ಗುಜರಾತ್ ಸಿಎಂ ರಾಜೀನಾಮೆ; ವಿಪಕ್ಷಗಳಿಗೆ ದುಃಸ್ವಪ್ನವಾಗಿದ್ದ ರುಪಾನಿ ರಾಜಕೀಯ ಬದುಕು ಹೇಗಿತ್ತು..?

ಗುಜರಾತ್ ಸಿಎಂ ರಾಜೀನಾಮೆ; ವಿಪಕ್ಷಗಳಿಗೆ ದುಃಸ್ವಪ್ನವಾಗಿದ್ದ ರುಪಾನಿ ರಾಜಕೀಯ ಬದುಕು ಹೇಗಿತ್ತು..?

ಗುಜರಾತ್​​ ಮುಖ್ಯಮಂತ್ರಿ ಸ್ಥಾನಕ್ಕೆ ವಿಜಯ್​​​ ರುಪಾನಿ ರಾಜೀನಾಮೆ ನೀಡಿದ್ದಾರೆ. ಮುಂದಿನ ವಿಧಾನಸಭಾ ಚುನಾವಣೆಗೆ ಒಂದು ವರ್ಷ ಬಾಕಿಯಿರುವಾಗಲೇ ಮಹತ್ವದ ಬೆಳವಣಿಗೆಯೊಂದರಲ್ಲಿ ಗುಜರಾತ್​​ ಬಿಜೆಪಿ ರಾಜ್ಯಾಧ್ಯಕ್ಷ ವಿಜಯ್​​ ರುಪಾನಿ ರಾಜೀನಾಮೆ ನೀಡಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ. ಈಗ ವಿಜಯ್​​ ರುಪಾನಿ ರಾಜೀನಾಮೆ ತೆರವಾದ ಮುಖ್ಯಮಂತ್ರಿ ಸ್ಥಾನಕ್ಕೆ ಗುಜರಾತ್​​ ಡಿಸಿಎಂ ನಿತಿನ್​​ ಪಟೇಲ್ ಆಯ್ಕೆಯಾಗುವ ಸಾಧ್ಯತೆ ಇದೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ವಿಜಯ್​​ ರೂಪಾನಿ ನೇತೃತ್ವದಲ್ಲೇ ಗುಜರಾತ್​​ನಲ್ಲಿ ಬಿಜೆಪಿ 182 ಪೈಕಿ 99 ಸೀಟು ಗೆಲ್ಲುವ ಮೂಲಕ ಅಧಿಕಾರದ ಚುಕ್ಕಾಣಿ ಹಿಡಿದಿತ್ತು. ವಿಜಯ್ ರುಪಾನಿ ಮತ್ತು ಉಪ ಮುಖ್ಯಮಂತ್ರಿ ನಿತಿನ್ ಪಟೇಲ್ ನೇತೃತ್ವದಲ್ಲಿ ಬಿಜೆಪಿ ಚುನಾವಣೆಯಲ್ಲಿ ಭರ್ಜರಿ ಜಯಭೇರಿ ಬಾರಿಸಿತ್ತು. 182 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ 99 ಸ್ಥಾನಗಳು, ಕಾಂಗ್ರೆಸ್ ಮತ್ತದರ ಮಿತ್ರ ಪಕ್ಷಗಳು 80 ಸ್ಥಾನಗಳನ್ನು ಗೆದ್ದಿದ್ದವು.

ಚುನಾವಣೆ ಗೆದ್ದ ಕೂಡಲೇ ರಾಜ್ಯದ ಮುಖ್ಯಮಂತ್ರಿ ಯಾರು ಎಂದಾಗ ಎಲ್ಲರ ಬಾಯಲ್ಲೂ ಒಂದೇ ಅದು ವಿಜಯ್​​ ರುಪಾನಿ. ಚುನಾವಣೆ ಪ್ರಚಾರದ ಸಂದರ್ಭದಲ್ಲೇ ವೇದಿಕೆ ಮೇಲೆಯೇ ಅಂದಿನ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್​​ ಶಾ ವಿಜಯ್​​ ರುಪಾನಿ ಅವರೇ ಮುಂದಿನ ರಾಜ್ಯದ ಮುಖ್ಯಮಂತ್ರಿ ಎಂದು ಘೋಷಿಸಿದ್ದರು. ಅಮಿತ್​​ ಶಾ ಹೇಗಿದ್ದರೂ ವಿಜಯ್ ರುಪಾನಿ ಮೇಲೆ ಸಿಎಂ ಮಾಡಬೇಕು ಎಂದಿತ್ತಾದರೂ ಕೊನೆಗೆ ಪ್ರಧಾನಿ ನರೇಂದ್ರ ಮೋದಿಯವರು ಒಪ್ಪಿಗೆ ನೀಡಿದರು. ಇದರ ಪರಿಣಾಮ ವಿಜಯ್ ರುಪಾನಿ ಎರಡನೇ ಬಾರಿಗೆ ಗುಜರಾತ್​​ ಸಿಎಂ ಆದರು.

