ಡ್ರೈವ್ ಮಾಡುವಾಗಲೇ KSRTC ಚಾಲಕನಿಗೆ ಲೋ ಬಿಪಿ.. ತಪ್ಪಿದ ಮಹಾದುರಂತ​​

ಡ್ರೈವ್ ಮಾಡುವಾಗಲೇ KSRTC ಚಾಲಕನಿಗೆ ಲೋ ಬಿಪಿ.. ತಪ್ಪಿದ ಮಹಾದುರಂತ​​

ಮಂಡ್ಯ: ಚಾಲಕನಿಗೆ ಚಾಲನೆ ವೇಳೆ ಲೋ ಬಿಪಿ ಕಾಣಿಸಿಕೊಂಡ ಪರಿಣಾಮ ಬಸ್​ ಮೇಲಿನ ನಿಯಂತ್ರಣ ತಪ್ಪಿ ಬಸ್ ಕ್ಯಾಂಟರ್​ಗೆ ಗುದ್ದಿದ ಘಟನೆ ಜಿಲ್ಲೆಯ ಶ್ರೀರಂಗಪಟ್ಟಣದ ಬಾಬುರಾಯನಕೊಪ್ಪಲು ಬಳಿ ನಡೆದಿದೆ.

blank

KSRTC ಬಸ್ ಚಾಲಕ ಮಂಜುನಾಥ್ ಗೆ ಚಾಲನೆ ವೇಳೆ ಲೋ ಬಿಪಿ ಕಾಣಿಸಿಕೊಂಡಿದೆ ಎನ್ನಲಾಗಿದ್ದು, ಈ ವೇಳೆ ಬಸ್​ನ ಮೇಲಿನ ಸಂಪೂರ್ಣ ನಿಯಂತ್ರಣ ಕಳೆದುಕೊಂಡ ಚಾಲಕ ಮಂಜುನಾಥ್, ಕ್ಯಾಂಟರ್​ಗೆ ಗುದ್ದಿದ್ದಾನೆ. ಈ ದುರ್ಘಟನೆಯಲ್ಲಿ ಅದೃಷ್ಟವಶಾತ್​ ಚಾಲಕ ಮಂಜುನಾಥ್​ಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಬಿಟ್ಟರೆ, ಮಹಾ ದುರಂತವೊಂದು ತಪ್ಪಿದಂತಾಗಿದೆ. ಇನ್ನು ಈ KSRTC ಬಸ್ ನಂಜನಗೂಡು ಡಿಪೋಗೆ ಸೇರಿದ ಬಸ್ ಎನ್ನಲಾಗಿದ್ದು, ಮೈಸೂರಿನಿಂದ ಬೆಂಗಳೂರು ಕಡೆ ತೆರಳುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ.

Source: newsfirstlive.com Source link