೆ 20 ವರ್ಷ: ಈ ಘಟನೆ ಜಗತ್ತಿಗೆ ಬಹಳಷ್ಟು ಪಾಠ ಕಲಿಸಿದೆ ಎಂದ ಮೋದಿ

9/11 ಉಗ್ರರ ದಾಳಿ ದುರಂತಕ್ಕೆ 20 ವರ್ಷ: ಈ ಘಟನೆ ಜಗತ್ತಿಗೆ ಬಹಳಷ್ಟು ಪಾಠ ಕಲಿಸಿದೆ ಎಂದ ಮೋದಿ

ನವದೆಹಲಿ: ವಿಶ್ವದ ಶಕ್ತಿಶಾಲಿ ರಾಷ್ಟ್ರಗಳಲ್ಲೊಂದಾದ ಅಮೆರಿಕಾದಲ್ಲಿನ ವಿಶ್ವ ವಾಣಿಜ್ಯ ಕೇಂದ್ರದ ಮೇಲೆ ಉಗ್ರರ ದಾಳಿಗೆ ಇಂದು 20 ವರ್ಷಗಳ ಕರಾಳ ನೆನಪು.. ಈ ದುರಂತದಲ್ಲಿ ಸುಮಾರು 2,977 ಅಮಾಯಕ ನಾಗರಿಕರು ಜೀವ ಕಳೆದುಕೊಂಡಿದ್ರು.

ಇನ್ನು ಈ ದುರಂತವನ್ನು ಪ್ರಧಾನಿ ಮೋದಿಯವರು ಮೆಲುಕು ಹಾಕಿದ್ದಾರೆ. ಅಹಮದಾಬಾದ್‌ನ ಸರ್ದಾರ್‌ಧಾಮ್‌ ಭವನ ಸಂಕೀರ್ಣವನ್ನು ವಿಡಿಯೊ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿದ ನಂತರ ಮೋದಿಯವ್ರು ಈ ಬಗ್ಗೆ ಮಾತನಾಡಿದ್ದಾರೆ. ಇಂದು ಸೆಪ್ಟೆಂಬರ್ 11, ಅಂದರೆ 9/11, ಈ ದಿನಾಂಕವು ವಿಶ್ವದ ಇತಿಹಾಸದಲ್ಲಿ ಮಾನವೀಯತೆಯ ಮೇಲಿನ ದಾಳಿಗೆ ಕುಖ್ಯಾತಿ ಪಡೆದಿದೆ. ಆದರೆ, ಇದೇ ದಿನಾಂಕವು ಇಡೀ ಜಗತ್ತಿಗೆ ಬಹಳಷ್ಟನ್ನು ಕಲಿಸಿದೆ ಅಂತ ತಿಳಿಸಿದ್ರು.

Source: newsfirstlive.com Source link