ವಿಧಾನಸೌಧ ಮುತ್ತಿಗೆ ಹಾಕೋದಾಗಿ ಸರ್ಕಾರಕ್ಕೆ ವಿದ್ಯಾರ್ಥಿಗಳ ಎಚ್ಚರಿಕೆ; ಯಾಕೆ ಗೊತ್ತಾ?

ವಿಧಾನಸೌಧ ಮುತ್ತಿಗೆ ಹಾಕೋದಾಗಿ ಸರ್ಕಾರಕ್ಕೆ ವಿದ್ಯಾರ್ಥಿಗಳ ಎಚ್ಚರಿಕೆ; ಯಾಕೆ ಗೊತ್ತಾ?

ಬೆಂಗಳೂರು: ಸಿಎಂ ಬಸವರಾಜ್​​​ ಬೊಮ್ಮಾಯಿ ವಿಧಾನಮಂಡಲ ಅಧಿವೇಶನ ಆರಂಭವಾಗುತ್ತಿದ್ದಂತೆಯೇ ರಾಷ್ಟ್ರೀಯ ಶಿಕ್ಷಣ ನೀತಿ ಬಗ್ಗೆ ಚರ್ಚೆ ನಡೆಯಬೇಕು ಎಂದು ಕ್ಯಾಂಪಸ್ ಫ್ರಂಟ್ ವಿದ್ಯಾರ್ಥಿ ಸಂಘಟನೆ ಆಗ್ರಹಿಸಿದೆ. ಇಲ್ಲದೇ ಹೋದರೆ ವಿಧಾನಸೌಧ ಮುತ್ತಿಗೆ ಹಾಕುವುದಾಗಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ.

ಈ ಸಂಬಂಧ ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಕ್ಯಾಂಪಸ್ ಫ್ರಂಟ್ ವಿದ್ಯಾರ್ಥಿ ಸಂಘಟನೆ ಮುಖಂಡರು, ಸೋಮವಾರದಿಂದ ಅಧಿವೇಶನ ಆರಂಭವಾಗುತ್ತಿದೆ. ಈ ಬಾರಿ ವಿಧಾನಸಭೆ ಅಧಿವೇಶನದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಬಗ್ಗೆ ಚರ್ಚಿಸಬೇಕು. ಸೂಕ್ತವಾಗಿ ಚರ್ಚೆ ಆಗದಿದ್ದರೆ ವಿಧಾನಸೌಧ ಮುತ್ತಿಗೆ ಹಾಕಲಾಗುವುದು ಎಂದರು.

ಅಧಿವೇಶನ ನಡೆಯುವ ವೇಳೆಯೇ ವಿದ್ಯಾರ್ಥಿಗಳು ಮುತ್ತಿಗೆ ಹಾಕ್ತೀವಿ. ಶಿಕ್ಷಣ ತಜ್ಞರ, ವಿವಿಗಳ ಅಭಿಪ್ರಾಯ ಪಡೆಯದೆಯೇ ಈ ನೀತಿ ಜಾರಿ ಮಾಡಲಾಗಿದೆ. ಪಾರ್ಲಿಮೆಂಟ್​​ನಲ್ಲಿ ರಾಷ್ಟ್ರೀಯ ಶಿಕ್ಷಣದ ಬಗ್ಗೆ ಚರ್ಚೆಯೇ ಆಗಿಲ್ಲ. ತರಾತುರಿಯಲ್ಲಿ ಪಾಲಿಸಿಯನ್ನ ಜಾರಿಗೆ ತಂದಿದೆ ಎಂದು ಕಿಡಿಕಾರಿದರು.

ವಿನಾಃ ಕಾರಣ ವಿದ್ಯಾರ್ಥಿಗಳ ಮೇಲೆ ಹಿಂದಿ ಹೇರಿಕೆ ಮಾಡಲಾಗುತ್ತೆ. ತಮಿಳುನಾಡು‌ ಸರ್ಕಾರ ರಾಷ್ಟ್ರೀಯ ಶಿಕ್ಷಣ ನೀತಿಯನ್ನ ಧಿಕ್ಕರಿಸಿದೆ. ಹಲವು ರಾಜ್ಯಗಳು ಎನ್​​ಇಪಿಯನ್ನ ವಿರೋಧಿಸಿದೆ. ಆದರೆ, ಅಶ್ವಥ್ ನಾರಾಯಣ ಹಠಕ್ಕೆ ಬಿದ್ದು ಈ ಪಾಲಿಸಿ ಜಾರಿಗೆ ಮುಂದಾಗಿದ್ದಾರೆ ಎಂದು ಆರೋಪಿಸಿದರು.

ಇದನ್ನೂ ಓದಿ: ಭಬನಿಪುರ ಉಪಚುನಾವಣೆ; ಮಮತಾ ಬ್ಯಾನರ್ಜಿ ಎದುರಾಳಿ, ಬಿಜೆಪಿ ಸ್ಪರ್ಧಿ ಇವರೇ ನೋಡಿ..!

Source: newsfirstlive.com Source link