ಪ್ರಮಾಣವಚನ ಕಾರ್ಯಕ್ರಮ ರದ್ದುಪಡಿಸಿದ ತಾಲಿಬಾನಿಗಳಿಗೆ ಬೆನ್ನು ತಟ್ಟಿದ ಚೀನಾ, ಪಾಕಿಸ್ತಾನ ಹೇಳಿದ್ದೇನು?

ಪ್ರಮಾಣವಚನ ಕಾರ್ಯಕ್ರಮ ರದ್ದುಪಡಿಸಿದ ತಾಲಿಬಾನಿಗಳಿಗೆ ಬೆನ್ನು ತಟ್ಟಿದ ಚೀನಾ, ಪಾಕಿಸ್ತಾನ ಹೇಳಿದ್ದೇನು?

ಶಾಂತಿ ಬಿತ್ತಿದ್ದ ನೆಲದಲ್ಲಿ ಕ್ರೌರ್ಯ ಮೆರೆದ ತಾಲಿಬಾನಿಗಳು ಉಗ್ರ ಸರ್ಕಾರವನ್ನೂ ರಚನೆ ಮಾಡಿಕೊಂಡಿದ್ದಾರೆ. ಈಗ ಆರ್ಥಿಕ ಲೆಕ್ಕಾಚಾರದಲ್ಲಿರೋ ರಕ್ತಪಿಪಾಸುಗಳು ಹಣ ಪೋಲಾಗುತ್ತೆ ಅಂತ ಪ್ರಮಾಣ ವಚನ ಸಮಾರಂಭವನ್ನೇ ಬ್ಯಾನ್ ಮಾಡಿದ್ದಾರೆ. ಈ ನಡುವೆ ಚೀನಾ, ಪಾಕಿಸ್ತಾನ ನರ ರಕ್ಕಸರನ್ನ ಬೆನ್ನು ತಟ್ಟಿ ಭೇಷ್​ ಅಂದಿದೆ..

ಪ್ರಮಾಣವಚನ ಕಾರ್ಯಕ್ರಮ ರದ್ದುಪಡಿಸಿದ ತಾಲಿಬಾನಿಗಳು
ನರ ರಕ್ಕಸರ ಆಡಳಿತಕ್ಕೆ ಚೀನಾ, ಪಾಕಿಸ್ತಾನ ಶಹಬ್ಬಾಸ್​ಗಿರಿ

ಬರೀ ಉಗ್ರವಾದವನ್ನೇ ಉಸಿರಾಡುತ್ತಿರೋ ತಾಲಿಬಾನಿಗಳು ಅಫ್ಘಾನ್​ನಲ್ಲಿ ಕೊನೆಗೂ ಕ್ರೌರ್ಯ ಸರ್ಕಾರ ಕಟ್ಟಿಬಿಟ್ಟಿದ್ದಾರೆ. ಈ ನಡುವೆ ಸೆ. 11ಕ್ಕೆ ಪ್ರಮಾಣ ವಚನ ಸಮಾರಂಭ ಇರಲಿದೆ ಅಂತ ಅನೌನ್ಸ್ ಕೂಡ ಮಾಡಿದ್ದ ತಾಲಿಬಾನ್​ ಸರ್ಕಾರ ಈಗ ದಿಢೀರ್ ಅಂತಾ ಸಮಾರಂಭವನ್ನೇ ರದ್ದುಮಾಡಿದೆ. ಸಮಾರಂಭ ಮಾಡೋದರಿಂದಾಗಿ ಹಣ, ಸಮಯ ವ್ಯರ್ಥವಾಗುತ್ತದೆ. ಅಂತಹ ಮುಗ್ಧ ಜೀವಗಳನ್ನು ನುಂಗಿದ ರಾಕ್ಷಸರು ನಷ್ಟದ ಬಗ್ಗೆ ಮಾತನಾಡಿದ್ದಾರೆ. ಇನ್ನು, ತಾಲಿಬಾನ್​ ಸರ್ಕಾರದ ಈ ನಿರ್ಧಾರವನ್ನು ಚೀನಾ ಸ್ವಾಗತಿಸಿದೆ. ಪಾಪಿ ಪಾಕಿಸ್ತಾನ ಒಂದು ಹೆಜ್ಜೆ ಮುಂದೆ ಹೋಗಿ ತಾಲಿಬಾನ್​ ಸರ್ಕಾರ ಅಪ್ಘಾನ್​ನಲ್ಲಿ ಉತ್ತಮ ಆಡಳಿತ ಸಿಗಲಿದೆ ಅಂತ ವಿದೇಶಾಂಗ ಕಚೇರಿ ವಕ್ತಾರ ಅಸಿಮ್ ಇಫ್ತಿಕಾರ್ ಅಹ್ಮದ್ ರಕ್ಕಸರನ್ನ ಬಣ್ಣಿಸಿದ್ದಾರೆ.

