ಅಪಾಯವನ್ನು ಲೆಕ್ಕಿಸದೇ ಭೂ ಕುಸಿತ ಸ್ಥಳದಲ್ಲಿ ಸೆಲ್ಫಿ ಕ್ಲಿಕ್ಕಿಸಲು ಮುಗಿಬೀಳುತ್ತಿರುವ ಪ್ರವಾಸಿಗರು; ಎಲ್ಲಿ ಗೊತ್ತಾ?

ಅಪಾಯವನ್ನು ಲೆಕ್ಕಿಸದೇ ಭೂ ಕುಸಿತ ಸ್ಥಳದಲ್ಲಿ ಸೆಲ್ಫಿ ಕ್ಲಿಕ್ಕಿಸಲು ಮುಗಿಬೀಳುತ್ತಿರುವ ಪ್ರವಾಸಿಗರು; ಎಲ್ಲಿ ಗೊತ್ತಾ?

ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ ತಿಂಗಳು ಮಳೆಯಾಗಿ ಭಾರೀ ಅವಾಂತರ ಸೃಷ್ಟಿಯಾಗಿತ್ತು. ಭೂ ಕುಸಿದು ಇಡೀ ಜಿಲ್ಲೆ ಜನರನ್ನೇ ಬೆಚ್ಚಿ ಬೀಳಿಸಿತ್ತು. ಆದ್ರೀಗ ಭೂ ಕುಸಿತವಾದ ಸ್ಥಳವೇ ಪ್ರವಾಸಿಗರ ಆಕರ್ಷಣೆಯ ತಾಣವಾಗಿ ಮಾರ್ಪಟ್ಟಿದೆ.

ಹೌದು. ಕಳೆದ ತಿಂಗಳು ಸುರಿದ ಧಾರಾಕಾರ ಮಳೆಗೆ ಕಳಚೆ ಗ್ರಾಮದ ತಳಕೇಬೈಲ್ ಪ್ರದೇಶದಲ್ಲಿ ಭೂಮಿ ಕುಸಿದು ಗ್ರಾಮಸ್ಥರಿಗೆ ಓಡಾಡಲು ರಸ್ತೆ ಸಂಪರ್ಕವೇ ಇಲ್ಲದಂತಾಗಿತ್ತು. ಭಾರೀ ಪ್ರಮಾಣದಲ್ಲಿ ಗುಡ್ಡ ಕುಸಿತ ಉಂಟಾದ ಪರಿಣಾಮ ಎಕರೆಗಟ್ಟಲೇ ಪ್ರದೇಶ ಪ್ರಪಾತದಂತೆ ಬದಲಾಗಿತ್ತು. ಅಲ್ಲದೇ ಸಂಪರ್ಕ ರಸ್ತೆಯಿದ್ದ ಪ್ರದೇಶದಲ್ಲೇ ಕುಸಿತ ಉಂಟಾಗಿದ್ದು ಜಿಲ್ಲೆಯ ಜನತೆಯನ್ನ ಬೆಚ್ಚಿ ಬೀಳಿಸಿತ್ತು.

ಇದೀಗ ಗ್ರಾಮಕ್ಕೆ ತಾತ್ಕಾಲಿಕವಾಗಿ ಸಂಪರ್ಕ ರಸ್ತೆಯನ್ನ ನಿರ್ಮಾಣ ಮಾಡಲಾಗಿದ್ದು ಜನರು ಓಡಾಡಲು ಅನುಕೂಲವಾಗಿದೆ. ಇದರಲ್ಲಿ ಇನ್ನೊಂದು ಪ್ರಮುಖ ವಿಷಯ ಗಮನಿಸಬೇಕೆಂದ್ರೆ ಕಳಚೆ ಗ್ರಾಮದಲ್ಲಿ ಭೂ ಕುಸಿತವಾದ ಜಾಗವನ್ನ ನೋಡಲು ನಿತ್ಯ ನೂರಾರು ಮಂದಿ ಬರ್ತಿದ್ದಾರೆ. ಅದು ಪ್ರವಾಸಿಗರ ಆಕರ್ಷಣೆಯ ತಾಣವಾಗಿ ಬದಲಾಗಿದೆ.

