ಕಹಿ ಘಟನೆಗಳನ್ನು ಮರೆತು ಮಕ್ಕಳೊಟ್ಟಿಗೆ ಗಣೇಶ ಹಬ್ಬ ಆಚರಿಸಿದ ಶಿಲ್ಪಾ ಶೆಟ್ಟಿ

ಕಹಿ ಘಟನೆಗಳನ್ನು ಮರೆತು ಮಕ್ಕಳೊಟ್ಟಿಗೆ ಗಣೇಶ ಹಬ್ಬ ಆಚರಿಸಿದ ಶಿಲ್ಪಾ ಶೆಟ್ಟಿ

ಕಳೆದ ಕೆಲ ದಿನಗಳ ಹಿಂದೆ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರ ಜೀವನದಲ್ಲಿ ನಡೆದ ಕಹಿ ಘಟನೆಗಳನ್ನು ಮರೆತ್ತು ಮತ್ತೆ ತಮ್ಮ ಕೆಲಸ ಕಾರ್ಯಗಳತ್ತ ಮುಖ ಮಾಡಿದ್ದಾರೆ. ಇನ್ನು ನಟಿ ಶಿಲ್ಪಾ ಶೆಟ್ಟಿ ಪ್ರತಿ ವರ್ಷವೂ ತಮ್ಮ ಕುಟುಂಬದ ಜೊತೆ ಗಣೇಶ ಹಬ್ಬವನ್ನು ಬಹಳ ಸಂಭ್ರಮದಿಂದ ಆಚರಿಸುತ್ತಿದರು. ಅದೇ ರೀತಿ ಈ ಬಾರಿಯು ತಮ್ಮ ಮನೆಯಲ್ಲಿ ಗಣೇಶ ಹಬ್ಬವನ್ನು ಬಹಳ ಸಂಭ್ರಮದಿಂದ ಆಚರಿಸಿಕೊಂಡಿದ್ದಾರೆ.

ಹೌದು, ಶಿಲ್ಪಾ ಶೆಟ್ಟಿ ಅವರ ಪತಿ ರಾಜ್​ ಕುಂದ್ರಾ ಗೈರು ಹಾಜರಿಯ ನಡುವೆಯು ಕೂಡ ಶಿಲ್ಪಾ ಈ ಬಾರಿ ಉತ್ಸಾಹದಿಂದಲ್ಲೆ ಗಣೇಶ ಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಪುತ್ರ ವಿಹಾನ್​ ಮತ್ತು ಪುತ್ರಿ ಸಮೀಶಾ ಜೊತೆ ತಮ್ಮ ನಿವಾಸದಲ್ಲಿ ಇರಿಸಲಾಗಿದ ಗಣೇಶನ ಮೂರ್ತಿಗೆ ಶಿಲ್ಪಾ ಮತ್ತು ವಿಹಾನ್​ ಒಟ್ಟಿಗೆ ಆರತಿ ಮಾಡಿದ್ದಾರೆ. ಸದ್ಯ ಶಿಲ್ಪಾ ಶೆಟ್ಟಿ ಗಣೇಶನ ಹಬ್ಬ ಆಚರಿಸಿದ ಫೋಟೋ ಮತ್ತು ವಿಡಿಯೋವನ್ನು ತಮ್ಮ ಇನ್​ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ:ಬಿಗ್​ ಬಿ, ಌಪಲ್​ ಬ್ಯೂಟಿ ಸಮಂತಾಗೂ ಗುಂಗು ಹಿಡಿಸೈತೆ ‘ಮನಿಕೆ ಮಗೆ ಹಿತೆ’ ಹಾಡು

Source: newsfirstlive.com Source link