‘ನನಗೀಗಲೇ ಇಬ್ಬರು ಮಕ್ಕಳಿದ್ದಾರೆ’.. ನನ್ನ ಪತಿಯನ್ನ ವಾಪಸ್​ ಆಫೀಸ್​​ಗೆ ಕರೆಸಿಕೊಳ್ಳಿ ಎಂದು ಗೋಗರೆದ ಮಹಿಳೆ

‘ನನಗೀಗಲೇ ಇಬ್ಬರು ಮಕ್ಕಳಿದ್ದಾರೆ’.. ನನ್ನ ಪತಿಯನ್ನ ವಾಪಸ್​ ಆಫೀಸ್​​ಗೆ ಕರೆಸಿಕೊಳ್ಳಿ ಎಂದು ಗೋಗರೆದ ಮಹಿಳೆ

ಮಹಿಳೆಯೊಬ್ಬಳು ತನ್ನ ಪತಿ ಕೆಲಸ ಮಾಡುವ ಬಾಸ್​ಗೆ ಪತ್ರವೊಂದನ್ನು ಬರೆದು ನನ್ನ ಪತಿಯ ವರ್ಕ್ ಫ್ರಮ್ ಹೋಮ್ ಕ್ಯಾನ್ಸಲ್ ಮಾಡಿ ಅವರನ್ನು ವಾಪಸ್ ಆಫೀಸ್​ಗೆ ಕರೆಸಿಕೊಂಡು ನನ್ನ ಸಂಸಾರವನ್ನ ಉಳಿಸಿ ಎಂದು ಗೋಗರೆದಿರುವ ಘಟನೆ ನಡೆದಿದೆ.

ಹರ್ಷ ಗೋಯೆಂಕ ಎಂಬುವವರು ಟ್ವಿಟರ್​​ನಲ್ಲಿ ಮಹಿಳೆ ಬರೆದ ಪತ್ರವನ್ನು ಹಂಚಿಕೊಂಡಿದ್ದಾರೆ. ಪತ್ರದಲ್ಲಿ ಮಹಿಳೆ ಹೀಗೆ ಗೋಗರೆದಿದ್ದಾರೆ..

ನಾನು ನಿಮ್ಮ ಉದ್ಯೋಗಿ ಮನೋಜ್ ಅವರ ಪತ್ನಿ. ಮನೋಜ್ ಅವರನ್ನು ದಯವಿಟ್ಟು ಆಫೀಸ್​ಗೆ ವಾಪಸ್ ಕರೆಸಿಕೊಳ್ಳುವಂತೆ ಮನವಿ ಮಾಡುತ್ತೇನೆ. ಅವರು ಎರಡು ಬಾರಿ ವ್ಯಾಕ್ಸಿನ್ ತೆಗೆದುಕೊಂಡಿದ್ದಾರೆ ಮತ್ತು ಕೋವಿಡ್ ನಿಯಮಗಳನ್ನು ಪಾಲಿಸುತ್ತಾರೆ.
ವರ್ಕ್ ಫ್ರಮ್ ಹೋಮ್ ಮತ್ತಷ್ಟು ದಿನ ಮುಂದುವರೆದರೆ ನಮ್ಮ ದಾಂಪತ್ಯ ಜೀವನ ಮುರಿದು ಬೀಳುತ್ತದೆ. ಅವರು ದಿನಕ್ಕೆ 10 ಬಾರಿ ಕಾಫಿ ಸೇವಿಸುತ್ತಾರೆ. ಬೇರೆ ಬೇರೆ ರೂಮ್​ನಲ್ಲಿ ಕೂತು ಗಲೀಜು ಮಾಡುತ್ತಾರೆ. ಪದೇ ಪದೇ ಊಟ ಕೇಳುತ್ತಿರುತ್ತಾರೆ. ಕೆಲಸ ಮಾಡುವಾಗಲೇ ಅವರು ನಿದ್ರೆಗೆ ಜಾರಿರೋದನ್ನೂ ನೋಡಿದ್ದೇನೆ. ನನಗೆ ನೋಡಿಕೊಳ್ಳಲು ಈಗಲೇ 2 ಮಕ್ಕಳಿವೆ.. ದಯವಿಟ್ಟು ಅವರನ್ನ ವಾಪಸ್ ಕರೆದುಕೊಂಡು ನನ್ನ ಸ್ವಾಸ್ಥ್ಯ ಉಳಿಸಿ..

Source: newsfirstlive.com Source link