ಪವನ್ ಕಲ್ಯಾಣ್​ ಹೊಸ ಚಿತ್ರಕ್ಕೆ ಕನ್ನಡತಿಯರ ಪೈಪೋಟಿ! ಯಾರಿಗೆ ಸಿಗುತ್ತೆ ಪವರ್ ಚಾನ್ಸ್?

ಪವನ್ ಕಲ್ಯಾಣ್​ ಹೊಸ ಚಿತ್ರಕ್ಕೆ ಕನ್ನಡತಿಯರ ಪೈಪೋಟಿ! ಯಾರಿಗೆ ಸಿಗುತ್ತೆ ಪವರ್ ಚಾನ್ಸ್?

ಪಕ್ಕದ ಟಾಲಿವುಡ್​ ಲೋಕದಲ್ಲಿ ಕನ್ನಡದ ನಟಿಯರದ್ದೇ ದರ್ಬಾರ್​​. ನಂಬರ್ ಒನ್ ಪಟ್ಟಕ್ಕೆ ಏರಲು ಇಬ್ಬರ ನಡುವೆ ಈ ಹಿಂದೆ ಪೈಪೋಟಿ ಆಗಿತ್ತು. ಈಗ ಪವರ್ ಸ್ಟಾರ್ ಪವನ್ ಕಲ್ಯಾಣ್ ಜೊತೆ ನಿಲ್ಲಲು ಪೈಪೋಟಿ ಶುರುವಾಗಿದೆ. ಆ ಕನ್ನಡತಿಯರು ಯಾರು ಅನ್ನೋ ಗೆಸ್ ನಿಮಗಿದೆ ಅನ್ಸುತೆ. ಆದ್ರೆ ಯಾವ ಸಿನಿಮಾದಲ್ಲಿ ಪವನ್ ಜೊತೆ ಕನ್ನಡತಿಯರಿಬ್ಬರು ನಿಲ್ಲೋದಕ್ಕೆ ಪೈಪೋಟಿ ನಡಿಸೌವ್ರೆ ಅನ್ನೋದು ಗೊತ್ತಾಗ ಬೇಕಿದೆ .

ಆಂಧ್ರ ಸಿನಿಮಾ ಸ್ಟೈಲು, ಆಂಧ್ರ ಸಿನಿಮಾ ಉಡುಗೆ, ತೊಡುಗೆ, ಅಡುಗೆ ಎಲ್ಲವೂ ಸ್ಪೈಸಿ ಸಖತ್ ಬಿಸಿಬಿಸಿ. ನಮ್ಮ ನೆನದ ಕಲರ್​ಫುಲ್ ಕನ್ಯಾ ಕನಕಾಂಬರಿಗಳು ಈಗ ಟಾಲಿವುಡ್ ಲೋಕದಲ್ಲಿ ಮಿರ ಮಿರ ಮಿಂಚುತ್ತಿದ್ದಾರೆ. ಪೂಜಾ ಹೆಗ್ಡೆ, ರಶ್ಮಿಕಾ ಮಂದಣ್ಣ, ನಭಾ ನಟೇಶ್ ಹಿಂಗೆ ಹೇಳ್ತಾ ಹೊದ್ರೆ ದೊಡ್ಡ ಪಟ್ಟಿ ಬೆಳೆಯುತ್ತೆ. ಸದ್ಯ ಟಾಲಿವುಡ್ ಸಿನಿ ಲೋಕದಲ್ಲಿ ಪೂಜಾ ಹೆಗ್ಡೆ ಮತ್ತು ರಶ್ಮಿಕಾ ಮಂದಣ್ಣ ಟಾಪ್ ಠಪೋರಿಸ್.

