ನದಿ ಪಕ್ಕದಲ್ಲಿ ನಡೆದು ಹೋಗುವಾಗ ಕಾಲು ಜಾರಿ ಬಿದ್ದ ಮಗು.. ರಕ್ಷಿಸಲು ಹೋದ ತಾಯಿಯೂ ಸಾವು

ನದಿ ಪಕ್ಕದಲ್ಲಿ ನಡೆದು ಹೋಗುವಾಗ ಕಾಲು ಜಾರಿ ಬಿದ್ದ ಮಗು.. ರಕ್ಷಿಸಲು ಹೋದ ತಾಯಿಯೂ ಸಾವು

ಉಡುಪಿ: ಜಿಲ್ಲೆಯ ಬೈಂದೂರು ತಾಲೂಕಿನ ನಾವುಂದದಲ್ಲಿ ನದಿಗೆ ಬಿದ್ದು ತಾಯಿ ಮಗ ಸಾವನ್ನಪ್ಪಿದ ಘಟನೆ ನಡೆದಿದೆ. ಶಾನ್‌ (11) ರೊಸಾರಿಯಾ(35) ನೀರಿನಲ್ಲಿ ಮುಳುಗಿ ಸಾವನ್ನಪ್ಪಿದವರು.

ನದಿ ಪಕ್ಕದಲ್ಲಿ ಹೋಗುತ್ತಿದ್ದಾಗ ಆಕಸ್ಮಿಕವಾಗಿ ಬಾಲಕ ನೀರಿಗೆ ಬಿದ್ದಿದ್ದಾನೆ, ಈ ವೇಳೆ ಮಗುವನ್ನು ರಕ್ಷಿಸಲು ಹೋದಾಗ ತಾಯಿ ಕೂಡ ಕೊಚ್ಚಿಹೋಗಿದ್ದಾರೆ. ಘಟನೆ ನಡೆದ ಸ್ಥಳದಲ್ಲಿ ಶಾನ್‌ ಮೃತದೇಹ ಪತ್ತೆಯಾಗಿದೆ. ದೋಣಿ ಬಳಸಿ ಅಗ್ನಿಶಾಮಕ ದಳ ಮಹಿಳೆ ಮೃತದೇಹ ಪತ್ತೆ ಮಾಡಿದೆ. ಗಂಗೊಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ನಾಡ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಮೃತದೇಹಗಳ ರವಾನೆ ಮಾಡಲಾಗಿದೆ.

Source: newsfirstlive.com Source link