ತಮಿಳು ಸಿನಿ ಅಂಗಳಕ್ಕೆ ಕಾಲಿಟ್ಟ ಅಭಿನಯ ಚತುರ ನೀನಾಸಂ ಸತೀಶ್​

ತಮಿಳು ಸಿನಿ ಅಂಗಳಕ್ಕೆ ಕಾಲಿಟ್ಟ ಅಭಿನಯ ಚತುರ ನೀನಾಸಂ ಸತೀಶ್​

ನೀನಾಸಂ ಸತೀಶ್ ಕನ್ನಡ ಸಿನಿಮಾರಂಗದಲ್ಲಿ ತನ್ನದೇ ಆದ ಛಾಪನ್ನ ಮೋಡಿಸಿರೋ ಅಭಿನಯ ಚತುರ. ಕನ್ನಡದಲ್ಲಿ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಇರೋ ಸತೀಶ್ ನೀನಾಸಂ ಫಸ್ಟ್ ಟೈಮ್ ತಮಿಳು ಸಿನಿ ಅಂಗಳದಲ್ಲಿ ಕಾಣಿಸಿಕೊಂಡಿದ್ದಾರೆ. ಖಡಕ್ ಪಾತ್ರದ ಮೂಲಕ ಕಾಲಿವುಡ್ ಪ್ರೇಕ್ಷಕರನ್ನ ರಂಜಿಸಲು ಮುಂದಾಗಿದ್ದಾರೆ.

ಮೂರು ವರ್ಷದ ಹಿಂದೆ ಸತೀಶ್ ನೀನಾಸಂ ‘‘ನನಗೆ ತಮಿಳು ಸಿನಿಮಾ ಆಫರ್ ಬಂದಿದೆ’’, ‘‘ಸ್ಕ್ರಿಪ್ಟ್ ಸಮೇತ ಬಂದು ರೀಡಿಂಗ್ ಕೊಟ್ಟು ಹೋಗಿದ್ದಾರೆ’’ ‘‘ಈಗಾಗಲೇ ನನ್ನ ಭಾಗದ ಡೈಲಾಗ್ ಅನ್ನ ನಾನು ಕಂಠಪಾಠ ಮಾಡಿದ್ದೇನೆ’’, ‘‘ಅವರು ಶೂಟಿಂಗ್​ಗೆ ನನ್ನ ಕರಿಯೋದೊಂದು ಬಾಕಿ ಎಂದಿದ್ರು’’. ಈ ಮಾತನ್ನ ಕೆಲ ಮಂದಿ ನಂಬಿರಲಿಲ್ಲ. ಆದ್ರೆ ಈಗ ತಮಿಳು ಸಿನಿಮಾದಲ್ಲಿ ನೀನಾಸಂ ಸತೀಶ್ ಅವರನ್ನ ಕಂಡು ಅಚ್ಚರಿ ಪಟ್ಟಿದ್ದಾರೆ, ವಾರೇ ವ್ಹಾವ್ ಎಂದು ಉದ್ಘರಿಸುತ್ತಿದ್ದಾರೆ.

blank

ಮೋಹಕ ತಾರೆ ರಮ್ಯಾ ಫಸ್ಟ್ ಟೈಮ್ ಸಿನಿಮಾವೊಂದರ ಪೋಸ್ಟರ್ ರನ್ನ ರಿವೀಲ್ ಮಾಡಿದ್ರು. ಅದೂ ನೀನಾಸಂ ಸತೀಶ್ ನಟನೆಯ ಮೊದಲ ತಮಿಳು ಸಿನಿಮಾ ಪೋಸ್ಟರ್​. ಪೋಸ್ಟರ್ ನೋಡಿದ ಚಿತ್ರಪ್ರೇಮಿಗಳು ಸತೀಶ್ ನೀನಾಸಂ ಈ ಬಾರಿ ಡಿಫರೆಂಟ್ ರೋಲ್ ಮಾಡಿದ್ದಾರೆ ಎಂದು ನಂಬಿದ್ರು.. ಚಿತ್ರಪ್ರೇಮಿಗಳೇ ಆ ನಂಬಿಕೆ ಈಗ ನಿಜವಾಗಿದೆ. ನೀನಾಸಂ ಸತೀಶ್ ನಟನೆಯ ಮೊದಲ ತಮಿಳು ಸಿನಿಮಾ ‘‘ಪಗೈವುನುಕು ಅರುಳ್ವಾಯ್’’ ಸಿನಿಮಾದ ಟೀಸರ್ ಬಿಡುಗಡೆಯಾಗಿದೆ.

ಪಗೈವುನುಕು ಅರುಳ್ವಾಯ್ ನೀನಾಸಂ ಸತೀಶ್ ನಟನೆಯ ಮೊದಲ ತಮಿಳು ಸಿನಿಮಾ. ಇದೊಂದು ಕ್ರೈಂ ಥ್ರಿಲ್ಲರ್ ಮೂವಿ ಅನ್ನೋದು ಟೀಸರ್​ನಿಂದ ಅಂದಾಜಿಸ ಬಹುದಾಗಿದೆ.. ಎಮ್.ಸಸಿ ಕುಮಾರ್. ಬಿಂದು ಮಾದೇವಿ, ವಾಣಿ ಬೋಜನ್ ನಟನೆಯ ಈ ಚಿತ್ರದಲ್ಲಿ ಸತೀಶ್ ನೀನಾಸಂ ಒಂದು ಪವರ್ ಫುಲ್ ಪಾತ್ರವನ್ನ ನಿರ್ವಹಿಸಿದ್ದಾರೆ..

ಅನಿಶ್ ಅಜ್ಹಾನದನ್ ಕಲ್ಪನೆಯಲ್ಲಿ ‘‘ಪಗೈವುನುಕು ಅರುಳ್ವಾಯ್’’ ಸಿನಿಮಾ ಮೂಡಿಬಂದಿದೆ.. ಟೀಸರ್ ಬಿಟ್ಟು ಗಮನ ಸೇಳೆದಿರೋ ಈ ತಮಿಳು ಚಿತ್ರ ಶೀಘ್ರದಲ್ಲೇ ಪ್ರೇಕ್ಷಕರ ಮುಂದೆ ಬರಲಿದೆ.

ಇದನ್ನೂ ಓದಿ:ಅರ್ಜುನ್ ಸರ್ಜಾ ವಿರುದ್ಧ ಶೃತಿ ಹರಿಹರನ್ ಮೀಟೂ ಆರೋಪ ಕೇಸ್​​ಗೆ ಮರು ಜೀವ- ಈ ಮೂವರಿಗೆ ಸದ್ಯದಲ್ಲೇ ನೋಟಿಸ್​​..!​​​

Source: newsfirstlive.com Source link