blank

ಪೂಜಾ ಹೆಗ್ಡೆ. ಬಾಂಬೆ ಪುಟ್ಟ ಬೊಮ್ಮ.. ಹುಟ್ಟಿ ಬೆಳೆದಿದ್ದೆಲ್ಲ ಮಹಾರಾಷ್ಟ್ರದಲ್ಲಾದ್ರು ಮೂಲ ಕರ್ನಾಟಕದ ಕರಾವಳಿ ತೀರದವರು. ಇವತ್ತಿಗೂ ಪೂಜಾ ಹೆಗ್ಡೆ ಅವರ ಮನೆಯಲ್ಲಿ ತುಳು ಮತ್ತು ಕನ್ನಡ ಮಾತನಾಡ್ತಾರಂತೆ.. ನಮ್ಮ ಕನ್ನಡದವರು ತೆಲುಗು ಸಿನಿಮಾದಲ್ಲಿ ಪೂಜಾ ಜೊತೆ ನಟಿಸುವಾಗ ನಟಿ ಪೂಜಾ ನಮ್ಮ ಕಲಾವಿದರನ್ನ ಕನ್ನಡದಲ್ಲೇ ಮಾತನಾಡಿಸುತ್ತಾರಂತೆ. 2012ರಿಂದ ತನ್ನ ಸಿನಿ ಕರಿಯರ್ ಶುರು ಮಾಡಿದ ‘‘ಜಿಗಿಲು ರಾಣಿ’’ ತೆಲುಗು , ತಮಿಳಿನ ಜೊತೆಗೆ ಬಾಲಿವುಡ್ ಅಂಗಳದ ಕದವನ್ನ ತಟ್ಟಿ ಬಂದಿದ್ದಾರೆ. ಪೂಜಾಗೆ ಬೇರೆ ಬಾಷೆಗಳಲ್ಲಿ ಅಷ್ಟು ಲಕ್ಕು ಲಕ ಲಕ ಅಂತ ಹೊಳೆಯದೆ ಇದ್ರು ತೆಲುಗು ಸಿನಿ ಬೆಳ್ಳಿ ಆಕಾಶದಲ್ಲಿ ಪೂಜಾ ಲಕ್ಕಿ ನಕ್ಷತ್ರ.

blank

ಇನ್ನು ರಶ್ಮಿಕಾ ಮಂದಣ್ಣ ಇವತ್ತು ಸ್ಯಾಂಡಲ್​ವುಡ್​ ನಿಂದ ಇಡೀ ಇಂಡಿಯನ್ ಸಿನಿಮಾರಂಗಕ್ಕೆ ಪರಿಚಯವಾಗಿರೋ ಕಲರ್ ಕಲಾವಿದೆ. ರಶ್ಮಿಕಾ ಸೌಥ್ ಸಿನಿಮಾ ಸ್ಟಾರ್​​​​. ಬಾಲಿವುಡ್​​​​ನಲ್ಲಿ ಅಮಿತಾಭ್ ಬಚ್ಚನ್​ ಜೊತೆಗೆ ನಟಿಸಿ ಸೈ ಅನ್ನಿಸಿಕೊಂಡಿದ್ದಾರೆ. ಬೇರೆ ಬೇರೆ ಗ್ಲಾಮ್ ಡಾಲ್ಸ್ ಏನೇನೋ ಕಸರತ್ತು ಮಾಡಿದ್ರು ಬರಿ ರಶ್ಮಿಕಾ ಸ್ಮೈಲ್​​ನಲ್ಲೇ ಸೆನ್ಸೇಷನಲ್ ಕ್ರಿಯೆಟ್ ಮಾಡಿದ ಕೊಡಗಿನ ಕ್ಯೂಟಿ. ಸದ್ಯ ಇನ್ಸ್​ಸ್ಟಾದಲ್ಲಿ ಸೌಥ್​​​ನ ನಂಬರ್ ಒನ್ ನಟಿ ಕೂಡ ಹೌದು..

ರಶ್ಮಿಕಾ ಮತ್ತು ಪೂಜಾ ನಡುವೆ ಈಗ ಪೈಪೋಟಿ. ಟಾಲಿವುಡ್​​ನ ಕ್ರೇಜ್​​ ಕಾ ಬಾಪ್ ಪವನ್ ಕಲ್ಯಾಣ್ ಜೊತೆ ನಿಲ್ಲಲು ಈ ಇಬ್ಬರು ನಟಿಯರ ನಡುವೆ ಪೈಪೋಟಿ ಶುರುವಾಗಿದೆ.. ಯಾರಿಗೆ ಪವನ್ ಜೊತೆ ಫೆವರೆಟ್ ಪಾರಿವಾಳ ಆಗೋ ಚಾನ್ಸ್ ಸಿಗುತ್ತೆ ಅನ್ನೋದೆ ಸಸ್ಪೆನ್ಸ್. ಅಷ್ಟಕ್ಕೂ ಪವರ್ ಸ್ಟಾರ್ ಪವನ್ ಕಲ್ಯಾಣ್ ಅವರ ಯಾವ ಸಿನಿಮಾ ನಟಿಯರಾಗಲು ರಶ್ಮಿಕಾ ಮತ್ತು ಪೂಜಾರ ನಡುವೆ ಪೈಪೋಟಿ ಶುರುವಾಗಿದೆ ಗೊತ್ತಾ?.

