ರಕ್ಷಿತ್​ ಶೆಟ್ಟಿ ಲಕ್ಕಿ ದಿನದಂದು ತೆರೆಗೆ ಲಗ್ಗೆಯಿಡಲಿದೆ ‘777 ಚಾರ್ಲಿ’- ಯಾವ್ದು ‘ಆ’ ದಿನ?

ರಕ್ಷಿತ್​ ಶೆಟ್ಟಿ ಲಕ್ಕಿ ದಿನದಂದು ತೆರೆಗೆ ಲಗ್ಗೆಯಿಡಲಿದೆ ‘777 ಚಾರ್ಲಿ’- ಯಾವ್ದು ‘ಆ’ ದಿನ?

ಒಬ್ಬೊಬ್ಬರ ಪಾಲಿಗೆ ಒಂದೊಂದು ದಿನ ಲಕ್ಕಿ. ಅದ್ರಲೂ ಚಿತ್ರರಂಗದ ಮಂದಿಗಂತು ಕೆಲವೊಂದು ದಿನ ಸುದಿನವಾಗುತ್ತೆ. ಸ್ಯಾಂಡಲ್​ವುಡ್​ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅವರಿಗೆ ಆ ಒಂದು ದಿನ ಲಕ್ಕಿ. ಹಾಗಾದ್ರೆ ಯಾವುದು ಆ ದಿನ..? ಏನಿದು ಲಕ್ಕಿ ಸಮಾಚಾರ..

ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ.. ಕರ್ನಾಟಕ ಕರಾವಳಿ ಸೀಮೆಯ ಪ್ರಚಂಡ ಸಿನಿಮಾ ಪ್ರತಿಭೆ. ಮೂರೊತ್ತು ಸಿನಿಮಾವನ್ನೇ ಕನವರಿಸುವ ಕನಸುಗಾರ. ಸಿಂಪಲ್ ಆಗಿ ಒಂದ್ ಲವ್ ಸ್ಟೋರಿ ಸಿನಿಮಾದ ಮೂಲಕ ಸಕ್ಸಸ್ ರುಚಿ ಕಂಡ ರಕ್ಷಿತ್ ಪಾಲಿಗೆ ಆ ದಿನವೊಂದು ಲಕ್ಕಿ. ಹಾಗಾದ್ರೆ ಯಾವುದು ಆ ದಿನ ಅನ್ನೋದಕ್ಕೆ ಉತ್ತರ ಇಲ್ಲಿದೆ.

blank

2016 ಡಿಸೆಂಬರ್ 30ನೇ ತಾರೀಖು​​​. ಆಗ ನೋಟ್ ಬ್ಯಾನ್ ಆಗಿ ಹೊಸ ನೋಟು ಹುಟ್ಟುತ್ತಿದ್ದ ಕಾಲ.. ಮಾಲ್​ಗಳು, ಅಂಗಡಿಗಳು, ದೇವಸ್ಥಾನ ಹಾಗೂ ಸಿನಿಮಾ ಥಿಯೇಟರ್​ ಮುಂದೆ ಕ್ಯೂನಲ್ಲಿ ನಿಲ್ಲುತ್ತಿದ್ದ ಜನ ಏಕ್ ಧಮ್ ಬ್ಯಾಂಕ್​​ನ ಮುಂದೆ ನಿಲ್ಲೋ ಹಾಗೆ ಆಗಿತ್ತು. ಜನ ಕೈಯಲ್ಲಿ ಝಣ ಝಣ ಕಾಂಚಾಣ ಇಲ್ಲದೆ ಪರದಾಡುತ್ತಿದ್ರು. ಇಂತಹ ಸಂದರ್ಭ ಎದ್ದಾಗ ಕಿರಿಕ್ ಪಾರ್ಟಿ ಸಿನಿಮಾ ರಿಲೀಸ್ ಆಗಿತ್ತು. ಗಾಂಧಿನಗರ ಮಂದಿ ಕಿರಿಕ್ ಪಾರ್ಟಿ ಸಿನಿಮಾ ಗೋವಿಂದ ಅಂದಿದ್ರು. ಆದ್ರೆ ಕಿರಿಕ್ ಪಾರ್ಟಿ ಸಿನಿಮಾ ಬಾಕ್ಸಾಫೀಸ್​​​ನಲ್ಲಿ ದಾಖಲೆ ಬರೆದಿತ್ತು. 4 ಕೋಟಿ ಖರ್ಚು ಮಾಡಿ 50 ಕೋಟಿ ಕಲೆಕ್ಷನ್ ಎತ್ತಿತ್ತು ರಕ್ಷಿತ್ ಪಡೆ. ಅವತ್ತು ರಕ್ಷಿತ್ ಶೆಟ್ಟಿ ಗಾಂಧಿನಗರ ಕಮರ್ಶಿಯಲ್ ಕಮ್ ಕ್ಲಾಸ್​​​ ಹೀರೋ ಆದ್ರು.