blank

ಅಪ್ಘಾನಿಸ್ತಾನದಲ್ಲಿ ಉಗ್ರರ ಕ್ರೌರ್ಯ ಮೆರವಣಿಗೆ ಮುಂದುವರೆದಿದೆ. ಪಂಜ್​ಶೀರ್​ನ ಅಮ್ರುಲ್ಲಾ ಸಲೇಃ ಹಿರಿಯ ಸಹೋದರನ್ನ ತಾಲಿಬಾನಿಗಳು ಹತ್ಯೆ ಮಾಡಿದ್ದಾರೆ. ಅಫ್ಘಾನಿಸ್ತಾನದ ಮಾಜಿ ಉಪಾದ್ಯಕ್ಷ ಅಮ್ರುಲ್ಲಾ ಸಲೇಃ ಹಿರಿಯ ಸೋದರ ರೋಹುಲ್ಲಾ ಸಲೇಃ ನನ್ನ ತಾಲಿಬಾನಿಗಳು ಹತ್ಯೆ ಮಾಡಿದ್ದಾರೆ. ಅಲ್ಲದೇ ಕ್ರೂರ ಸರ್ಕಾರದಲ್ಲಿ ಮಹಿಳಾ ಸ್ವಾತಂತ್ರ್ಯಕ್ಕೆ ನಿರ್ಬಂಧ ವಿಧಿಸಿರೋ ಬಗ್ಗೆ ಮತ್ತೆ ಉಚ್ಛರಿಸಿದ್ದಾರೆ.

blank

ಮಹಿಳೆಯರಿಗೆ ಉದ್ಯೋಗ ಮಾಡೋದಕ್ಕೆ ನಿಷೇಧವಿದೆ. ಸರ್ಕಾರದಲ್ಲಿಯೂ ಮಹಿಳೆಯರಿಗೆ ಅವಕಾಶ ಇಲ್ಲ. ಮಹಿಳೆಯರು ಕೇವಲ ಮಕ್ಕಳಿಗೆ ಜನ್ಮ ನೀಡಿ ಜತನ ಮಾಡಬೇಕಷ್ಟೇ ಅಂತ ತಾಲಿಬಾನ್​ ವಕ್ತಾರ ಜೆಕ್ರುಲ್ಲಾ ಹಾಶಮಿ ಘೋಷಣೆ ಮಾಡಿದ್ದಾನೆ. ಅಲ್ಲದೇ ತಾಲಿಬಾನ್​ ಪುನ: ಉದ್ಯೋಗಕ್ಕೆ ಹಾಜರಾಗಬೇಕು ಅಂತ ತಾಲಿಬಾನ್​ ಸರ್ಕಾರ ಘೋಷಿಸಿದೆ.

ಪಾಕ್​ನಿಂದ ಕಾಬೂಲ್​ಗೆ ವಾಣಿಜ್ಯ ವಿಮಾನ ಸೇವೆ ಶುರು

ಈ ನಡುವೆ ಪಾಕಿಸ್ತಾನ ಇಂಟರ್​ನ್ಯಾಷನಲ್​ ಏರ್​ಲೈನ್ಸ್​ ಮುಂದಿನ ವಾರದಿಂದ ಕಾಬೂಲ್​ಗೆ ವಾಣಿಜ್ಯ ವಿಮಾನ ಸೇವೆ ಒದಗಿಸೋದಕ್ಕೆ ಮುಂದಾಗಿದೆ. ಉಗ್ರರು ಅಫ್ಘಾನಿಸ್ತಾನವನ್ನ ವಶಪಡಿಸಿಕೊಂಡ ನಂತರದಲ್ಲಿ ಇದು ಮೊದಲ ವಾಣಿಜ್ಯ ವಿಮಾನ ಸೇವೆ ಅಂತಲೂ ಪಾಕ್​ ಹೇಳಿಕೊಂಡಿದೆ.

blank

ಒಟ್ಟಾರೆ, ಎಷ್ಟೋ ಅಮಾಯಕ ಜೀವಗಳ ರಕ್ತ ಹೀರಿದ ರಕ್ಕಸರು ಈಗ ಲಾಭ ನಷ್ಟದ ಲೆಕ್ಕಾಚಾರದಲ್ಲಿದ್ದಾರೆ. ಸ್ತ್ರೀ ಸ್ವಾತಂತ್ರ್ಯ ಕಿತ್ತುಕೊಂಡಿರೋ ತಾಲಿಬಾನಿಗಳು ಉಗ್ರ ದಾಳಿಯ 20ನೇ ವಾರ್ಷಿಕೋತ್ಸವದ ಹಿನ್ನೆಲೆ ಸೆ. 11ಕ್ಕೆ ನಿಗದಿಯಾಗಿದ್ದ ಪ್ರಮಾಣ ವಚನ ಸಮಾರಂಭವನ್ನ ದುಂದುವೆಚ್ಚ ಅಂತಾ ರದ್ದುಪಡಿಸಿದ್ದಾರೆ. ಪಂಜ್​ಶೀರ್​ನ ನಾಯಕ ರೋಹುಲ್ಲಾ ಸಲೇಃನನ್ನ ಹತ್ಯೆ ಮಾಡೋ ಮೂಲಕ ನಾಯಿ ಬಾಲ ಯಾವತ್ತಿದ್ರೂ ಡೊಂಕೇ ಅನ್ನೋದನ್ನ ಸಾಬೀತುಪಡಿಸಿದ್ದಾರೆ

Source: newsfirstlive.com Source link