ಮೂರು ವರ್ಷಗಳಲ್ಲಿ ಗಣಿತ ಶಿಕ್ಷಕನೊಬ್ಬ ತೆಗೆದುಕೊಂಡಿದ್ದು 769 ದಿನ ರಜೆ.. ಈತನ ಕಥೆಯೇ ರೋಚಕ

ಮೂರು ವರ್ಷಗಳಲ್ಲಿ ಗಣಿತ ಶಿಕ್ಷಕನೊಬ್ಬ ತೆಗೆದುಕೊಂಡಿದ್ದು 769 ದಿನ ರಜೆ.. ಈತನ ಕಥೆಯೇ ರೋಚಕ

ಇಟಾಲಿಯನ್ ಟೀಚರ್ ಓರ್ವ ಮೂರು ವರ್ಷಗಳಲ್ಲಿ 769 ದಿನ ರಜೆ ಹಾಕಿರುವ ಘಟನೆ ಬೆಳಕಿಗೆ ಬಂದಿದೆ. ತನಗೆ ಆರೋಗ್ಯ ಹದಗೆಟ್ಟಿದೆ.. ಮಕ್ಕಳನ್ನು ನೋಡಿಕೊಳ್ಳಬೇಕು ಎಂದೆಲ್ಲ ಕಥೆ ಕಟ್ಟಿದ ಶಿಕ್ಷಕ ಬರೋಬ್ಬರಿ 769 ದಿನಗಳ ಕಾಲ ರಜೆ ಹಾಕಿ ವಂಚನೆ ಮಾಡಿರುವುದನ್ನು ಅಲ್ಲಿನ ಪೊಲೀಸರು ಪತ್ತೆಹಚ್ಚಿದ್ದಾರೆ.

ಮೂರು ವರ್ಷಗಳಲ್ಲಿ ಒಟ್ಟು 1095 ದಿನಗಳಿರುತ್ತವೆ. ಅದ್ರಲ್ಲಿ 312 ದಿನಗಳು ಶನಿವಾರ ಮತ್ತು ಭಾನುವಾರದ ರಜೆಗಳನ್ನು ಹೊಂದಿವೆ,. ಜೊತೆಗೆ ನೂರಾರು ಸಾರ್ವಜನಿಕ ರಜೆಗಳೂ ಇವೆ. ಇವುಗಳ ಹೊರತಾಗಿಯೂ ಆ ಶಿಕ್ಷಕ ಬರೋಬ್ಬರಿ 769 ದಿನಗಳ ಕಾಲ ರಜೆ ಹಾಕಿದ್ದಾನೆ. ಹೀಗೆ ರಜೆ ಹಾಕಿ ಶಿಕ್ಷಕ ಬೇರೆ ಬೇರೆ ಕೆಲಸಗಳನ್ನ ಮಾಡುತ್ತಾ 84 ಲಕ್ಷ ಹಣ ದುಡಿದಿದ್ದಾನಂತೆ.

ಗಣಿತದ ಶಿಕ್ಷಕನಾದ ಆತ ಇನ್​ಸ್ಟಿಟ್ಯೂಟೋ ಟೆಕ್ನಿಕೊದಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದನಂತೆ. ತನ್ನ ಇನ್​ಸ್ಟಿಟ್ಯೂಟ್​ ಆಡಳಿತಕ್ಕೆ ವೈದ್ಯರಿಂದ ಸಹಿ ಮಾಡಿಸಿಕೊಂಡು ಬಂದ ರಿಪೋರ್ಟ್ ತೋರಿಸಿ ನನಗೆ ಆರೋಗ್ಯ ಸರಿ ಇಲ್ಲ ಎಂದು ರಜೆ ಹಾಕ್ತಿದ್ದನಂತೆ. ಹೀಗೆ ರಜೆ ಹಾಕಿದವ್ನು ಈ ಸಮಯದಲ್ಲಿ ಇಡೀ ದೇಶವನ್ನೇ ಸುತ್ತಿ ಬಂದಿದ್ದಾನಂತೆ. ಅಲ್ಲದೇ ಎರಡೆರಡು ಕಡೆ ಕೆಲಸ ಮಾಡಿ 84 ಲಕ್ಷ ಹಣವನ್ನೂ ಸಂಪಾದಿಸಿದ್ದಾನೆ.

ಅಲ್ಲದೇ ಆರೋಗ್ಯ ಕೆಟ್ಟಿದೆ ಎಂದು ಹೇಳಿ ಹಾಗೂ ಮಕ್ಕಳ ಆರೈಕೆ ಹೆಸರಿನಲ್ಲೂ ಸರ್ಕಾರದಿಂದ 11 ಲಕ್ಷ ಹಣವನ್ನೂ ಪಡೆದುಕೊಂಡಿದ್ದು ಇದೀಗ ಪೊಲೀಸರ ವಶವಾಗಿದ್ದಾನೆ. ಅಲ್ಲಿನ ಕೋರ್ಟ್​ ಶಿಕ್ಷಕ ಈ ರಜಾದಿನಗಳಲ್ಲಿ ಸಂಪಾದಿಸಿದ ಹಣ ಮತ್ತು ಸರ್ಕಾರದಿಂದ ಪಡೆದುಕೊಂಡ ಹಣವನ್ನು ಸೀಜ್ ಮಾಡಿ ಆದೇಶಿಸಿದೆ.

Source: newsfirstlive.com Source link