blank

ಡಿಸೆಂಬರ್ ಕಡೆಯ ವಾರ ಸಾಕಷ್ಟು ನಟರಿಗೆ ಲಕ್ಕಿ. ರಕ್ಷಿತ್ ಶೆಟ್ಟಿ ಅವರಿಗೆ ಲಕ್ಕಿ ಮಂತ್ ಆಂಡ್ ವೀಕ್ ಆಯ್ತು. ಕಿರಿಕ್ ಪಾರ್ಟಿ ಸಿನಿಮಾದ ನಂತರ ಅವನೇ ಶ್ರೀಮನ್ನಾರಾಯಣ ಸಿನಿಮಾ ಕೂಡ ಡಿಸೆಂಬರ್ ಕಡೆಯ ವಾರವೇ ತೆರೆ ಕಂಡಿದ್ದು.

ಅವನೇ ಶ್ರೀಮನ್ನಾರಾಯಣ ಸಿನಿಮಾ ಡಿಸೆಂಬರ್ ತಿಂಗಳ ಕಡೆಯ ವಾರ ತೆರೆಕಂಡ್ರು ಅಷ್ಟು ದೊಡ್ಡ ಮಟ್ಟಕ್ಕೆ ಬಂಪರ್ ಕಲೆಕ್ಷನ್ ಮಾಡದಿದ್ದರೂ ಹಾಕಿದ ದುಡ್ಡಿಗೆ ಮೋಸ ಆಗಿಲ್ಲ. ಈಗ ಮತ್ತೆ ಡಿಸೆಂಬರ್ ಕಡೆಯ ವಾರದ ಮೇಲೆ ರಕ್ಷಿತ್ ಶೆಟ್ಟಿ ಕಣ್ಣಿಟ್ಟಿದ್ದಾರೆ. ಡಿಸೆಂಬರ್ 31ನೇ ತಾರೀಖು ರಕ್ಷಿತ್ ಶೆಟ್ಟಿ ನಟನೆಯ 777 ಚಾರ್ಲಿ ಸಿನಿಮಾ ತೆರೆ ಕಾಣೋ ಡೇಟ್​​​ ಅನ್ನ ಫಿಕ್ಸ್ ಮಾಡಿಕೊಂಡಿದೆ.

ಇದನ್ನೂ ಓದಿ: ಪುತ್ರ ತೈಮೂರ್​ ಮಾಡಿದ ಮಣ್ಣಿನ ಗಣಪತಿಗೆ ಕೈಮುಗಿದು ಪ್ರಾರ್ಥಿಸಿದ ಕರೀನಾ, ಸೈಫ್​

ಡಿಸೆಂಬರ್ ಕಡೆಯ ವಾರದಂದು ಟಾಲಿವುಡ್​ನ ಪುಷ್ಪ ಸಿನಿಮಾ ಕೂಡ ಬರೋ ಡೇಟ್ ಅನ್ನ ಕನ್ಫರ್ಮ್ ಮಾಡಿದೆ. ಈಗ ಪುಷ್ಪನ ಹಿಂದೆ ಕನ್ನಡ 777 ಚಾರ್ಲಿ ಕೂಡ ಪ್ಯಾನ್ ಇಂಡಿಯಾ ಸಿನಿಮಾವಾಗಿ ಪ್ರೇಕ್ಷಕರನ್ನ ರಂಜಿಸಲು ನಿರ್ಧಾರ ಮಾಡಿದೆ. ಸೋ ಆಲ್ ದಿ ಬೆಸ್ಟ್ ರಕ್ಷಿತ್ ಶೆಟ್ಟಿ ಚಾರ್ಲಿ ಬಳಗ.

Source: newsfirstlive.com Source link