ವಿಜಯಪುರದ ಕುವರಿಗೆ ರಾಷ್ಟ್ರೀಯ ಪ್ರಶಸ್ತಿ

ವಿಜಯಪುರ: ಏಮ್ಸ್, ಅಖಿಲ ಭಾರತ ಮಟ್ಟದ ಪರೀಕ್ಷೆಯಲ್ಲಿ ವಿಜಯಪುರದ ಕುವರಿ ಉತ್ತಮ ಸಾಧನೆ ಮಾಡಿದ್ದು, ರಾಷ್ಟ್ರೀಯ ಪ್ರಶಸ್ತಿ ಪಡೆದು ದೇಶವೇ ಹೆಮ್ಮೆ ಪಡುವಂತಹ ಕೆಲಸ ಮಾಡಿದ್ದಾರೆ.

ವಿಜಯಪುರ ನಗರದ ನಿವಾಸಿ ದಿವ್ಯಾ ಹಿರೊಳ್ಳಿ ಆಲ್ ಇಂಡಿಯಾ ಇನ್‍ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್(ಏಮ್ಸ್) ಸಂಸ್ಥೆಯ ಅಖಿಲ ಭಾರತಮಟ್ಟದ ಪರೀಕ್ಷೆಯಲ್ಲಿ ರಾಷ್ಟ್ರಕ್ಕೆ ಪ್ರಥಮ ರ್ಯಾಂಕ್ ಪಡೆದಿದ್ದಾರೆ. ಈ ಮೂಲಕ ಕುಟುಂಬದವರು ಮಾತ್ರವಲ್ಲ, ಜಿಲ್ಲೆಯೇ ಖುಷಿ ಪಡುವಂತಹ ಕೆಲಸ ಮಾಡಿದ್ದಾರೆ. ಇದನ್ನೂ ಓದಿ:  ರೈತರು, ನೆರೆ ಸಂತ್ರಸ್ತರಿಗೆ ಪರಿಹಾರಕ್ಕೆ ಅಧಿವೇಶನದಲ್ಲಿ ಒತ್ತಾಯ: ಸತೀಶ್ ಜಾರಕಿಹೊಳಿ

ನವದೆಹಲಿಯ ಏಮ್ಸ್, ಅಖಿಲ ಭಾರತ ಮಟ್ಟದಲ್ಲಿ ಆಯೋಜಿಸಿದ್ದ ಪರೀಕ್ಷೆ ಫಲಿತಾಂಶ ಇಂದು ಪ್ರಕಟಗೊಂಡಿದ್ದು, ನವೆಂಬರ್ 20 ರಂದು ಪರೀಕ್ಷೆ ನಡೆದಿತ್ತು. ದಿವ್ಯ ಹಿರೊಳ್ಳಿ ಅವರು ಏಮ್ಸ್ ಪರೀಕ್ಷೆಯಲ್ಲಿ ಶೇ.67.08 ಅಂಕಗಳೊಂದಿಗೆ ದೇಶಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. ಇದನ್ನೂ ಓದಿ:  ಪಬ್ಲಿಕ್ ಟಿವಿ ಇಂಪ್ಯಾಕ್ಟ್: ಕೊಚ್ಚಿಹೋದ ಸೇತುವೆಗೆ ಡಿಸಿ, ಎಸ್ಪಿ ಭೇಟಿ, ಶೀಘ್ರ ದುರಸ್ತಿಗೆ ಆದೇಶ

ದಿವ್ಯಾ ತಂದೆ ಅರವಿಂದ ಹಿರೊಳ್ಳಿ ಅವರು ನಗರದ ಸೆಷನ್ ಕೋರ್ಟ್‍ನಲ್ಲಿ ಹಿರಿಯ ವಕೀಲರಾಗಿದ್ದಾರೆ. ದಿವ್ಯಾ ಅವರು ನಗರದ ಬಿಎಲ್‍ಡಿ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ವೈದ್ಯಕೀಯ ಪದವಿ, ಹುಬ್ಬಳ್ಳಿಯ ಕಿಮ್ಸ್ ನಲ್ಲಿ ಎಂಡಿ, ಪಾಂಡಿಚೆರಿಯ ಜಿಪ್ ಮೆರ್ ನಲ್ಲಿ ಫೆಲೋಶಿಪ್ ಇನ್ ಕ್ರಿಟಿಕಲ್ ಕೇರ್ ಹಾಗೂ ಬೆಂಗಳೂರಿನ ನಿಮ್ಹಾನ್ಸನಲ್ಲಿ ಫೆಲೋಶಿಪ್ ಇನ್ ನ್ಯೂರೋ ಕ್ರಿಟಿಕಲ್ ಕೇರ್ ವ್ಯಾಸಾಂಗ ಮಾಡಿದ್ದಾರೆ.

Source: publictv.in Source link