blank

ಪವನ್ ಹೊಸ ಚಿತ್ರಕ್ಕೆ ಕನ್ನಡತಿಯರ ಪೈಪೋಟಿ!
ರಶ್ಮಿಕಾ ಮತ್ತು ಪೂಜಾರಲ್ಲಿ ಯಾರಿಗೆ ಪವರ್ ಚಾನ್ಸ್?

ಗಣಪತಿ ಹಬ್ಬದ ಪ್ರಯುಕ್ತ ಪವನ್ ಕಲ್ಯಾಣ್ ಅವರ ಹೊಸ ಸಿನಿಮಾದ ಟೈಟಲ್ ಪೋಸ್ಟರ್ ರಿವೀಲ್ ಆಯ್ತು. ಖ್ಯಾತ ನಿರ್ಮಾಣ ಸಂಸ್ಥೆ ಮೈತ್ರಿ ಮೂವಿ ಮೇಕರ್ಸ್ ಜೊತೆ ಪವನ್ ಸಿನಿಮಾ ಮಾಡ್ತಿದ್ದಾರೆ.. ಈ ಸಿನಿಮಾದ ಹೆಸರು ‘‘ಭವದೀಡು ಭಗತ್ ಸಿಂಗ್’’..

ಭವದೀಡು ಭಗತ್ ಸಿಂಗ್​​, ಇದು ಪವನ್ ಸಿನಿ ಭತ್ತಳಿಕೆಯ ಮತ್ತೊಂದು ನಿರೀಕ್ಷಿತ ರಂಜನೆಯ ಸಿನಿ ಅಸ್ತ್ರ. ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಇರೋ ಪವನ್ ಗಾರು ನಿರ್ದೇಶಕ ಹರೀಶ್ ಶಂಕರ್ ಜೊತೆ ಕೆಲಸ ಮಾಡಲು ಸಜ್ಜಾಗಿದ್ದಾರೆ. ಈ ಸಿನಿಮಾದಲ್ಲಿ ಯಾರು ನಾಯಕಿ ಆಗ್ತಾರೆ ಅನ್ನೋ ಕುತೂಹಲ ಟಾಲಿವುಡ್ ಮಾಯ ನಗರಿಯಲ್ಲಿ ಹಬ್ಬಿದೆ.. ಒಂದಷ್ಟು ಪಂಡಿತರು ಪೂಜಾ ಹೆಗ್ಡೆನೇ ಪವನ್​ ಸಿನಿ ಸಾಥಿ ಅಂದ್ರೆ ಇನ್ನು ಕೆಲವರು ರಶ್ಮಿಕಾನೇ ಪವನ್ ನಯಾ ಸಿನಿಮಾ ಜೋಡಿ ಅನ್ನುತ್ತಿದ್ದಾರೆ..

ಪವನ್ ಕಲ್ಯಾಣ್ ಜೊತೆ ಈ ಮೊದಲು ಪೂಜಾ ಹೆಗ್ಡೆ ಮತ್ತು ರಶ್ಮಿಕಾ ಮಂದಣ್ಣ ನಟಿಸಿಲ್ಲ. ಈ ಹಿಂದೆ ನಟಿಸದೇ ಇರೋ ನಟಿಯನ್ನ ಪವನ್ ಪಕ್ಕ ತಂದು ನಿಲ್ಲಿಸ ಬೇಕು ಅನ್ನೋ ಭವದೀಡು ಭಗತ್ ಸಿಂಗ್ ಸಿನಿಮಾ ತಂಡ ಗುರಿಯಾಗಿದೆ. ಇನೇನು ಕೆಲವೇ ದಿನಗಳಲ್ಲಿ ಅಸಲಿ ಹೀರೋಯಿನ್ ಯಾರು ಅನ್ನೋದು ಗೊತ್ತಾಗುತ್ತೆ.

Source: newsfirstlive.com Source link