ಕಲಬುರಗಿ ಪಾಲಿಕೆ ಚುನಾವಣೆ: ಹೆಚ್​​.ಡಿ. ಕುಮಾರಸ್ವಾಮಿ ಭೇಟಿಯಾಗಿ ಬೆಂಬಲ ಕೇಳಿದ ಆರ್. ಅಶೋಕ್

ಕಲಬುರಗಿ ಪಾಲಿಕೆ ಚುನಾವಣೆ: ಹೆಚ್​​.ಡಿ. ಕುಮಾರಸ್ವಾಮಿ ಭೇಟಿಯಾಗಿ ಬೆಂಬಲ ಕೇಳಿದ ಆರ್. ಅಶೋಕ್

ರಾಮನಗರ: ಕಲಬುರಗಿ ಪಾಲಿಕೆ ಚುನಾವಣೆ ಅತಂತ್ರ ಹಿನ್ನೆಲೆ ಇಂದು ಬಿಡದಿಯ ಕೇತಗಾನಹಳ್ಳಿ ತೋಟದ ಮನೆಯಲ್ಲಿ ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ ಅವರನ್ನ ಕಂದಾಯ ಸಚಿವ ಆರ್. ಅಶೋಕ್ ಭೇಟಿಯಾಗಿದ್ದಾರೆ.

ಭೇಟಿಯ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಆರ್. ಅಶೋಕ್.. ಕಲಬುರಗಿ ಪಾಲಿಕೆ ಚುನಾವಣೆಗೆ ನಮ್ಮ ಪಕ್ಷಕ್ಕೆ ಬೆಂಬಲ ಕೊಡುವಂತೆ ಮಾತನಾಡಿದ್ದೇನೆ. ಇದಕ್ಕೆ ಕುಮಾರಸ್ವಾಮಿ ಅವರು ಕೂಡ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಕಲಬುರಗಿ ಪಾಲಿಕೆ ಬಗ್ಗೆ ಕುಮಾರಸ್ವಾಮಿ ಅವರು ಸೋಮವಾರ ಸದನದಲ್ಲಿ ಚರ್ಚಿಸೋಣ ಎಂದಿದ್ದಾರೆ. ಅವರು ಯಾರಿಗೂ ಬೆಂಬಲ‌ ಕೊಟ್ಟಿಲ್ಲ. ಕುಮಾರಸ್ವಾಮಿ ಅವರು ದೇವೇಗೌಡರ ಜೊತೆಗೆ ಮಾತನಾಡುತ್ತಾರೆ.. ದೊಡ್ಡ ಬಳ್ಳಾಪುರದ ಚುನಾವಣೆ ಬಗ್ಗೆಯೂ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದಿದ್ದಾರೆ.

ಇನ್ನು ಜೆಡಿಎಸ್‌ ಕಾಂಗ್ರೆಸ್‌ಗೆ ಬೆಂಬಲ ಕೊಟ್ಟಿದೆ ಎನ್ನುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ.. ಹಾಗೇನೂ ಇಲ್ಲ, ಕಾಂಗ್ರೆಸ್‌ನಲ್ಲೇ ಡಿ.ಕೆ. ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರಲ್ಲೇ ಒಮ್ಮತವಿಲ್ಲ. ಹಾಗೆಯೇ ಮೇಯರ್ ಪಟ್ಟದ ಡಿಮ್ಯಾಂಡ್‌ ಕೂಡ ಚರ್ಚೆಯಾಗಿಲ್ಲ ಎಂದಿದ್ದಾರೆ.

Source: newsfirstlive.com Source link