ಇದನ್ನೂ ಓದಿ: #BIGBREAKING ಗುಜರಾತ್ ಸಿಎಂ ವಿಜಯ್ ರೂಪಾನಿ ದಿಢೀರ್ ರಾಜೀನಾಮೆ

ರಾಜಕೀಯ ಪ್ರವೇಶ:

ವಿಜಯ್ ರುಪಾನಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್​​​ (ಎಬಿವಿಪಿ) ಸಂಘದ ಮೂಲಕ ರಾಜಕೀಯ ಹೋರಾಟಕ್ಕೆ ಧುಮುಕಿದರು. 1971ರಲ್ಲಿ ರಾಷ್ಟ್ರೀಯ ಸ್ವಯಂ ಸೇವ ಸಂಘಕ್ಕೆ ಸೇರಿದ ರುಪಾನಿ ಜನ ಸಂಘ ಸೇರಿದರು.

ಆರಂಭದಿಂದಲೂ ಬಿಜೆಪಿಯೊಂದಿಗೆ ಇದ್ದ ವಿಜಯ್ ರುಪಾನಿ ಪಕ್ಷದ ಸಂಘಟನೆಯಲ್ಲಿ ಪ್ರಮುಖ ಹುದ್ದೆಯಲ್ಲಿದ್ದರು. ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಜೈಲು ಸೇರಿದ್ದ ವಿಜಯ್ ರೂಪಾನಿ ಅವರು ವಿದ್ಯಾರ್ಥಿ ಜೀವನದಲ್ಲಿ ಸಂಘಟನಾ ಚತುರ ಎನಿಸಿದ್ದರು.

ಗುಜರಾತಿನ ಈ ಹಿಂದಿನ ಮುಖ್ಯಮಂತ್ರಿಗಳಾದ ಕೇಶುಭಾಯಿ ಪಟೇಲ್, ನರೇಂದ್ರ ಮೋದಿ, ಅನಂದಿಬೆನ್ ಪಟೇಲ್ ಅವರ ಜತೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಯಾವುದೇ ಹಗರಣಗಳಲ್ಲಿ ರೂಪಾನಿ ಹೆಸರು ಕೇಳಿ ಬಂದಿಲ್ಲ.

ಜೈನ ಸಮುದಾಯದ ವಿಜಯ್ ರೂಪಾನಿ ಅವರು ಗುಜರಾತ್ ಬಿಜೆಪಿಯ ಪ್ರಧಾನ ಕಾರ್ಯದರ್ಶಿಯಾಗಿ, ಸಂಸದರಾಗಿ ಕರ್ತವ್ಯ ನಿರ್ವಹಿಸಿದ್ದಾರೆ. 1987ರಲ್ಲಿ ಕಾರ್ಪೋರೇಟರ್​​ ಆಗಿ ಆಯ್ಕೆಯಾದರು. 1996-1997 ರಾಜ್​ಕೋಟ್​ ಮೇಯರ್​ ಆಗಿ ಸೇವೆ ಸಲ್ಲಿಸಿದ್ದರು.

1998ರಲ್ಲಿ ಗುಜರಾತ್​​ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿದ್ದರು. 2016ರಲ್ಲಿ ಗುಜರಾತ್​​​​ ಪ್ರವಾಸೋದ್ಯಮ ಮಂಡಳಿ ಅಧ್ಯಕ್ಷರಾಗಿದ್ದರು. ರಾಜ್ಯಸಭಾ ಸದಸ್ಯರಾಗಿ, ಸಾರಿಗೆ ಮತ್ತು ಕಾರ್ಮಿಕ ಇಲಾಖೆ ಸಚಿವರಾಗಿ, ಗುಜರಾತ್​​ ಬಿಜೆಪಿ ರಾಜ್ಯಾಧ್ಯಕ್ಷರಾಗಿ, ಎರಡು ಬಾರಿ ಸಿಎಂ ಆಗಿ ಸೇವೆ ಸಲ್ಲಿಸಿದ್ದಾರೆ. ಅನಂದಿಬೆನ್ ಪಟೇಲ್ ನಂತರ ಗುಜರಾತ್​​ ಸಿಎಂ ಆಗಿ ಬಿಜೆಪಿಯಿಂದ ರುಪಾನಿ ಆಯ್ಕೆಯಾಗಿದ್ದರು.

ಜನಪ್ರಿಯ ಯೋಜನೆಗಳ ಮೂಲಕ ಜನರ ಗಮನ ಸೆಳೆದ ರುಪಾನಿ ಆಡಳಿತ ವಿರೋಧಿ ಅಲೆ ಇಲ್ಲದ ಸರ್ಕಾರದ ನಾಯಕರು. ಇದೇ ಕಾರಣಕ್ಕೆ ಪ್ರತಿಪಕ್ಷಗಳು ರುಪಾನಿ ಪ್ರಭಾವಕ್ಕೆ ಬೆಚ್ಚಿ ಬಿದ್ದಿದ್ದು ಸುಳ್ಳಲ್ಲ. ಚಾಣಾಕ್ಷ ರಾಜಕೀಯ ತಂತ್ರದ ಮೂಲಕ ಪ್ರತಿಪಕ್ಷಗಳಿಗೆ ದುಃಸ್ವಪ್ನವಾದ ನಾಯಕ ರುಪಾನಿ. ಇವರ ಮಾತಿಗೆ ಹೈಕಮಾಂಡ್​​ ಕೂಡ ಮನ್ನಣೆ ನೀಡುತ್ತಿತ್ತು.

Source: newsfirstlive.com Source link