ಶನಿ ಮಹಾತ್ಮನ ಗೋಲಕ ಕದ್ದ – ಸಿಸಿಟಿವಿಯ ವಕ್ರದೃಷ್ಟಿಗೆ ಬಿದ್ದ

ಚಾಮರಾಜನಗರ: ಶನಿ ಮಹಾತ್ಮ ದೇವಸ್ಥಾನಕ್ಕೆ ಭಕ್ತರ ಸೋಗಿನಲ್ಲಿ ಪ್ರವೇಶಿಸಿ ಗೋಲಕ ಕದ್ದಿದ್ದ ಕಳ್ಳನೋರ್ವ ಸಿಸಿಟಿವಿ ಕ್ಯಾಮೆರಾ ಮೂಲಕ ಸಿಕ್ಕಿ ಹಾಕಿಕೊಂಡು ಜೈಲು ಪಾಲಾಗಿದ್ದಾನೆ.

ಚಾಮರಾಜನಗರದ ಉಪ್ಪಾರ ಬಡಾವಣೆಯ ನಿವಾಸಿ ಮೋಹನ್‍ಕುಮಾರ್ (40) ಆರೋಪಿ ಎಂದು ಗುರುತಿಸಲಾಗಿದ್ದು, ಈತ ಕಳ್ಳತನ ಮಾಡಿದ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಶ್ರೀ ಚಾಮರಾಜೇಶ್ವರ ದೇವಸ್ಥಾನದ ಹಿಂಭಾಗ ಇರುವ ಶನಿ ದೇವರ ದೇವಸ್ಥಾನಕ್ಕೆ ಸೆಪ್ಟೆಂಬರ್ 8ರ ರಾತ್ರಿ ಬಂದಿದ್ದಾನೆ. ನಂತರ ಕಟಿಂಗ್ ಪ್ಲೇಯರ್ ಬಳಸಿ ಕಂಬಿ ಕಿತ್ತು ಗೋಲಕದಲ್ಲಿದ್ದ ಹಣವನ್ನು ದೋಚಿದ್ದಾನೆ. ಇದನ್ನೂ ಓದಿ: ಬೆರಗುಗೊಳಿಸುವಂತಹ ಮಹಿಳೆಯರ ಟಾಪ್ 5 ಬ್ಯಾಕ್ ನೆಕ್ ಡಿಸೈನ್ ಬ್ಲೌಸ್‍ಗಳು!

Thief

ಈ ವಿಚಾರ ದೇವಸ್ಥಾನದ ಆಡಳಿತ ಮಂಡಳಿಗೆ ಬೆಳಗ್ಗೆ ತಿಳಿದುಬಂದಿದ್ದು, ಸಿಸಿಟಿವಿ ಪರಿಶೀಲಿಸಿದಾಗ ಮೋಹನ್ ಕುಮಾರ್ ಕಳ್ಳತನ ಮಾಡಿರುವ ಸತ್ಯ ಬಹಿರಂಗಗೊಂಡಿದೆ ಮತ್ತು ಸೆಪ್ಟೆಂಬರ್ 9 ರಂದು ಪಟ್ಟಣ ಠಾಣೆ ಪೊಲೀಸರು ಕಳ್ಳನನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಗಣೇಶ ವಿಸರ್ಜನೆ ವೇಳೆ ಪೊಲೀಸರನ್ನೇ ತಳ್ಳಾಡಿದ ಯುವಕರು

ಮೋಹನ್ ಕುಮಾರ್ ಕದ್ದಿದ್ದ ಗೋಲಕದ ಬೀಗ ಹೊಡೆಯಲಾಗದೇ ರಸ್ತೆಯಲ್ಲಿಯೇ ಎಸೆದು ಹೋಗಿದ್ದ. ಈ ಮಾಹಿತಿ ಪಡೆದ ಪೊಲೀಸರು ಗೋಲಕ ಪತ್ತೆ ಹಚ್ಚಿದ್ದಾರೆ. ಕಳ್ಳನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಈ ವೇಳೆ ಮೋಹನ್ ಕುಮಾರ್ ಲಾಕ್‍ಡೌನ್‍ನಿಂದಾಗಿ ಜೇಬಲ್ಲಿ ಹಣವಿಲ್ಲದೆ ದೇವಸ್ಥಾನದ ಗೋಲಕ ಕದ್ದಿದ್ದೇನೆ ಎಂದು ಹೇಳಿರುವುದಾಗಿ ತಿಳಿದುಬಂದಿದೆ.

Source: publictv.in Source link