ಹಳ್ಳ ಹಿಡಿದ ಸೋಲಾರ್ ಸ್ಟ್ರೀಟ್ ಲೈಟ್ ಯೋಜನೆ; ಖರ್ಚು ಮಾಡಿದ ಕೋಟ್ಯಂತರ ಹಣ ವ್ಯರ್ಥ..?

ಹಳ್ಳ ಹಿಡಿದ ಸೋಲಾರ್ ಸ್ಟ್ರೀಟ್ ಲೈಟ್ ಯೋಜನೆ; ಖರ್ಚು ಮಾಡಿದ ಕೋಟ್ಯಂತರ ಹಣ ವ್ಯರ್ಥ..?

ಕಲಬುರಗಿ: ಜಿಲ್ಲೆಯ ಹಲವು ಜಿಲ್ಲೆಗಳಲ್ಲಿ 3 ವರ್ಷಗಳ ಹಿಂದೆ ಸೋಲಾರ್ ಬೀದಿ ದೀಪಗಳನ್ನು ಅಳವಡಿಸಲಾಗಿತ್ತು. ಸೋಲಾರ್ ಸ್ಟ್ರೀಟ್ ಅಳವಡಿಕೆಗಾಗಿ ಕೋಟ್ಯಾಂತರ ಹಣ ಖರ್ಚು ಮಾಡಲಾಗಿತ್ತು. ಆದ್ರೆ ಇದೀಗ ಕೆಟ್ಟು ನಿಂತ ಲ್ಯಾಂಪ್​ಗಳ ರಿಪೇರಿಗೆ ಅಧಿಕಾರಿಗಳು ಮುಂದಾಗಿಲ್ಲ ಎನ್ನಲಾಗಿದೆ.

ಖಾಸಗಿ ಸೋಲಾರ್ ಕಂಪನಿಯಿಂದ ಸ್ಟ್ರೀಟ್ ಲೈಟ್ಸ್​ಗಳನ್ನ​ ಅಳವಡಿಕೆ ಮಾಡಲಾಗಿತ್ತು, ಒಂದೊಂದು ಸೋಲಾರ್ ಪೋಲ್​ಗೆ 60 ಸಾವಿರ ಹಣ ಖರ್ಚು ಮಾಡಲಾಗಿತ್ತು. ಹೊನ್ನಕಿರಣಗಿ ಗ್ರಾಮವೊಂದರಲ್ಲೇ 50ಕ್ಕೂ ಹೆಚ್ಚು ಸ್ಟ್ರೀಟ್ ಲೈಟ್ಸ್ ಅಳವಡಿಸಲಾಗಿತ್ತು. ಇದೀಗ 40ಕ್ಕೂ ಹೆಚ್ಚು ಸೋಲಾರ್​ ಲ್ಯಾಂಪ್​ಗಳು ಕೆಟ್ಟು ನಿಂತಿವೆ. ಆದ್ರೆ ಕೆಟ್ಟು ನಿಂತ ಲ್ಯಾಂಪ್​ಗಳ ರಿಪೇರಿಗೆ ಅಧಿಕಾರಿಗಳು ಮುಂದಾಗಿಲ್ಲ. ಗುತ್ತಿಗೆ ಕಂಪನಿಯ ಬೇಜವಾಬ್ದಾರಿಯಿಂದ ಇದೀಗ ಯೋಜನೆ ಹಳ್ಳ ಹಿಡಿದಂತಾಗಿದೆ. ಆರ್​ಓ ಪವರ್ ಕಂಟ್ರೋಲ್‌ ಅನ್ನೋ ಸೋಲಾರ್ ಕಂಪನಿಗೆ ಗುತ್ತಿಗೆ ನೀಡಲಾಗಿತ್ತು.

Source: newsfirstlive.com Source link