ಅಕ್ರಮವಾಗಿ ಶ್ರೀಗಂಧ ಮರದ ತುಂಡುಗಳನ್ನು ಸಾಗಿಸ್ತಿದ್ದ ಐವರು ಆರೋಪಿಗಳು ಅಂದರ್​

ಅಕ್ರಮವಾಗಿ ಶ್ರೀಗಂಧ ಮರದ ತುಂಡುಗಳನ್ನು ಸಾಗಿಸ್ತಿದ್ದ ಐವರು ಆರೋಪಿಗಳು ಅಂದರ್​

ಬೆಂಗಳೂರು: ಅಕ್ರಮವಾಗಿ ಶ್ರೀಗಂಧ ಮರದ ತುಂಡುಗಳನ್ನು ಸಾಗಿಸ್ತಿದ್ದ ಆರೋಪಿಗಳನ್ನ ಗಂಗಮ್ಮ ಗುಡಿ ಠಾಣೆ ಪೊಲೀಸರು ಬಂಧಿಸಿದ್ದು, ಮೂವರು ಅಂತರಾಜ್ಯ ಆರೋಪಿಗಳು ಸೇರಿ ಒಟ್ಟು ಐವರನ್ನು ಪೊಲೀಸರು ಅರೆಸ್ಟ್​ ಮಾಡಿದ್ದಾರೆ.

ಬಂಧಿತರಿಂದ 125 ಕೆ.ಜಿ ತೂಕದ ಶ್ರೀಗಂಧ ಮರದ ತುಂಡುಗಳನ್ನು ಜಪ್ತಿ ಮಾಡಲಾಗಿದ್ದು, ವ್ಯಾಗನಾರ್ ಕಾರಿನಲ್ಲಿ ಶ್ರೀಗಂಧ ಮರದ ತುಂಡುಗಳನ್ನ ಸಾಗಿಸ್ತಿದ್ದ ವೇಳೆ ಖಚಿತ ಮಾಹಿತಿ ಮೇರೆಗೆ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಗಂಗಮ್ಮಗುಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ನದಿ ಪಕ್ಕದಲ್ಲಿ ನಡೆದು ಹೋಗುವಾಗ ಕಾಲು ಜಾರಿ ಬಿದ್ದ ಮಗು.. ರಕ್ಷಿಸಲು ಹೋದ ತಾಯಿಯೂ ಸಾವು

Source: newsfirstlive.com Source link