ದೆಹಲಿಯಲ್ಲಿ ಧಾರಾಕಾರ ಮಳೆ.. ಕೆರೆಯಂತಾದ ಏರ್​ಪೋರ್ಟ್​ ರನ್​ವೇ

ದೆಹಲಿಯಲ್ಲಿ ಧಾರಾಕಾರ ಮಳೆ.. ಕೆರೆಯಂತಾದ ಏರ್​ಪೋರ್ಟ್​ ರನ್​ವೇ

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಮುಂಜಾನೆಯಿಂದ ಧಾರಾಕಾರ ಮಳೆ ಸುರಿಯುತ್ತಿರುವ ಪರಿಣಾಮ ದೆಹಲಿಯ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ರನ್ ವೇ ಕೆರೆಯಂತಾಗಿದೆ.

ಧಾರಕಾರ ಮಳೆ ಹಿನ್ನೆಲೆ ವಿಮಾನ ನಿಲ್ದಾಣದ ಟರ್ಮಿನಲ್ 3ರಲ್ಲಿ ವಿಮಾನಗಳ ಹಾರಾಟಕ್ಕೆ ತೊಂದರೆ ಉಂಟಾಗಿದ್ದು, ಪ್ರಯಾಣಿಕರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಸದ್ಯ ನಾಲ್ಕು ಡೊಮೆಸ್ಟಿಕ್ ವಿಮಾನಗಳು ಮತ್ತು ಒಂದು ಅಂತರರಾಷ್ಟ್ರೀಯ ವಿಮಾನ ಮಾರ್ಗಗಳನ್ನ ಡೈವರ್ಟ್ ಮಾಡಲಾಗಿದ್ದು, ದೆಹಲಿಯಲ್ಲಿ ಲ್ಯಾಂಡ್ ಆಗಬೇಕಾಗಿದ್ದ ವಿಮಾನವನ್ನ ಜೈಪೂರ್ ಮತ್ತು ಅಹಮದಾಬಾದ್ ಗೆ ಡೈವರ್ಟ್ ಮಾಡಲಾಗಿದೆ.

ಅನಿರೀಕ್ಷಿತ ಮಳೆಯಿಂದ ಜನರಿಗೆ ತೊಂದರೆಯಾಗುತ್ತಿದೆ ಎಂದಿರೋ ದೆಹಲಿ ವಿಮಾನ ನಿಲ್ದಾಣ ಪ್ರಾಧಿಕಾರ, ಕಾರ್ಯಾಚರಣೆ ಆರಂಭವಾಗಿದ್ದು ಪ್ರಯಾಣಕ್ಕೆ ಅನಾನೂಕೂಲ ಉಂಟಾಗಿದ್ದಕ್ಕೆ ವಿಷಾದ ವ್ಯಕ್ತಪಡಿಸಿದೆ.

Source: newsfirstlive.com Source link