‘ಮುಥಾಯ್​ ಆರ್ಟ್’​​ನಲ್ಲಿ ಇತಿಹಾಸ ನಿರ್ಮಿಸಿದ ನಟ ಅರುಣ್​ ಸಾಗರ್ ಪುತ್ರ

‘ಮುಥಾಯ್​ ಆರ್ಟ್’​​ನಲ್ಲಿ ಇತಿಹಾಸ ನಿರ್ಮಿಸಿದ ನಟ ಅರುಣ್​ ಸಾಗರ್ ಪುತ್ರ

ಅರುಣ್ ಸಾಗರ್ ಕನ್ನಡ ಸಿನಿಮಾ ಲೋಕದ ಬಹುಮುಖ ಪ್ರತಿಭೆ .. ಅರುಣ್ ಸಾಗರ್ ಅವರ ಪತ್ನಿ ಹಾಗೂ ಮಗಳು ಕಲಾವಿದರು. ಈಗ ಅವರ ಮಗ ಕೂಡ ಪ್ರತಿಭಾವಂತ. ಅದೆಂಥ ಪ್ರತಿವಾವಂತ ಗೊತ್ತಾ. ದೇಶದಲ್ಲಿ ಯಾರು ಮಾಡದ ಸಾಧನೆಯನ್ನ ಅರುಣ್ ಸಾಗರ್ ಪುತ್ರ ಮಾಡಿದ್ದಾರೆ. ಹಾಗಾದ್ರೆ ಯಾವುದು ಆ ಸಾಧನೆ, ಏನಿದು ಹೊಸ ಸಮಾಚಾರ.

ಅರುಣ್ ಸಾಗರ್​ ಕುಟುಂಬದಿಂದ ಅವರ ಮಗಳು ಅದಿತಿ ಸಾಗರ್​ ಸ್ಯಾಂಡಲ್​ವುಡ್​ನಲ್ಲಿ ತಮ್ಮ ಗಾನ ಸುಧೆ ಹರಿಸುತ್ತಿದ್ದಾರೆ. ಱಂಬೋ-2 ಸಿನಿಮಾದಲ್ಲಿ ಧಮ್​ ಮಾರೋ ಧಮ್​ ಅಂತ ಗಾನ ಸುಧೆ ಪ್ರಾರಂಭಿಸಿದ್ದ ಅದಿತಿ, ಫ್ರೆಂಚ್​ ಬಿರಿಯಾನಿ ಸಿನಿಮಾದಲ್ಲೂ ಕೂಡ ‘ಸಾವ್​ಧಾನ ಬೆಂಗಳೂರು’ ಅಂತ ಹೇಳಿ ಕನ್ನಡಿಗರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.

blank

ರಂಗಭೂಮಿಯಲ್ಲಿದ್ದವರು ಜನುಮದ ಜೋಡಿ ಸಿನಿಮಾದ ಮೂಲಕ ಕನ್ನಡ ಸಿನಿಮಾ ರಂಗಕ್ಕೆ ಕಲಾ ನಿರ್ದೇಶಕರಾಗಿ ಪರಿಚಯವಾದವರು ಅರುಣ್ ಸಾಗರ್.. ತದ ನಂತರ ನಟನಾಗಿ ನಿರೂಪಕನಾಗಿ ಹೇಗೆ ತನ್ನ ಕಲೆಯ ಹೊಸ ಹೊಸ ಸೆಲೆಯನ್ನ ಕನ್ನಡ ಕಲಾ ಜಗತ್ತಿಗೆ ತೋರಿಸಿಕೊಟ್ಟರು. ಈಗ ಅವರ ಮಗನ ಸರದಿ. ಅಪರೂಪದ ಸಾಧನೆಯೊಂದನ್ನ ಅರುಣ್ ಸಾಗರ್ ಪುತ್ರ ಸೂರ್ಯ ಸಾಗರ್ ಮಾಡಿದ್ದಾರೆ.

ಥೈಲ್ಯಾಂಡ್​​ನಲ್ಲಿ ಸೂರ್ಯ ಸಾಗರ್ ಸಾಧನೆ
ಮುಥಾಯ್​ ಆರ್ಟ್​​ನಲ್ಲಿ ಬೆಲ್ಟ್ ಗೆದ್ದ ಪೋರ
ಈ ಸಾಧನೆ ಮಾಡಿದ ಮೊದಲ ಭಾರತೀಯ

ಸೂರ್ಯ ಸಾಗರ್​ ಒಂದು ವಿಶೇಷ ಸಾಧನೆ ಮಾಡುವ ಮೂಲಕ ಭಾರತೀಯರಿಗೆ ಅದರಲ್ಲೂ ಕನ್ನಡಿಗರಿಗೆ ಹೆಮ್ಮೆ ತರುವಂತ ಕೆಲಸ ಮಾಡಿದ್ದಾರೆ.. ಥೈಲ್ಯಾಂಡ್​​ನಲ್ಲಿ ನಡೆದ ವರ್ಲ್ಡ್​ ಬಾಕ್ಸಿಂಗ್​ ಕೌನ್ಸಿಲ್​ ಟೂರ್ನಿಯ ( MUAYTHAI ) ಮುವಾಯ್​​ಥೈ​ ಆರ್ಟ್​ ಆಫ್​ ಫೈಟ್ ವಿಭಾಗದಲ್ಲಿ ಬೆಲ್ಟ್​ ಗೆಲ್ಲುವ ಮೂಲಕ ಈ ಸಾಧನೆ ಮಾಡಿದ್ದಾರೆ. ಈ ಸಾಧನೆ ಮಾಡಿದ ಮೊದಲ ಭಾರತೀಯ ಹಾಗೂ ಮೊದಲ ಕನ್ನಡಿಗ ಅನ್ನೋ ಗೌರವಕ್ಕೆ ಪಾತ್ರರಾಗಿದ್ದಾರೆ ಅರುಣ್ ಸಾಗರ್ ಪುತ್ರ.​

