ಇಂದು ದೇಶಾದ್ಯಂತ ನೀಟ್ ಪರೀಕ್ಷೆ; ವಿದ್ಯಾರ್ಥಿಗಳಿಗೆ ಕೋವಿಡ್​​ ಲಸಿಕೆ ಕಡ್ಡಾಯ

ಇಂದು ದೇಶಾದ್ಯಂತ ನೀಟ್ ಪರೀಕ್ಷೆ; ವಿದ್ಯಾರ್ಥಿಗಳಿಗೆ ಕೋವಿಡ್​​ ಲಸಿಕೆ ಕಡ್ಡಾಯ

ದೇಶಾದ್ಯಂತ ಇಂದು 2020-21ನೇ ಸಾಲಿನ ನೀಟ್ ಪರೀಕ್ಷೆ ನಡೆಯಲಿದೆ. ವೈದ್ಯಕೀಯ ಮತ್ತು ದಂತ ವೈದ್ಯಕೀಯ ಹಾಗೂ ಆಯುಷ್ ಕೋರ್ಸುಗಳಿಗೆ ನಡೆಯುವ ಪರೀಕ್ಷೆ ಇದಾಗಿದೆ.

ಇಂದು ಮಧ್ಯಾಹ್ನ 2 ಗಂಟೆಯಿಂದ ಸಂಜೆ 5ರವರೆಗೆ ಪರೀಕ್ಷೆ ನಡೆಯಲಿದೆ. ಒಟ್ಟು 201 ಪ್ರಮುಖ ನಗರಗಳಲ್ಲಿ ಪರೀಕ್ಷೆ ಇರಲಿದೆ. ಕರ್ನಾಟಕದಲ್ಲಿ ಒಟ್ಟು 9 ನಗರಗಳಲ್ಲಿ ನೀಟ್ ಪರೀಕ್ಷೆ ನಡೆಯಲಿದೆ.

ಬೆಂಗಳೂರು, ಬೆಳಗಾವಿ, ದಾವಣಗೆರೆ, ಧಾರವಾಡ, ಗುಲ್ಬರ್ಗಾ, ಹುಬ್ಬಳ್ಳಿ, ಮೈಸೂರು, ಮಂಗಳೂರು ಮತ್ತು ಉಡುಪಿ ಸೇರಿದಂತೆ ನಡೆಯಲಿರುವ ಈ ನೀಟ್ ಪರೀಕ್ಷೆಗೆ 16 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ನೊಂದಣಿ ಮಾಡಿಸಿದ್ದಾರೆ.

ಇದನ್ನೂ ಓದಿ: ‘ನನಗೀಗಲೇ ಇಬ್ಬರು ಮಕ್ಕಳಿದ್ದಾರೆ’.. ನನ್ನ ಪತಿಯನ್ನ ವಾಪಸ್​ ಆಫೀಸ್​​ಗೆ ಕರೆಸಿಕೊಳ್ಳಿ ಎಂದು ಗೋಗರೆದ ಮಹಿಳೆ

ಒಟ್ಟು 180 ಪ್ರಶ್ನೆಗಳಿದ್ದು, ಪ್ರತೀ ಪ್ರಶ್ನೆಗೆ 4 ಅಂಕಗಳಂತೆ, ಒಟ್ಟು 720 ಅಂಕಗಳಿಗೆ ಪರೀಕ್ಷೆ ನಡೆಯಲಿದೆ. ಪ್ರತೀ ಪ್ರಶ್ನೆಯ ತಪ್ಪು ಉತ್ತರಕ್ಕೆ ಒಂದು ನೆಗೆಟಿವ್ ಅಂಕ ಕಡಿತವಾಗಲಿದೆ. 3 ಗಂಟೆಗಳ ಕಾಲ ನಡೆಯಲಿರುವ ಪರೀಕ್ಷೆ, ಒಟ್ಟು 13 ಭಾಷೆಗಳಲ್ಲಿ ಇರಲಿದೆ. ಇನ್ನೂ ಪರೀಕ್ಷೆ ಬರೆಯಲು ಕೋವಿಡ್​​ ಲಸಿಕೆ ಕಡ್ಡಾಯ ಮಾಡಲಾಗಿದೆ.

Source: newsfirstlive.com Source link