‘ಎಲೆಕ್ಷನ್​​​ ಮುಗಿದು 3 ವರ್ಷ ಆದ್ಮೇಲೆ ಬಂದ್ರಾ, ನಿಮ್ಮ 2 ಕೋಟಿ ಬ್ಯಾಡ ಮೊದ್ಲು ರಸ್ತೆ ಮಾಡಿ’- ಶಾಸಕನಿಗೆ ಗ್ರಾಮಸ್ಥರ ತರಾಟೆ

‘ಎಲೆಕ್ಷನ್​​​ ಮುಗಿದು 3 ವರ್ಷ ಆದ್ಮೇಲೆ ಬಂದ್ರಾ, ನಿಮ್ಮ 2 ಕೋಟಿ ಬ್ಯಾಡ ಮೊದ್ಲು ರಸ್ತೆ ಮಾಡಿ’- ಶಾಸಕನಿಗೆ ಗ್ರಾಮಸ್ಥರ ತರಾಟೆ

ಗದಗ: ಆ ಶಾಸಕ ಮಹಾಶಯ ಚುನಾವಣೆಯಲ್ಲಿ ಭರವಸೆ ಕೊಟ್ಟು ಆ ಗ್ರಾಮದತ್ತ ತಿರುಗಿಯೇ ನೋಡಿರಲಿಲ್ಲ. ಅದೊಂದು ರಸ್ತೆ ಸರಿ ಮಾಡುವಂತೆ ಗ್ರಾಮಸ್ಥರು ಹತ್ತಾರು ಬಾರಿ ಮನವಿ ಮಾಡಿದ್ರೂ ಕ್ಯಾರೇ ಎಂದಿರಲಿಲ್ಲ. ಆದ್ರೆ, ಯಾವಾಗ ಕಾರ್ಯಕ್ರಮ ಒಂದಕ್ಕೆ ಅಂತ ಆ ಶಾಸಕ ಗ್ರಾಮಕ್ಕೆ ಎಂಟ್ರಿ ಕೊಟ್ರೋ, ಕಾರ್ಯಕ್ರಮದ ವೇದಿಕೆಯಲ್ಲೇ ಶಾಸಕರಿಗೆ ಗ್ರಾಮಸ್ಥರು ಮಂಗಳಾರತಿ ಮಾಡಿರೋ ಪ್ರಸಂಗ ನಡೆದಿದೆ.

ಸರ್, ನಿಮ್ 2 ಕೋಟಿ ಬ್ಯಾಡ್ರಿ. ಮೊದ್ಲು ರೋಡ್ ಮಾಡ್ರಿ. ನಿಮ್ಮ ಆಶ್ವಾಸನೆನೂ ಬ್ಯಾಡ್ರಿ. ನಮ್ ಊರಿಗೆ ಮೊದ್ಲು ರಸ್ತೆ ಮಾಡ್ ಕೊಡ್ರಿ ಅಂತ ಅಲ್ಲಿದ್ದ ಜನ್ರೆಲ್ಲಾ ಕೂಗ್ತಿದ್ರೆ, ಇತ್ತ ಆ ಶಾಸಕರು ಕಂಗಾಲಾಗಿ ಹೋಗಿದ್ರು. ಯಾವಾಗ ಗ್ರಾಮಸ್ಥರ ಸಿಟ್ಟು ಹೆಚ್ಚಾಯ್ತೋ ವೇದಿಕೆ ಮೇಲಿದ್ದ ಕಾರ್ಯಕರ್ತರೊಬ್ರು ಶಾಸಕರ ಕೈಯಲ್ಲಿದ್ದ ಮೈಕ್ ಕಸಿದೇ ಬಿಟ್ರು. ಗ್ರಾಮಸ್ಥರ ರೋಷಾವೇಶಕ್ಕೆ ಶಾಸಕ ರಾಮಣ್ಣ ಲಮಾಣಿ ಥಂಡಾ ಹೊಡೆದಿದ್ರು.

