ದೆಹಲಿಯಲ್ಲಿ ಮಹಾಮಳೆ: ರಸ್ತೆ ಮಧ್ಯೆ ಬೋಟ್ ಇಳಿಸಿ ಬಿಜೆಪಿ ಮುಖಂಡ ಮಾಡಿದ್ದೇನು.?

ದೆಹಲಿಯಲ್ಲಿ ಮಹಾಮಳೆ: ರಸ್ತೆ ಮಧ್ಯೆ ಬೋಟ್ ಇಳಿಸಿ ಬಿಜೆಪಿ ಮುಖಂಡ ಮಾಡಿದ್ದೇನು.?

ನವದೆಹಲಿ: ದೆಹಲಿಯಲ್ಲಿ ಧಾರಕಾರ ಮಳೆ ಸುರಿಯುತ್ತಿದ್ದು ರಾಜಧಾನಿಯ ಸ್ಥಿತಿ ಅಧೋಗತಿ ಎಂಬಂತಾಗಿದೆ. ದೆಹಲಿಯ ಮೂಲೆ ಮೂಲೆಯಲ್ಲೂ ನೀರು ನದಿಯಂತೆ ಹರಿಯುತ್ತಿದ್ದು ಜನರು ಸಂಕಷ್ಟಕ್ಕೊಳಗಾಗಿದ್ದಾರೆ. ಮನೆಗಳಿಗೂ ನೀರು ನುಗ್ಗಿ, ರಸ್ತೆಗಳಲ್ಲೂ ನೀರು ನಿಂತು ಟ್ರಾಫಿಕ್ ಜಾಮ್ ಕೂಡ ನಿರ್ಮಾಣವಾಗಿದೆ.

ಈ ಮಧ್ಯೆ ರಸ್ತೆಯಲ್ಲಿ ನೀರು ನದಿಯಂತೆ ಹರಿಯುತ್ತಿದ್ದು ಮಕ್ಕಳು ಮಳೆ ನೀರಿನಲ್ಲೇ ಈಜಾಡಿದ ದೃರ್ಶಯ ಕಂಡುಬಂದಿದೆ. ಇತ್ತ ಬಿಜೆಪಿ ನಾಯಕ ತೇಜಿಂದರ್ ಪಾಲ್ ಸಿಂಗ್ ಬಗ್ಗಾ ರಸ್ತೆಯಲ್ಲಿ ನಿಂತಿದ್ದ ನೀರಿನಲ್ಲಿ ದೋಣಿಯೊಂದನ್ನ ಇಳಿಸಿ ರಿವರ್ ರಾಫ್ಟಿಂಗ್ ಮಾಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ದೆಹಲಿ ದುಸ್ಥಿತಿಯ ವಿಡಿಯೋಗಳು ವೈರಲ್ ಆಗಿವೆ.

Source: newsfirstlive.com Source link