ಅಫ್ಘಾನಿಸ್ತಾನದಿಂದ T20 ವರ್ಲ್ಡ್​ಕಪ್ ಟೀಂ ಘೋಷಣೆ; ಕ್ಯಾಪ್ಟನ್ ಸ್ಥಾನದಿಂದ ಕೆಳಗಿಳಿದ ರಶೀದ್ ಖಾನ್

ಅಫ್ಘಾನಿಸ್ತಾನದಿಂದ T20 ವರ್ಲ್ಡ್​ಕಪ್ ಟೀಂ ಘೋಷಣೆ; ಕ್ಯಾಪ್ಟನ್ ಸ್ಥಾನದಿಂದ ಕೆಳಗಿಳಿದ ರಶೀದ್ ಖಾನ್

ತಾಲಿಬಾನಿಗಳು ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡು ಸರ್ಕಾರ ರಚಿಸಲು ಮುಂದಾಗಿದ್ದಾರೆ. ಈ ಬೆನ್ನಲ್ಲೇ ಅಫ್ಘಾನಿಸ್ತಾನ್ ಕ್ರಿಕೆಟ್ ಬೋರ್ಡ್ ಟಿ20 ವರ್ಲ್ಡ್​ ಕಪ್​ಗೆ ಟೀಮ್ ಅನೌನ್ಸ್ ಮಾಡಿದೆ. ಟಿ20 ಕ್ರಿಕೆಟ್ ಟೀಂಗೆ ರಶೀದ್​ ಖಾನ್​ರನ್ನ ಕ್ಯಾಪ್ಟನ್ ಆಗಿ ಆಯ್ಕೆ ಮಾಡಲಾಗಿದೆ. ಆದ್ರೆ ರಶೀದ್ ಖಾನ್ ಈ ಟೀಂನ ನಾಯಕತ್ವ ನನಗೆ ಬೇಡವೆಂದು ತಮ್ಮ ಸ್ಥಾನದಿಂದ ಕೆಳಗಿಳಿಸಿದ್ದಾರೆ.

ಇದನ್ನೂ ಓದಿ: ‘ಅಫ್ಘಾನ್​​ನಲ್ಲಿ ಸರ್ಕಾರ ರಚನೆಗೆ ಮುಂದಾದ ತಾಲಿಬಾನ್..​​​​ ಇತರೆ ಉಗ್ರರಿಗೆ ಪ್ರೇರಣೆ’- ಹೀಗಂದಿದ್ದು ಯಾರು?

ಗುರುವಾರ ಅಫ್ಘಾನಿಸ್ತಾನ್ ಕ್ರಿಕೆಟ್ ಬೋರ್ಡ್ ಟಿ20 ವರ್ಲ್ಡ್​ಕಪ್​ಗೆ ಟೀಂ ಅನೌನ್ಸ್ ಮಾಡಿದೆ. ಇದಾದ ಕೆಲವೇ ನಿಮಿಷಗಳಲ್ಲಿ ರಶೀದ್ ಖಾನ್ ತಾನು ನಾಯಕತ್ವ ಸ್ಥಾನದಿಂದ ಕೆಳಗಿಳಿದಿರೋದಾಗಿ ಘೋಷಿಸಿದ್ದಾರೆ. ಅಲ್ಲದೇ ಅಫ್ಘಾನಿಸ್ತಾನಕ್ಕಾಗಿ ಆಡುವುದು ನನಗೆ ಹೆಮ್ಮೆಯ ವಿಷಯ ಎಂದು ಹೇಳುತ್ತಲೇ ನಯವಾಗಿಯೇ ನಾಯಕತ್ವ ನಿರಾಕರಿಸಿದ್ದಾರೆ.

ಇದನ್ನೂ ಓದಿ: ಮಹಿಳೆಯರು ಮಕ್ಕಳಿಗೆ ಜನ್ಮ ಕೊಡಲು ಮಾತ್ರ ಸಾಧ್ಯ.. ಆಳುವುದಕ್ಕಲ್ಲ- ತಾಲಿಬಾನ್ ವಕ್ತಾರ

ಈ ಹಿಂದೆ ತಾಲಿಬಾನಿಗಳು ಕಾಬೂಲ್​ನ್ನು ವಶಪಡಿಸಿಕೊಳ್ಳಲು ಮುಂದಾಗಿದ್ದಾಗ ರಶೀದ್ ಖಾನ್ ನನ್ನ ದೇಶದ ಅಮಾಯಕರು ಸಾವಿರಾರು ಸಂಖ್ಯೆ ಪ್ರತೀ ದಿನ ಹುತಾತ್ಮರಾಗುತ್ತಿದ್ದಾರೆ. ಜಗತ್ತಿನ ನಾಯಕರು ನಮಗೆ ಸಹಾಯ ಮಾಡಬೇಕೆಂದು ಮನವಿ ಮಾಡಿಕೊಂಡಿದ್ದರು.

ಇದನ್ನೂ ಓದಿ: ತಾಲಿಬಾನ್‌ ಸರ್ಕಾರಕ್ಕೆ ಮಾನ್ಯತೆ ಸಿಗುತ್ತಾ?ತಾಲಿಬಾನ್‌ ವಿಚಾರದಲ್ಲಿ ಭಾರತದ ನಿರ್ಧಾರ ಏನು ?

ಅಫ್ಘಾನಿಸ್ತಾನ್ ಕ್ರಿಕೆಟ್ ಬೋರ್ಡ್ ಘೋಷಿಸಿದ ಟೀಂ ಹೀಗಿದೆ. ರಶೀದ್ ಖಾನ್(ಕ್ಯಾಪ್ಟನ್), ರಹ್ಮತುಲ್ಲಾ ಗುರ್ಬಜ್. ಹಜ್ರತುಲ್ಲಾ ಝಜೈ, ಉಸ್ಮಾನ್ ಘನಿ, ಅಸ್ಘರ್ ಅಫ್ಘನ್, ಮೊಹಮ್ಮದ್ ನಬಿ, ನಜಿಬುಲ್ಲಾ ಜದ್ರಾನ್, ಹಸ್ಮತುಲ್ಲಾ ಶಾಹಿದಿ, ಮೊಹಮ್ಮದ್ ಶಾಹ್ಜಾದ್, ಮುಜೀಬ್ ಉರ್ ರಹ್ಮಾನ್, ಕರಿಮ್ ಜನತ್, ಗುಲ್ಬದಿನ್ ನಯಿಬ್, ನವೀನ್ ಉಲ ಹಕ್, ಹಮಿದ್ ಹಸನ್, ಶರಫುದ್ದೀನ್ ಅಶ್ರಫ್, ದವ್ಲತ್ ಜದ್ರಾನ್, ಶಪೂರ್ ಜದ್ರಾನ್, ಕಾಯಿಸ್ ಅಹ್ಮದ್.

Source: newsfirstlive.com Source link