ಈ ಭಾಗದಲ್ಲಿ ಪ್ರತಿವರ್ಷವೂ ಸಹ ಭಾರೀ ಮಳೆಯಾಗುತ್ತೆ. ಸತತವಾಗಿ ಸುರಿಯುತ್ತಿರುವ ಮಳೆಗೆ ಜನರು ಹೈರಾಣಾಗಿದ್ದು, ಕಳಚೆ ಗ್ರಾಮದಲ್ಲಿ ಸಂಭವಿಸಿದ ಭೂಕುಸಿತ ಹಲವಾರು ಎಕರೆ ಪ್ರದೇಶವನ್ನ ಒಳಗೊಂಡಿದ್ದು ಮತ್ತೆ ಸರಿಪಡಿಸಲಾಗದಷ್ಟು ಭೀಕರವಾಗಿದೆ.

ಇದನ್ನೂ ಓದಿ: ಶಿರಸಿಯ ದಟ್ಟಾರಣ್ಯದಲ್ಲಿ ಭಯಾನಕ ಭೂಕುಸಿತ; ವನ್ಯ ಸಂಪತ್ತಿಗೆ ಭಾರೀ ಹಾನಿ

ಇನ್ನು ಭೂಕುಸಿತ ಉಂಟಾದ ಸ್ಥಳದಲ್ಲಿ ಅಡಕೆ ಬೆಳೆ ನಾಶವಾಗಿದ್ದು ಮನೆಗಳಿಗೂ ಸಹ ಹಾನಿ ಉಂಟಾಗಿದೆ. ಸದ್ಯ ಈ ಗ್ರಾಮಕ್ಕೆ ತಾತ್ಕಾಲಿಕವಾಗಿ ರಸ್ತೆ ನಿರ್ಮಾಣ ಮಾಡಲಾಗಿದೆ. ಆದ್ರೆ ಪ್ರತಿನಿತ್ಯ ಸಾಕಷ್ಟು ಮಂದಿ ಭೂಕುಸಿತ ಪ್ರದೇಶ ವೀಕ್ಷಣೆಗೆಂದೇ ಆಗಮಿಸುತ್ತಿದ್ದಾರೆ. ಆದರೆ ಈ ಪ್ರದೇಶದಲ್ಲಿ ಮತ್ತೆ ಭೂಕುಸಿತ ಉಂಟಾಗುವ ಆತಂಕ ಇದ್ದು ಮತ್ತೆ ಅಪಾಯ ಸಂಭವಿಸುವ ಮುನ್ನ ಜನರು ಎಚ್ಚೆತ್ತುಕೊಳ್ಳಬೇಕಿದೆ ಅಂತಾರೇ ಗ್ರಾಮಸ್ಥರು…

ಒಟ್ನಲ್ಲಿ ಭೂ ಕುಸಿತವಾದ ಸ್ಥಳವಂತೂ ಪ್ರವಾಸಿಗರಿಗೆ ಆಕರ್ಷಣೀಯವಾಗಿದೆ. ನಿತ್ಯ ನೂರಾರು ಮಂದಿ ಅದರ ವೀಕ್ಷಣೆಗೆ ಆಗಮಿಸುತ್ತಿದ್ದು ಕೆಲವರು ಸೆಲ್ಫೀ ಸಹ ಕ್ಲಿಕ್ಕಿಸಿಕೊಳ್ಳಲು ಮುಂದಾಗಿದ್ದು, ಅಪಾಯಕಾರಿಯಾಗಿದೆ. ಇನ್ನಾದ್ರೂ ಇದಕ್ಕೆ ಸಂಬಂಧಪಟ್ಟವರು ಎಚ್ಚೆತ್ತು ಈ ಹಾಳಾದ ರಸ್ತೆಯನ್ನ ಸಂಪೂರ್ಣವಾಗಿ ಸರಿ ಮಾಡಿ ಶಾಶ್ವತ ಪರಿಹಾರ ಕಲ್ಪಿಸಿಕೊಡುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ..

ಸಂದೀಪ್ ಸಾಗರ್, ನ್ಯೂಸ್​​ಫಸ್ಟ್

Source: newsfirstlive.com Source link