ರಜನಿ ಫ್ಯಾನ್ಸ್​ಗೆ ದೀಪಾವಳಿ ಧಮಾಕಾ.. ಬೆಳಕಿನ ಹಬ್ಬಕ್ಕೆ ಸೂಪರ್​ಸ್ಟಾರ್​ ‘ಅಣ್ಣಾಥೆ’ ರಿಲೀಸ್​

ರಜನಿ ಫ್ಯಾನ್ಸ್​ಗೆ ದೀಪಾವಳಿ ಧಮಾಕಾ.. ಬೆಳಕಿನ ಹಬ್ಬಕ್ಕೆ ಸೂಪರ್​ಸ್ಟಾರ್​ ‘ಅಣ್ಣಾಥೆ’ ರಿಲೀಸ್​

ರಜನಿಕಾಂತ್ ಅಭಿಮಾಣಿಗಳಿಗೆ ರಜನಿಕಾಂತ್ ಸಿನಿಮಾಗಳು ರಿಲೀಸ್ ಆದಾಗಲೇ ದೀಪಾವಳಿ ಹಬ್ಬ ಇದ್ದಂಗೆ.. ಆದ್ರೆ ಈ ಬಾರಿ ರಜನಿ ಅವರ ಅಣ್ಣಾಥೆ ಸಿನಿಮಾವೇ ದೀಪಾವಳಿ ಹಬ್ಬಕ್ಕೆ ರಿಲೀಸ್ ಆಗಿ ರಜನಿ ಫ್ಯಾನ್ಸ್​​​​ ಡಬಲ್ ದೀಪಾವಳಿ ಹಬ್ಬವನ್ನ ಮಾಡೋ ಸೂಚನೆ ಕೊಟ್ಟಿದೆ..

ರಜನಿಕಾಂತ್ ಎಲ್ಲಿಂದ ಎಲ್ಲಿಗೋ ಹೋಗಿ ಸೂಪರ್ ಸ್ಟಾರ್ ಆಗಿರಲಿ , ಕಾಲಿವುಡ್ ಸಿನಿಮಾ ರಂಗದ ಅದಿಪತಿಯೇ ಆಗಿರಲಿ ರಜಿನಿಕಾಂತ್ ಭಾಷೆಯ ಗಡಿ ಗುಡಿಯನ್ನ ಮೀರಿ ಅಭಿಮಾನಿಗಳನ್ನ ಸಂಪಾದಿಸಿರೋ ಕಲಾವಿದ.. 70ರ ರಜನಿಗೆ ಇವತ್ತಿಗೂ ಭರ್ಜರಿ ಫ್ಯಾನ್ ಫಾಲೋವಿಂಗ್.. ರಾಜಕೀಯಕ್ಕೆ ನಾನು ಹೋಗಲಾರೆ , ಸಿನಿ ರಂಗವನ್ನ ನಾನು ಬಿಡಲಾರೆ ಎಂದಿರುವ ರಜನಿಕಾಂತ್ ಅಣ್ಣಾಥೆ ಸಿನಿಮಾದ ಮೂಲಕ ಪ್ರೇಕ್ಷಕರನ್ನ ರಂಜಿಸಲು ಬರಲಿದ್ದಾರೆ.

blank

ರಜಿನಿ ಸಿನಿಮಾಗಳು ರಿಲೀಸ್ ಆದ ದಿನವೇ ಹಬ್ಬ ಅವತ್ತೇ ಅಘೋಷಿತ ರಜೆ ಅನ್ನುವಷ್ಟರ ಮಟ್ಟಿಗೆ ಕ್ರೇಜ್ ಇತ್ತು.. ಆದ್ರೆ ಕೊಂಚ ಈಗ ಕಡಿಮೆಯಾಗಿದೆ ರಜಿನಿ ಮೇನಿಯ.. ಗಣೇಶ ಹಬ್ಬದ ಪ್ರಯುಕ್ತ ಸೂಪರ್‌ಸ್ಟಾರ್‌ ರಜನಿಕಾಂತ್ ಅಭಿನಯದ ‘ಅಣ್ಣಾಥೆ’ ಸಿನಿಮಾದ ಫಸ್ಟ್‌ ಲುಕ್ ಹಾಗೂ ಮೋಷನ್ ಫೋಸ್ಟರ್ ಬಿಡುಗಡೆಯಾಗಿ ಸದ್ದು ಗದ್ದಲ ಮಾಡ್ತಿದೆ.