ಹೌದು, ಇದು ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಸುಗನಹಳ್ಳಿ ಗ್ರಾಮದಲ್ಲಿ, ಶಾಸಕ ರಾಮಣ್ಣ ಲಮಾಣಿಗೆ ಗ್ರಾಮಸ್ಥರು ತರಾಟೆ ತೆಗೆದುಕೊಂಡಿದ್ದ ಪರಿಯಿದು. ನಿನ್ನೆ ಆಲದಮ್ಮನ ಕೆರೆ ಭೂಮಿಪೂಜೆ ಕಾರ್ಯಕ್ರಮಕ್ಕೆ ಅಂತ ಶಾಸಕ ರಾಮಣ್ಣ ಲಮಾಣಿ ಆಗಮಿಸಿದ್ರು. ಈ ವೇಳೆ ಶಾಸಕ ರಾಮಣ್ಣ ಲಮಾಣಿ ಭಾಷಣ ಆರಂಭಿಸ್ತಿದ್ದಂತೆ ಗ್ರಾಮಸ್ಥರು, ಕೆರೆ ಬೇಡ, ರಸ್ತೆ ಮಾಡಿಕೊಡಿ ಅಂತ ಶಾಸಕರನ್ನು ತರಾಟೆಗೆ ತೆಗೆದುಕೊಂಡಿದ್ರು.

ಇದನ್ನೂ ಓದಿ: ಕೊನೆಗೂ 10 ವರ್ಷಗಳ ಬಳಿಕ ಡುಂ ಟಕ ಡುಂ.. ಕನ್ಯೆಯನ್ನೇ ಕೊಡದ ಊರಿಗೆ ಇದೀಗ ಶಾದಿ ಭಾಗ್ಯ

ಹೀಗೆ ಗ್ರಾಮಸ್ಥರು ಕ್ಲಾಸ್ ತೆಗೆದುಕೊಳ್ಳಲು ಕಾರಣ ರಸ್ತೆ ಅಭಿವೃದ್ಧಿಯಾಗದೇ ಇರೋದು. ಹೌದು, ಶಾಸಕ ರಾಮಣ್ಣ ಲಮಾಣಿ ಚುನಾವಣೆಗೆ ಆಯ್ಕೆಯಾದ ಒಂದು ತಿಂಗಳಲ್ಲಿ ಗ್ರಾಮಕ್ಕೆ ರಸ್ತೆ ಮಾಡಿಸಿಕೊಡ್ತಿನಿ ಅಂತ ಭರವಸೆ ನೀಡಿದ್ರು. ಆದ್ರೆ, ಚುನಾವಣೆ ಆಗಿ 3 ವರ್ಷಗಳೇ ಕಳೆದ್ರು, ಇನ್ನೂ ಸುಗನಹಳ್ಳಿ-ವಡವಿ ರಸ್ತೆ ಮಾತ್ರ ಅಭಿವೃದ್ಧಿಯಾಗಿಲ್ಲ. ಗ್ರಾಮಸ್ಥರು ಹತ್ತಾರು ಬಾರಿ ಶಾಸಕರ ಮನೆಗೆ ಹೋಗಿ ಮನವಿ ಮಾಡಿದ್ರು, ಯಾವುದೇ ಪ್ರಯೋಜನವಾಗಿರಲಿಲ್ಲ. ಅದಲ್ದೇ, ಚುನಾವಣೆ ಬಳಿಕ ಶಾಸಕರು ಕೂಡ ಗ್ರಾಮದತ್ತ ಸುಳಿದೇ ಇರಲಿಲ್ಲ. ಹೀಗಾಗಿ, ಕೆರೆ ಭೂಮಿ ಪೂಜೆಗೆ ಅಂತ ಗ್ರಾಮಕ್ಕೆ ಬಂದಿದ್ದ ಶಾಸಕರಿಗೆ ಗ್ರಾಮಸ್ಥರು ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ.

ಒಟ್ನಲ್ಲಿ, ಮತದಾರರನ್ನು ಯಾಮಾರಿಸಿ ಮತ ಪಡೆದು ಗ್ರಾಮದ ಅಭಿವೃದ್ಧಿ ಮಾಡದ ಶಾಸಕನಿಗೆ ಗ್ರಾಮಸ್ಥರು ಸರಿಯಾಗಿಯೇ ಮಂಗಳಾರತಿ ಮಾಡಿದ್ದಾರೆ. ಹಳ್ಳಿ ಜನ್ರು ಮನಸ್ಸು ಮಾಡಿದ್ರೆ ವಿಧಾನಸೌಧಕ್ಕೂ ಕಳಿಸ್ತೀವಿ. ತಿರುಗಿಬಿದ್ರೆ ಮನೆಗೂ ಕಳಿಸ್ತೀವಿ ಅನ್ನೋ ಸಂದೇಶವನ್ನ ಸುಗನಹಳ್ಳಿ ಗ್ರಾಮಸ್ಥರು ಸಾರಿ ಹೇಳಿದ್ದಾರೆ.

ಸುರೇಶ ಕಡ್ಲಿಮಟ್ಟಿ, ನ್ಯೂಸ್​ಫಸ್ಟ್

Source: newsfirstlive.com Source link