blank

ಇನ್ನು ಮುವಾಯ್​​ಥೈ​ ಗೇಮ್​ ಬಗ್ಗೆ ಹೇಳೋದಾದ್ರೆ ಇದು ಥಾಯ್​ಲ್ಯಾಂಡ್​ನ ರಾಷ್ಟ್ರೀಯ ಗೇಮ್​. ಇದರ ವಿಶೇಷ ಏನಂದ್ರೆ ದೇಹದ 8 ಅಂಗಗಳನ್ನು ಬಳಸಿ ಈ ಗೇಮ್​ ಆಡಲಾಗುತ್ತದೆ. ಈ ಗೇಮ್​ ನೋಡುವದಕ್ಕೂ ಗಟ್ಸ್​ ಬೇಕು ಆಟ ಆಡುವುದಕ್ಕೆ ಡಬಲ್​ ಗುಂಡಿಗೇನೆ ಬೇಕು. ಇದರ ತಯಾರೀನು ಕೂಡ ಆ ಲೆವೆಲ್​ಗೆ ಇರಬೇಕು. ಈ ಬೆಲ್ಟ್​ನ್ನು ಗೆಲ್ಲೂದು ಅಷ್ಟು ಸುಲುಭದ ಮಾತಲ್ಲ. ಆದ್ರೆ ಈ ಸಾಧನೆ ಮಾಡಿದ ಮೊದಲ ಭಾರತೀಯ ಸೂರ್ಯ ಸಾಗರ್​.

ಕಿಚ್ಚ ಮತ್ತು ಯಶ್​​ ಎದುರು ವಿಲನ್​ ಆಗೋ ಆಸೆ

ಸೂರ್ಯ ಸಾಗರ್​ ಈ ಕಿಕ್​ ಬಾಕ್ಸಿಂಗ್​ ನಲ್ಲಿ ರಾಷ್ಟ್ರ ಮಟ್ಟದಲ್ಲಿ ಗೆದ್ದಿದ್ದಾರೆ. ಆದ್ರೆ ಇದರ ಜೊತೆಗೆ ಸೂರ್ಯ ಸಾಗರ್​ಗೆ ಬಾದ್​ಶಾ ಕಿಚ್ಚ ಸುದೀಪ್​ ಮತ್ತು ರಾಕಿಂಗ್​ ಸ್ಟಾರ್​ ಯಶ್​ ಜೊತೆ ವಿಲನ್​ ಆಗಿ ನಟಿಸೋ ಆಸೆ ಇದೆಯಂತೆ.

blank

ಯಶ್​ರಿಂದ ಸಿಕ್ಕತ್ತು ಸೂರ್ಯ ಸಾಧನೆಗೆ ಸಾಥ್

ಬೇರೆ ದೇಶಕ್ಕೆ ಹೋಗಿ ದೇಶ ಮೆಚ್ಚುವ ಕೆಲಸ ಮಾಡಬೇಕೆಂದ್ರೆ ಹಣ ತುಂಬಾ ಮುಖ್ಯ ಆಗುತ್ತೆ..ಈ ಸಂದರ್ಭದಲ್ಲಿ ಸೂರ್ಯ ಸಾಗರ್​ ಗೆ ಸಾಥ್​​ ನೀಡಿದ್ದು ಪ್ಯಾನ್​ ಇಂಡಿಯಾ ಹೀರೋ ರಾಕಿಂಗ್​ ಸ್ಟಾರ್​ ಯಶ್​.. 23 ವರ್ಷದ ಸೂರ್ಯ ಸಾಗರ್​ ಇಂದು ವಯಸ್ಸಿಗೆ ಮೀರಿದ ಸಾಧನೆ ಮಾಡಿದ್ದಾರೆ. ಜೊತೆಗೆ ಇವರ ಸಾಧನೆಗೆ ಮತ್ತಷ್ಟು ಪ್ರೋತ್ಸಾಹ ಬೇಕಾಗಿದೆ. ಇವರ ಮುಂದಿನ ಕಿಕ್​ ಬಾಕ್ಸಿಂಗ್​ ಆಸೆ ಮತ್ತು ಸಿನಿ ಜೀವನದ ಕನಸುಗಳು ಆದಷ್ಟು ಬೇಗ ಈಡೇರಲಿ ಎಂಬುದು ಚಿತ್ರ ಪ್ರೇಮಿಗಳ ಆಶಯ.

Source: newsfirstlive.com Source link