ಇದನ್ನೂ ಓದಿ: ತಮಿಳು ಸಿನಿ ಅಂಗಳಕ್ಕೆ ಕಾಲಿಟ್ಟ ಅಭಿನಯ ಚತುರ ನೀನಾಸಂ ಸತೀಶ್​

ಗಣಪೋತ್ಸವದ ಪ್ರಯುಕ್ತ ಶುಕ್ರವಾರ ಅಣ್ಣಾಥೆ ಸಿನಿಮಾದ ಮೋಷನ್ ಫೋಸ್ಟರ್‌ ಮತ್ತು ಫಸ್ಟ್‌ ಲುಕ್ ಹೊರ ಬಂತು. ಯುಟ್ಯೂಬ್‌ನಲ್ಲಿ ಮೋಷನ್‌ ಪೋಸ್ಟರ್‌ ಬಿಡುಗಡೆಯಾಗಿ 24 ಗಂಟೆಗಳಲ್ಲಿ 20 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಪಡೆದಿದೆ. ಹಲ್ ಚಲ್ ಎಬ್ಬಿಸುತ್ತಿದೆ..

ಅಣ್ಣಾಥೆ ಫಸ್ಟ್‌ಲುಕ್‌ ಪೋಸ್ಟರ್‌ನಲ್ಲಿ ರಜನಿಕಾಂತ್‌ ಬಿಳಿ ಅಂಗಿ, ಪಂಚೆಯಲ್ಲಿ ಕಾಣಿಸಿಕೊಂಡು ಮಾಸ್‌ ಲುಕ್‌ ನೀಡಿದ್ದಾರೆ..ಜೊತೆಗೆ ಬೈಕ್ ಮೇಲೆ ಕುಳಿತು ನಮ್ಮ ಶಿವಣ್ಣನ ಥರ ಲಾಂಗ್ ಹಿಡಿದಿದ್ದಾರೆ.. ರಜನಿಯ ವಿಭಿನ್ನ ಸ್ಟೈಲ್‌ಗೆ ಅಭಿಮಾನಿಗಳು ಉಘೇ ಉಘೇ ಎನ್ನುತ್ತಿದ್ದಾರೆ.

ಇನ್ನು ಅಣ್ಣಾಥೆ ಸಿನಿಮಾ ರಿಲೀಸ್ ವಿಚಾರದ ಬಗ್ಗೆ ಹೇಳಲೇ ಬೇಕು.. ಎಲ್ಲಾ ದೊಡ್ಡ ದೊಡ್ಡ ನಿರೀಕ್ಷಿತ ಸಿನಿಮಾಗಳು ಥಿಯೇಟರ್​ಗಳಿಗೆ ಬೆನ್ನು ಮಾಡಿ ಮುಂದಿನ ವರ್ಷದ ಕಡೆ ಮುಖ ಮಾಡಿದ್ರೆ ರಜನಿ ಅವರ ಅಣ್ಣಾಥೆ ಸಿನಿಮಾ ಈ ವರ್ಷದ ದೀಪಾವಳಿ ಹಬ್ಬಕ್ಕೆ ಪ್ರೇಕ್ಷಕರ ಮುಂದೆ ಬರುತ್ತೇವೆ ಎಂದು ಘೋಷಣೆ ಮಾಡಿದೆ..

ನವೆಂಬರ್ 4 ರಂದು ದೀಪಾವಳಿ ಹಬ್ಬಕ್ಕೆ ‘ಅಣ್ಣಾಥೆ’ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.  ‘ಅಣ್ಣಾಥೆ’ , ಶಿವ ನಿರ್ದೇಶಿಸುತ್ತಿದ್ದಾರೆ. ನಯನತಾರಾ, ಕೀರ್ತಿ ಸುರೇಶ್, ಖುಷ್ಬೂ, ಮೀನಾ ಹಾಗೂ ಪ್ರಕಾಶ್ ರಾಜ್ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿದ್ದಾರೆ. ಪೋಸ್ಟರ್ ನೋಡ್ತಿದ್ರೆ ರಜನಿ ಫ್ಯಾನ್ಸ್​​ಗೆ ಬೇಜಾನ್ ರಜನಿ ಸ್ಟೈಲ್ ರಂಜನೆ ಸಿಗೋ ಸೂಚನೆ ಸಿಕ್ತಿದೆ..

Source: newsfirstlive.com Source link