ಪಬ್ಲಿಕ್ ಟಿವಿ ಇಂಪ್ಯಾಕ್ಟ್: ಕೊಚ್ಚಿಹೋದ ಸೇತುವೆಗೆ ಡಿಸಿ, ಎಸ್ಪಿ ಭೇಟಿ, ಶೀಘ್ರ ದುರಸ್ತಿಗೆ ಆದೇಶ

ಯಾದಗಿರಿ: ಕೊನೆಗೂ ಯಾದಗಿರಿ ಜಿಲ್ಲಾಡಳಿತ ನಿದ್ದೆಯಿಂದ ಎಚ್ಚೆತ್ತುಕೊಂಡಿದೆ. ಕೊಚ್ಚಿ ಹೋದ ಯಡ್ಡಳ್ಳಿ ಗ್ರಾಮದ ಸೇತುವೆಯ ಸುದ್ದಿ ಪಬ್ಲಿಕ್ ಟಿವಿ ಹಾಗೂ ವೆಬ್‍ಸೈಟಲ್ಲಿ ಪ್ರಕಟವಾಗುತ್ತಿದ್ದಂತೆಯೇ ಅಧಿಕಾರಿಗಳು ಓಡೋಡಿ ಬಂದಿದ್ದಾರೆ. ಅಲ್ಲದೇ ಕೊಚ್ಚಿ ಹೋದ ಸೇತುವೆಯನ್ನು ಶೀಘ್ರ ದುರಸ್ತಿ ಮಾಡುವಂತೆ ಆದೇಶ ಹೊರಡಿಸಿದ್ದಾರೆ.

ಏನಾಗಿತ್ತು?: ಯಾದಗಿರಿ ಜಿಲ್ಲೆಯಲ್ಲಿ ವರುಣನ ಆರ್ಭಟದಿಂದ ಹತ್ತಿಕುಣಿ ಜಲಾಶಯದಿಂದ ಹೆಚ್ಚಿನ ಪ್ರಮಾಣದ ನೀರು ಹರಿಬಿಟ್ಟಿದ್ದರಿಂದಾಗಿ ನೀರಿನ ರಭಸಕ್ಕೆ ಯಡ್ಡಳ್ಳಿ ಗ್ರಾಮದ ಸೇತುವೆ ಕೊಚ್ಚಿಹೋಗಿತ್ತು. ಯಾದಗಿರಿ ತಾಲೂಕಿನಲ್ಲಿ ಹತ್ತಿಕುಣಿ ಜಲಾಶಯ ಮತ್ತು ಯಡ್ಡಳ್ಳಿಗ್ರಾಮಗಳಿದ್ದವು. ಸೇತುವೆ ನಾಶವಾದ ಹಿನ್ನೆಲೆಯಲ್ಲಿ ಯಡ್ಡಳ್ಳಿ ಗ್ರಾಮಕ್ಕೆ ತೆರಳಲು ಜನರು ಸಂಕಷ್ಟಪಡುವಂತಾಗಿತ್ತು. ಇದನ್ನೂ ಓದಿ:  ಅರಣ್ಯ ಇಲಾಖೆಯ ಹುತಾತ್ಮ ಅಧಿಕಾರಿ, ಸಿಬ್ಬಂದಿಗೆ ಗೌರವ ನಮನ ಸಲ್ಲಿಕೆ

ಇಷ್ಟೆಲ್ಲಾ ಅವಾಂತರಗಳು ನಡೆದರೂ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಸ್ಥಳಕ್ಕೆ ಭೇಟಿ ನೀಡಿ, ಜನರ ಸಮಸ್ಯೆಗಳನ್ನು ಆಲಿಸಲು ಸಿದ್ಧರಿರಲಿಲ್ಲ. ಈ ವಿಚಾರ ಗಮನಕ್ಕೆ ಬಂದಾಗ ಪಬ್ಲಿಕ್ ಟಿವಿ ಹಾಗೂ ವೆಬ್‍ಸೈಟಲ್ಲಿ ಈ ಸುದ್ದಿ ಪ್ರಕಟವಾಗಿತ್ತು. ಇದನ್ನೂ ಓದಿ: ನನ್ನ ಮದ್ವೆಯಾಗುವ ಹುಡುಗ 40 ಸಾವಿರ ಆದ್ರೂ ದುಡಿಯಬೇಕು: ಅದಿತಿ  

blank

sಸುದ್ದಿ ಪ್ರಸಾರವಾಗುತ್ತಿದ್ದಂತೆಯೇ ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಮತ್ತು ಎಸ್‍ಪಿ ವೇದಮೂರ್ತಿ ಸೇತುವೆ ಕೊಚ್ಚಿ ಹೋದ ಸ್ಥಳಕ್ಕೆ ಭೇಟಿ ನೀಡಿದ್ದು, ಶೀಘ್ರವಾಗಿ ದುರಸ್ತಿಗೆ ಆದೇಶ ನೀಡಿದ್ದಾರೆ. ಅಲ್ಲದೆ ಇಲ್ಲಿನ ಗ್ರಾಮಸ್ಥರನ್ನು ಮಾತನಾಡಿಸಿ ಅವರ ಸಮಸ್ಯೆಗಳನ್ನು ಆಲಿಸಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವೇದಮೂರ್ತಿ ಅವರು ಹಳ್ಳದಲ್ಲಿ ನಡೆಯುತ್ತಿರುವ ಅಕ್ರಮ ಮರಳು ದಂಧೆಗೆ ಕಡಿವಾಣ ಹಾಕಲು ಮುಂದಾಗಿದ್ದು, ಸೇತುವೆ ಅಕ್ಕಪಕ್ಕದಲ್ಲಿ ಪೊಲೀಸರನ್ನು ಗಸ್ತು ಹಾಕಿದ್ದಾರೆ. ಇದನ್ನೂ ಓದಿ:  ಕಾಂಗ್ರೆಸ್ ವೋಟಿಗೋಸ್ಕರ ಧರ್ಮವನ್ನ ಉಪಯೋಗಿಸ್ತಾರೆ: ಬಿ.ಸಿ ನಾಗೇಶ್

ವರದಿ ಮೂಲಕ ಜಿಲ್ಲಾಡಳಿತ ಕಣ್ಣು ತೆರೆಸಿದ್ದಕ್ಕಾಗಿ ಗ್ರಾಮಸ್ಥರು ಪಬ್ಲಿಕ್ ಟಿವಿಗೆ ಧನ್ಯವಾದ ಹೇಳಿದ್ದಾರೆ.

Source: publictv.in Source link