‘ನನಗೆ ದುರಾಸೆ ಜಾಸ್ತಿ’ ಹೀಗ್ಯಾಕಂದ್ರು ಮೇಘನಾ ರಾಜ್ ಸರ್ಜಾ

‘ನನಗೆ ದುರಾಸೆ ಜಾಸ್ತಿ’ ಹೀಗ್ಯಾಕಂದ್ರು ಮೇಘನಾ ರಾಜ್ ಸರ್ಜಾ

ಸ್ಯಾಂಡಲ್​ವುಡ್​ ನಟಿ ಮೇಘನಾ ರಾಜ್​ ಸರ್ಜಾ ಸುಮಾರು ಎರಡು ವರ್ಷಗಳ ಬಳಿಕ ಮೊದಲ ಬಾರಿಗೆ ನ್ಯೂಸ್​ಫಸ್ಟ್​ನ ವಿಶೇಷ ಸಂದರ್ಶನದಲ್ಲಿ ಮನಬಿಚ್ಚಿ ಮಾತನಾಡಿದ್ದಾರೆ. ಈ ವೇಳೆ ಮಾತನಾಡುವಾಗ ನನಗೆ ದುರಾಸೆ ಜಾಸ್ತಿ ಅಂತ ಮೇಘನಾ ಹೇಳಿದ್ದಾರೆ.

ಹೌದು, ಚಿರು ಒಬ್ಬ ತಂದೆಯಾಗಿ ಮಗನಿಗೋಸ್ಕರ ಏನನ್ನು ಮಾಡಬೇಕೋ ಅದನ್ನೆಲ್ಲ ಮಾಡಿ ತಮ್ಮ ಜವಾಬ್ದಾರಿಯನ್ನು ಬಹಳ ಚೆನ್ನಾಗಿ ನಿಭಾಯಿಸಿದ್ದಾರೆ ಅಂತ ಮೇಘನಾ ಹೇಳಿದ್ದಾರೆ. ಮಗುವಿಗೆ ತಂದೆಯಾಗಿ ಚಿರು ಎಲ್ಲವನ್ನೂ ಮಾಡಿದ್ದಾರೆ ಅದ್ರೆ ಒಬ್ಬ ತಾಯಿಯಾಗಿ ನಾನು ಮಾಡೋದು ಇನ್ನೂ ಬಹಳಷ್ಟಿದೆ ಅಂತ ಮೇಘನಾ ಹೇಳಿದ್ದಾರೆ.

ಇದನ್ನೂ ಓದಿ: ಚಿರು ಲಾಸ್ಟ್​​ ನನಗೆ ಹೇಳಿದ್ದು ಒಂದೇ ಮಾತು -ಮೇಘನಾ ರಾಜ್​​​ ಸರ್ಜಾ

ದೇವರು ಒಂದು ಬ್ಯೂಟಿಫುಲ್ ಸೋಲ್ ಕಿತ್ತುಕೊಂಡು ಮತ್ತೊಂದು ಬ್ಯೂಟಿಫುಲ್​ ಸೋಲ್​ ಕೊಟ್ಟಿದ್ದಾನೆ ಅಂತ ಅನಿಸುತ್ತೆ. ಅದ್ರೆ ನನಗೆ ಎರಡೂ ಬೇಕು.. ನನಗೆ ದುರಾಸೆ ಜಾಸ್ತಿ ಅಂತ ಮೇಘನಾ ರಾಜ್ ಸರ್ಜಾ ಹೇಳಿದ್ದಾರೆ.

Source: newsfirstlive.com Source link