ನಾಳೆ ನೀಟ್ ಪರೀಕ್ಷೆ- ಕನಿಷ್ಠ ಒಂದು ಡೋಸ್ ಲಸಿಕೆ ಪಡೆದವರಿಗೆ ಮಾತ್ರ ಅವಕಾಶ

– ಕೊರೊನಾ ಸೋಂಕಿತರು ಪರೀಕ್ಷೆ ಬರೆಯಲು ಪ್ರತ್ಯೇಕ ಕೊಠಡಿ

ನವದೆಹಲಿ: ವೈದ್ಯಕೀಯ, ದಂತ ವೈದ್ಯಕೀಯ ಹಾಗೂ ಆಯುಷ್ ಕೋರ್ಸ್‍ಗಳಿಗೆ ನಾಳೆ ದೇಶಾದ್ಯಂತ ನೀಟ್ ಎಕ್ಸಾಂ ನಡೆಯಲಿದೆ. ಆದರೆ ಕನಿಷ್ಠ ಒಂದು ಡೋಸ್ ಲಸಿಕೆ ಪಡೆದವರಿಗೆ ಮಾತ್ರ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುತ್ತಿದೆ.

ಮಧ್ಯಾಹ್ನ 2 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಪರೀಕ್ಷೆ ನಡೆಯಲಿದೆ. ದೇಶದ 201 ಹಾಗೂ ರಾಜ್ಯದ 9 ನಗರಗಳಲ್ಲಿ ನೀಟ್ ಪರೀಕ್ಷೆ ನಡೆಯಲಿದೆ. ವಿದ್ಯಾರ್ಥಿಗಳು ಕಡ್ಡಾಯವಾಗಿ ಒಂದು ಡೋಸ್ ಲಸಿಕೆಯನ್ನ ಪಡೆದಿರಬೇಕು. ಕೊರೊನಾ ಸೋಂಕಿತರೂ ಪರೀಕ್ಷೆ ಬರೆಯಬಹುದಾಗಿದ್ದು, ಪ್ರತ್ಯೇಕ ಕೊಠಡಿ ವ್ಯವಸ್ಥೆ ಇರಲಿದೆ. ಇದನ್ನೂ ಓದಿ: ರಾಜ್ಯದಲ್ಲಿಂದು 801 ಹೊಸ ಕೊರೊನಾ ಕೇಸ್- 1,142 ಡಿಸ್ಚಾರ್ಜ್, 15 ಸಾವು

ಪರೀಕ್ಷಾ ಕೇಂದ್ರದಲ್ಲಿ ಬೆಳಗ್ಗೆ 11 ಗಂಟೆಯಿಂದ ದಾಖಲೆಗಳ ಪರಿಶೀಲನೆ ಆರಂಭವಾಗಲಿದೆ. ಪರೀಕ್ಷೆ ಕೊಠಡಿಯಲ್ಲೇ ಪೆನ್ ಕೊಡಲಾಗುತ್ತದೆ. ವಾಚ್, ಫುಲ್ ಸ್ಲೀವ್ ಡ್ರೆಸ್, ಶೂ, ಬ್ಯಾಗ್, ಪರ್ಸ್ ನಿಷೇಧಿಸಲಾಗಿದೆ. ಈ ಬಾರಿ ನೀಟ್ ಪರೀಕ್ಷೆಗೆ ರಾಜ್ಯದಲ್ಲಿ 16 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ.

Source: publictv.in Source link